For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್‌ಗೆ ಶಾಕ್ ನೀಡಿದ ಚಿರಂಜೀವಿ: ಕ್ರಿಸ್ಮಸ್ ರೇಸ್‌ನಲ್ಲಿ ಆಚಾರ್ಯ?

  By ಫಿಲ್ಮಿಬೀಟ್ ಡೆಸ್ಕ್
  |

  ಸ್ಟಾರ್ ಕಲಾವಿದರ ಸಿನಿಮಾ ಬಿಡುಗಡೆ ದಿನಾಂಕ ದೊಡ್ಡ ತಲೆನೋವಾಗಿದೆ. ಬಿಗ್ ಬಜೆಟ್ ನ ಪ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದು, ಯಾವಾಗ ಅಭಿಮಾನಿಗಳ ಮುಂದೆ ಬರಬೇಕೆಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿರುವ ಕಾರಣ ಎಲ್ಲಾ ಭಾಷೆಯ ಸಿನಿಮಾಗಳು ತುಂಬಾ ಲೆಕ್ಕಾಚಾರ ಮಾಡಿ ಸಿನಿಮಾ ಬಿಡುಗಡೆ ಮಾಡಬೇಕಾದ ಅನಿರ್ವಾಯತೆ ಬಂದಿದೆ.

  ಈಗಾಗಲೇ ದೀಪಾವಳಿ, ಕ್ರಿಸ್ಮಸ್ ಮತ್ತು ಸಂಕ್ರಾಂತಿಗೆ ಅನೇಕ ಸಿನಿಮಾಗಳು ಬಿಡುಗಡೆ ಸಜ್ಜಾಗಿ ನಿಂತಿವೆ. ತೆಲುಗಿನಲ್ಲಂತೂ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಸಂಕ್ರಾಂತಿಗೆ ಬರುವುದಾಗಿ ಘೋಷಣೆ ಮಾಡಿದ್ದಾರೆ. ಮಹೇಶ್ ಬಾಬು ನಟನೆಯ ಸರ್ಕಾರು ವಾರಿ ಪಾಟ, ಪ್ರಭಾಸ್ ನಟನೆಯ ರಾಧೆ ಶ್ಯಾಮ್, ಪವನ್ ಕಲ್ಯಾಣ್ ನಟನೆಯ ಭೀಮಲ ನಾಯಕ್ ಸಿನಿಮಾಗಳ ಜೊತೆಗೀಗ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಕೂಡ ಸಂಕ್ರಾಂತಿಗೆ ಬರುವುದಾಗಿ ಹೇಳಿಕೊಂಡಿದೆ. ಬಿಗ್ ಬಜೆಟ್ ನ ಬಿಗ್ ಸ್ಟಾರ್ ಸಿನಿಮಾಗಳು ಒಮ್ಮೆಗೆ ಚಿತ್ರಮಂದಿರಕ್ಕೆ ಅಪ್ಪಳಿಸಲು ರೆಡಿಯಾಗಿರುವುದು ಬಾಕ್ಸ್ ಆಫೀಸ್ ದೊಡ್ಡ ವಾರ್ ಖಂಡಿತ ಎನ್ನುತ್ತಿದ್ದಾರೆ ಸಿನಿಪಂಡಿತರು.

  ಈ ನಡುವೆ ಈಗ ಮೆಗಾಸ್ಟಾರ್ ಚಿರಂಜೀವಿ ಈಗ ಅಲ್ಲು ಅರ್ಜುನ್ ಗೆ ದೊಡ್ಡ ಶಾಕ್ ನೀಡಿದ್ದಾರೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ ಪಾರ್ಟ್-1 ಈ ವರ್ಷದ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ಗೆ ಬರಲು ಸಿದ್ಧವಾಗಿದೆ. ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಪುಷ್ಪ ಸಿನಿಮಾ ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಆದರೀಗ ಚಿರಂಜೀವಿ ಕೂಡ ಕ್ರಿಸ್ಮಸ್ ಗೆ ಎಂಟ್ರಿಗೆ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ.

  ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾವನ್ನು ಕ್ರಿಸ್ಮಸ್ ಗೆ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಆಚಾರ್ಯ ಸಿನಿಮಾ ದೀಪಾವಳಿಗೆ ಬಿಡುಗಡೆ ಮಾಡುವ ಪ್ಲಾನ್ ಮಾಡಿತ್ತು ಚಿತ್ರತಂಡ. ಆದರೆ ಚಿತ್ರೀಕರಣ ತಡವಾದ ಕಾರಣ ಕ್ರಿಸ್ಮಸ್ ಗೆ ಬಿಡುಗಡೆ ಮಾಡಲು ನಿರ್ಧರಿಸಿದೆಯಂತೆ. ಆಚಾರ್ಯ ಎಂಟ್ರಿ ಈಗ ಅಲ್ಲು ಅರ್ಜುನ್ ಪುಷ್ಪ ಚಿತ್ರಕ್ಕೆ ದೊಡ್ಡ ತಲೆನೋವಾಗಿದೆ.

  ಆಚಾರ್ಯ ಕೂಡ ಸಂಕ್ರಾಂತಿ ಬಿಡುಗಡೆ ಮಾಡುವ ಯೋಚನೆಯಲ್ಲಿತ್ತು ಸಿನಿಮಾತಂಡ. ಆದರೆ ಸಂಕ್ರಾಂತಿ ರೇಸ್ ನಲ್ಲಿ ಸಾಲು ಸಾಲು ಸಿನಿಮಾಗಳಿವೆ. ಹಾಗಾಗಿ ಆಚಾರ್ಯ ಚಿತ್ರವನ್ನು ಕ್ರಿಸ್ಮಸ್ ಗೆ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆಯಂತೆ. ಈ ಬಗ್ಗೆ ಆಚಾರ್ಯ ತಂಡ ಮೈತ್ರಿ ಮೂವಿಸ್ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಒಂದು ವೇಳೆ ಆಚಾರ್ಯ ಸಿನಿಮಾ ಕ್ರಿಸ್ಮಸ್ ಗೆ ಎಂಟ್ರಿ ಕೊಟ್ಟರೆ ಪುಷ್ಪ ಚಿತ್ರದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.

  ಪುಷ್ಪ ಚಿತ್ರ ಮತ್ತೆ ಮುಂದಕ್ಕೆ ಹೋದರೆ ಬಿಡುಗಡೆ ದಿನಾಂಕ ಮತ್ತೆ ತಲೆನೋವಾಗಲಿದೆ. ಈಗಾಗಲೇ ಅನೇಕ ಸಿನಿಮಾಗಳ ಬಿಡುಗಡೆ ದಿನಾಂಕ ಲಾಕ್ ಆಗಿವೆ. ಈ ನಡುವೆ ಕನ್ನಡ ಕೆಜಿಎಫ್-2 ಏಪ್ರಿಲ್ ನಲ್ಲಿ ತೆರೆಗೆ ಬರುತ್ತಿದೆ, ಸಲಾರ್ ಸಿನಿಮಾ ಕೂಡ ರೇಸ್ ನಲ್ಲಿದೆ. ಹಾಗಾಗಿ ಕ್ರಿಸ್ಮಸ್ ನಲ್ಲಿ ಪುಷ್ಪ ಬಿಡುಗಡೆ ಆಗದಿದ್ದರೇ ಮುಂದಿನ ವರ್ಷ ಬೇಸಿಗೆ ಸಮಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  ಕೊರೊನಾ ಕಾರಣದಿಂದ ಸಿನಿಮಾಗಳ ಬಿಡುಗಡೆ ದಿನಾಂಕ ದೊಡ್ಡ ತಲೆನಾವಾಗಿದೆ. ದಕ್ಷಿಣ ಭಾರತದಲ್ಲಿ ಸಾಕಷ್ಟು ಬಹುನಿರೀಕ್ಷೆಯ ಸಿನಿಮಾಗಳು ಬಿಡುಗಡೆ ಪರದಾಡುತ್ತಿವೆ. ಈ ನಡುವೆ ಕೊರೊನಾ 3ನೇ ಅಲೆಯ ಆತಂಕ ಕೂಡ ಮನಮಾಡಿದೆ. ಒಂದು ವೇಳೆ 3ನೇ ಅಪ್ಪಳಿಸಿದರೇ ಮತ್ತೆ ಸಿನಿಮಾ ಬಿಡುಗಡೆ ಮೇಲೆ ದೊಡ್ಡ ಪರಿಣಾಮ ಬೀಳಲಿದೆ.

  English summary
  Megastar Chiranjeevi starrer Acharya movie likely to release on december in Christmas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X