ಮೆಗಾ ಕುಟುಂಬದಿಂದ ಮತ್ತೊಮ್ಮೆ ಸರ್ಪ್ರೈಸ್: ಶಂಕರ್ ಪ್ರಾಜೆಕ್ಟ್‌ ಮೇಲೆ ಕಣ್ಣು?

ಮೆಗಾ ಕುಟುಂಬ ಬಹಳ ಬ್ಯುಸಿಯಾಗಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ 'ಆಚಾರ್ಯ' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಕೊರಟಲಾ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆಚಾರ್ಯ ಮೇ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಬಂಡವಾಳ ಹಾಕಿದ್ದಾರೆ. ಜೊತೆಗೆ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

ಮತ್ತೊಂದೆಡೆ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ಸಿದ್ದವಾಗುತ್ತಿರುವ ಆರ್ ಆರ್ ಆರ್ ಚಿತ್ರದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಈ ಚಿತ್ರದಲ್ಲಿ ಮತ್ತೊಬ್ಬ ನಾಯಕ. ಅಕ್ಟೋಬರ್ 13 ರಂದು ಈ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಹೀಗೆ, ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿರುವ ಮೆಗಾ ಕುಟುಂಬದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

ಮತ್ತೊಮ್ಮೆ ಒಂದಾದ ಚಿರು-ಚರಣ್?

ಮತ್ತೊಮ್ಮೆ ಒಂದಾದ ಚಿರು-ಚರಣ್?

'ಮಗಧೀರ' ಸಿನಿಮಾದಲ್ಲಿ ಚಿರಂಜೀವಿ ಅತಿಥಿ ಪಾತ್ರ ನಿರ್ವಹಿಸಿದ್ದರು. ನಂತರ 'ಬ್ರೂಸ್‌ ಲೀ' ಚಿತ್ರದಲ್ಲಿ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದರು. ಇದೀಗ, ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ತೇಜ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಳಿಕ ಮತ್ತೊಮ್ಮೆ ಚಿರಂಜೀವಿ ಮತ್ತು ರಾಮ್ ಚರಣ್ ತೇಜ ಮತ್ತೊಮ್ಮೆ ಒಟ್ಟಿಗೆ ನಟಿಸಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

ಶಂಕರ್ ಪ್ರಾಜೆಕ್ಟ್‌ನಲ್ಲಿ ಚಿರಂಜೀವಿ

ಶಂಕರ್ ಪ್ರಾಜೆಕ್ಟ್‌ನಲ್ಲಿ ಚಿರಂಜೀವಿ

ಆರ್‌ಆರ್‌ಆರ್ ಸಿನಿಮಾದ ಬಳಿಕ ನಿರ್ದೇಶಕ ಶಂಕರ್ ಜೊತೆ ರಾಮ್ ಚರಣ್ ತೇಜ ಮುಂದಿನ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರ ಅದಾಗಲೇ ಅಧಿಕೃತವಾಗಿ ಘೋಷಣೆಯಾಗಿದೆ. ಹೊಸದಾಗಿ ವೈರಲ್ ಆಗಿರುವ ಸುದ್ದಿ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ಮೆಗಾಸ್ಟಾರ್ ಸಹ ಇರಲಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಇಲ್ಲ.

ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ

ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ

ಶಂಕರ್ ಮತ್ತು ರಾಮ್ ಚರಣ್ ಜೋಡಿಯಲ್ಲಿ ಸೆಟ್ಟೇರಿರುವ ಸಿನಿಮಾ ಪೊಲಿಟಿಕಲ್ ಥ್ರಿಲ್ಲರ್ ಆಗಿದೆ ಎಂದು ಹೇಳಲಾಗುತ್ತಿದೆ. ಮೆಗಾಪುತ್ರ ಐಎಎಸ್ ಅಧಿಕಾರಿ ಹಾಗೂ ಮುಖ್ಯಮಂತ್ರಿ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಪವರ್ ಫುಲ್ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ ಎನ್ನಲಾಗಿದೆ.

ಇಂಡಿಯನ್ 2 ಸಿನಿಮಾ ನಿಂತಿದೆ

ಇಂಡಿಯನ್ 2 ಸಿನಿಮಾ ನಿಂತಿದೆ

ಎಂಥಿರನ್, ಐ, 2.0 ಅಂತಹ ಸಿನಿಮಾಗಳನ್ನು ಮಾಡಿರುವ ಶಂಕರ್ ಕಮಲ್ ಹಾಸನ್ ಜೊತೆ ಇಂಡಿಯನ್ 2 ಚಿತ್ರ ಆರಂಭಿಸಿದ್ದರು. ಹಣಕಾಸಿನ ಸಮಸ್ಯೆಯಿಂದ ಈ ಚಿತ್ರ ನಿಂತು ಹೋಗಿದೆ. ಆ ಪ್ರಾಜೆಕ್ಟ್ ಪಕ್ಕಕ್ಕೆ ಇಟ್ಟಿರುವ ಶಂಕರ್, ರಾಮ್ ಚರಣ್ ಜೊತೆಗಿನ ಸಿನಿಮಾ ಆರಂಭಿಸಿದ್ದಾರೆ. ಪ್ರಿ-ಪ್ರೊಡಕ್ಷನ್ ಕೆಲಸ ಆರಂಭಿಸಿದ್ದು, ಆದಷ್ಟೂ ಬೇಗ ಶೂಟಿಂಗ್ ಶುರು ಮಾಡಲಿದ್ದಾರೆ. ಇನ್ನುಳಿದಂತೆ ಈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ.

More from Filmibeat

English summary
Megastar Chiranjeevi playing important role in Ram charan teja and Shankar's new Project.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X