2ನೇ ವಿವಾಹ ವಿಚ್ಛೇದನಕ್ಕೆ ಮುಂದಾದ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ!?
ಸದ್ಯಕ್ಕೆ ಸಿನಿಮಾ ರಂಗದಲ್ಲಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಸಿನಿಮಾ ಸಮಾಚಾರ ಅಂದರೆ ಅದು ನಟ ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಧನುಷ್ ವಿಚ್ಛೇದನದ ವಿಚಾರ. ಈ ಜೋಡಿ ಬೇರೆ ಆಗಿರುವುದು ದೊಡ್ಡ ಶಾಕಿಂಗ್ ಸುದ್ದಿ. ಈ ಜೋಡಿ ದೂರಾಗುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಈಗ ವಿಚ್ಛೇದನ ಪಡೆದು ಸಿನಿಮಾ ಮಂದಿ ಮತ್ತು ಅಭಿಮಾನಿಗಳಿಗೆ ಶಾಕ್ ನೀಡಿದೆ ಈ ಜೋಡಿ.
ಇದರ ಬೆನ್ನಲ್ಲೇ ಮತ್ತೊಂದು ಸಿನಿಮಾ ಜೋಡಿ ದೂರ ಆಗುತ್ತಿರುವ ಮಾತುಗಳು ಕೇಳಿ ಬರುತ್ತವೆ. ರಜನಿಕಾಂತ್ ಮಗಳ ಬಳಿಕ ವಿಚ್ಛೇದನದ ಹೊಗೆ ಚಿರಂಜೀವಿ ಪುತ್ರಿಯ ಸುತ್ತ ಆವರಿಸಿಕೊಂಡಿದೆ. ಚಿರಂಜೀವಿ ಮಗಳು ಶ್ರೀಜಾ ಅವರು ಕೂಡ ತಮ್ಮ ಪತಿ ಇಂದ ದೂರಾ ಆಗಿದ್ದಾರೆ ಎನ್ನಲಾಗುತ್ತಿದೆ.
ಇದ್ದಕ್ಕಿದ್ದ ಹಾಗೆ ಚಿರಂಜೀವಿ ಮಗಳ ವಿಚ್ಛೇದನದ ವಿಚಾರ ಸದ್ದು ಮಾಡಲು ಕಾರಣ ಸ್ವತಃ ಶ್ರೀಜಾ ಅವರೇ. ಯಾಕೆಂದರೆ ಆಕೆ ತಮ್ಮ ಸಾಮಾಜಿಕ ಜಾಲತಾಣದ ಕಥೆಯಲ್ಲಿ ಪತಿಯ ಹೆಸರನ್ನು ಕೈ ಬಿಟ್ಟಿದ್ದಾರೆ. ನಟಿ ಸಮಂತಾ ಕೂಡ ಹೀಗೆ ಪತಿಯ ಹೆಸರನ್ನು ಕೈ ಬಿಟ್ಟು ಬಳಿಕ ವಿಚ್ಛೇದನವನ್ನು ಪ್ರಕಟ ಮಾಡಿದ್ದರು.

ಚಿರಂಜೀವಿ ಮಗಳ ಬಾಳಲ್ಲಿ ಬಿರುಗಾಳಿ?
ರಜನಿಕಾಂತ್ ಪುತ್ರಿ ಐಶ್ವರ್ಯ ಮತ್ತು ಧನುಷ್ ತಮ್ಮ 18 ವರ್ಷದ ದಾಂಪತ್ಯಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ. ಇಬ್ಬರೂ ಪರಸ್ಪರ ಬೇರೆ ಆಗಿದ್ದಾರೆ. ಈ ವಿಚಾರವನ್ನು ತಾನೇ ಹೇಳಿಕೊಂಡಿದ್ದಾರೆ. ಇವರ ವಿಚ್ಛೇದನದ ಬಳಿಕ ಚಿರಂಜೀವಿ ಪುತ್ರಿ ಶ್ರೀಜಾ ಅವರ ದಾಂಪತ್ಯದ ಬದುಕಲ್ಲಿಯೂ ಬಿರುಗಾಳಿ ಬೀಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಪತಿಯ ಹೆಸರು ಕಿತ್ತು ಹಾಕಿದ ಶ್ರೀಜಾ ಕೋನಿಡೇಲಾ!
ಶ್ರೀಜಾ ಅವರು ಇದ್ದಕ್ಕಿದ್ದ ಹಾಗೆ ತಮ್ಮ ಪತಿಯ ಹೆಸರನ್ನು ಇನ್‌ಸ್ಟಾಗ್ರಾಮ್ ಖಾತೆ ಇಂದ ತೆಗೆದು ಹಾಕಿದ್ದಾರೆ. ಈಗ ಅವರ ಹೆಸರು 'ಶ್ರೀಜಾ ಕೋನಿಡೇಲಾ' ಎಂದು ಬದಲಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರ ಹೆಸರು 'ಶ್ರೀಜಾ ಕಲ್ಯಾಣ್' ಎಂದು ಇತ್ತು. ಮದುವೆಯ ಬಳಿಕ ಪತಿಯ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಶ್ರೀಜಾ ಸೇರಿಸಿಕೊಂಡಿದ್ದರು. ಆದರೆ ಈಗ ಪತಿಯ ಹೆಸರನ್ನು ಕಿತ್ತು ಹಾಕಿ ಅನುಮಾನಕ್ಕೆ ಕಾರಣ ಆಗಿದ್ದಾರೆ. ಹೆಸರು ಬದಲಾಯಿಸಿದ್ದು ಮಾತ್ರ ಅಲ್ಲ ಆಕೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ಪತಿಯನ್ನು ಅನ್‌ಫಾಲೋ ಮಾಡಿದ್ದಾಳೆ.

ಮೊದಲ ಪತಿ ಇಂದ 2011ರಲ್ಲಿ ದೂರಗಿದ್ದ ಶ್ರೀಜಾ!
ಇನ್ನು ಶ್ರೀಜಾ ಕಲ್ಯಾನ್ ಅವರ ಜೊತೆಗೆ ಆಗಿರುವುದು ಎರಡನೇ ಮದುವೆ. ಶ್ರೀಜಾ ಕಲ್ಯಾಣ್‌ಗೂ ಮೊದಲು 19 ವಯಸ್ಸಿನಲ್ಲಿ ಸಿರಿಶ್ ಭಾರದ್ವಾಜ್ ಎಂಬುವರನ್ನು ವಿವಾಹ ಆಗಿದ್ದರು. ನಂತರ ಅತ್ತೆ ಮನೆಯಲ್ಲಿ ಹಣಕ್ಕಾಗಿ ಕಾಟ ಕೊಡುತ್ತಿದ್ದಾರೆ ಎಂದು ಅವರ ಮೇಲೆ ದೂರು ನೀಡಿ, 2011ರಲ್ಲಿ ಮೊದಲ ಪತಿಯಿಂದ ದೂರಾಗಿದ್ದಳು ಶ್ರೀಜಾ. ಮೊದಲ ಪತಿಯೊಂದಿಗೆ ಶ್ರೀಜಾಗೆ ಒಂದು ಮಗು ಕೂಡ ಇದೆ. ನಂತರ 2016ರಲ್ಲಿ ಶ್ರೀಜಾ ಕಲ್ಯಾಣ್ ದೇವ್ ಅವರ ಜೊತೆಗೆ ಮದುವೆ ಆದರು.

ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡದ ಚಿರು ಕುಟುಂಬ!
ಶ್ರೀಜಾ ಮತ್ತು ಕಲ್ಯಾಣ್ ದೇವ್ ಅವರು ವಿಚ್ಛೇದನದ ಬಗ್ಗೆ ಚಿರಂಜೀವಿ ಕುಟುಂಬ ಇನ್ನೂ ಮಾತನಾಡಿಲ್ಲ. ಹಾಗಾಗಿ ಸದ್ಯಕ್ಕೆ ಕೇಲವ ಗಾಳಿ ಸುದ್ದಿ ಆಗಿ ಉಳಿದೆ. ಆದರೆ ಚಿರು ಕುಟುಂಬದ ನಡೆಯನ್ನು ಸೂಕ್ಷ್ಮವಾಗಿ ನೋಡಿದರೆ ಬಹುಶಃ ಸತಿ, ಪತಿ ದೂರ ಆಗಿರುವ ಬಗ್ಗೆ ಸುಳಿವು ಸಿಗುತ್ತವೆ. ಅಳಿಯನ ಚಿತ್ರ ಸೂಪರ್ ಮಚ್ಚಿ ರಿಲೀಸ್ ಆಗಿ ಫ್ಲಾಪ್ ಕೂಡ ಆಯ್ತು. ಆದರೆ ಸಿನಿಮಾ ಬಗ್ಗೆ ಶ್ರೀಜಾ ಆಗಲಿ, ರಾಮ್ ಚರಣ್ ಆಗಲಿ, ಚಿರಂಜೀವಿ ಆಗಲಿ ಯಾರೂ ಕೂಡ ಮಾತನಾಡಿಲ್ಲ. ಯಾರೂ ಕೂಡ ಚಿತ್ರದ ಪ್ರಚಾರಕ್ಕೆ ಸಪೋರ್ಟ್ ಮಾಡಿಲ್ಲ. ಇಂತಹ ಸಂಶಯಗಳು ಇವರ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಹೇಳುತ್ತಿದೆ.


Click it and Unblock the Notifications











