Exclusive: 'ಬಡವ ರಾಸ್ಕಲ್'ನಿಂದ ಹೊರ ಬಂದ ಧನಂಜಯ್ ಸ್ನೇಹಿತ!

ನಟ ಧನಂಜಯ್ ಸಿನಿ ಜೀವನವನ್ನು ಡಾಲಿ ಪಾತ್ರ ಬದಲು ಮಾಡಿದೆ. 'ಟಗರು' ಚಿತ್ರದ ಈ ಪಾತ್ರವನ್ನು ಜನರು ಮಾತ್ರವಲ್ಲ, ಧನಂಜಯ್ ಎಂದಿಗೂ ಮರೆಯುವುದಿಲ್ಲ. ಹೀಗಾಗಿಯೇ ಅವರು ತಮ್ಮ ನಿರ್ಮಾಣ ಸಂಸ್ಥೆಗೂ ಡಾಲಿ ಪಿಚ್ಚರ್ ಎಂದೇ ಹೆಸರಿಟ್ಟಿದ್ದಾರೆ.

ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಅಲೆಯುತ್ತಿದ್ದ ಕಲಾವಿದ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ವರ್ಷ ಅವರ ಐದಾರು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಮತ್ತೊಂದು ವಿಶೇಷ ಏನೆಂದರೆ, ಧನಂಜಯ್ ಈ ವರ್ಷ ನಿರ್ಮಾಪಕರಾಗಿದ್ದಾರೆ. 'ಬಡವ ರಾಸ್ಕಲ್' ಸಿನಿಮಾ ಡಾಲಿ ನಿರ್ಮಾಣದ ಮೊದಲ ಚಿತ್ರವಾಗಿದೆ.

'ಬಡವ ರಾಸ್ಕಲ್' ಸಿನಿಮಾದ ಬಗ್ಗೆ ಹೀಗೊಂದು ಸುದ್ದಿ ಬಂದಿದೆ. ಸಿನಿಮಾ ತಂಡದ ಆಪ್ತ ಮೂಲಗಳಿಂದ ಚಿತ್ರದ ವಿಷಯವೊಂದು 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಿಕ್ಕಿದೆ. ಧನಂಜಯ್ ಜೊತೆಗಿನ ಮನಸ್ತಾಪದಿಂದ ನಿರ್ಮಾಪಕ ಗುಜ್ಜಲ್ ಪುರುಷೋತ್ತಮ್ ಹೊರ ಬಂದಿದ್ದಾರಂತೆ.

ಚಿತ್ರದಿಂದ ಹೊಸ ಬಂದ ನಿರ್ಮಾಪಕ

ಚಿತ್ರದಿಂದ ಹೊಸ ಬಂದ ನಿರ್ಮಾಪಕ

'ಬಡವ ರಾಸ್ಕಲ್' ಸಿನಿಮಾಗೆ ಇಬ್ಬರು ನಿರ್ಮಾಪಕರಿದ್ದರು. ಸಿನಿಮಾ ಪೋಸ್ಟರ್ ಗಳಲ್ಲಿ ಗುಜ್ಜಲ್ ಪುರುಷೋತ್ತಮ್ ಹಾಗೂ ಡಾಲಿ ಧನಂಜಯ್ ಎರಡೂ ಹೆಸರುಗಳು ಇದ್ದವು. ಇಬ್ಬರೂ ಈ ಸಿನಿಮಾಗೆ ಬಂಡವಾಳ ಹಾಕಿದ್ದರು. ಧನಂಜಯ್ ಮೊದಲ ನಿರ್ಮಾಣದ ಸಿನಿಮಾಗೆ ಪುರುಷೋತ್ತಮ್ ಕೈ ಜೋಡಿಸಿದ್ದರು, ಆದರೆ, ಇದೀಗ ಆ ಸಿನಿಮಾದಿಂದ ಅವರು ಹೊರಬಂದಿದ್ದಾರಂತೆ.

'ಟಗರು' ಸಿನಿಮಾದಿಂದ ಶುರುವಾಗಿದ್ದ ಸ್ನೇಹ

'ಟಗರು' ಸಿನಿಮಾದಿಂದ ಶುರುವಾಗಿದ್ದ ಸ್ನೇಹ

ಶಿವರಾಜ್ ಕುಮಾರ್ ನಟನೆಯ 'ಟಗರು' ಸಿನಿಮಾದ ಮೂಲಕ ಧನಂಜಯ್ ಹಾಗೂ ಗುಜ್ಜಲ್ ಪುರುಷೋತ್ತಮ್ ನಡುವೆ ಸ್ನೇಹ ಶುರುವಾಯಿತು. ಸೂರಿ ನಿರ್ದೇಶನ, ಶ್ರೀಕಾಂತ್ ನಿರ್ಮಾಣ ಮಾಡಿದ್ದ ಈ ಸಿನಿಮಾಗೆ ಪುರುಷೋತ್ತಮ್ ಸಹ ನಿರ್ಮಾಪಕರಾಗಿದ್ದರು. ಅಲ್ಲಿಂದ ಶುರುವಾಗಿದ್ದ ಧನಂಜಯ್ ಜೊತೆಗಿನ ಸ್ನೇಹ ಮುಂದೆ ಒಂದು ಸಿನಿಮಾವನ್ನು ಒಟ್ಟಿಗೆ ನಿರ್ಮಾಣ ಮಾಡುವ ಹಂತಕ್ಕೆ ಬಂದಿತ್ತು.

ಮನಸ್ತಾಪಕ್ಕೆ ಕಾರಣ ಏನು?

ಮನಸ್ತಾಪಕ್ಕೆ ಕಾರಣ ಏನು?

ಧನಂಜಯ್ ಹಾಗೂ ಪುರುಷೋತ್ತಮ್ ನಡುವಿನ ಮನಸ್ತಾಪಕ್ಕೆ ಕಾರಣ ಏನು ಎನ್ನುವ ಸಂಗತಿ ತಿಳಿದಿಲ್ಲ. ಆದರೆ, ಇಬ್ಬರು ಸ್ನೇಹಿತರು ದೂರ ಆಗಿರುವುದಂತೂ ನಿಜ. ಸಿನಿಮಾ ಒಂದು ಕ್ರಿಯೇಟಿವ್ ವಿಭಾಗ. ಅಲ್ಲಿ ಮನಸ್ತಾಪಗಳು ಸಾಮಾನ್ಯವಾಗಿ ಹೆಚ್ಚೆ ಇರುತ್ತದೆ. ಇಲ್ಲಿಯೂ ಸಿನಿಮಾದ ಕಾರಣಕ್ಕಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆಯಂತೆ.

ಡಾಲಿ ಪಿಚ್ಚರ್ ನಲ್ಲಿ ಚಿತ್ರ ಮುಂದುವರಿಕೆ

ಡಾಲಿ ಪಿಚ್ಚರ್ ನಲ್ಲಿ ಚಿತ್ರ ಮುಂದುವರಿಕೆ

'ಬಡವ ರಾಸ್ಕಲ್' ಸಿನಿಮಾ ಡಾಲಿ ಪಿಚ್ಚರ್ ಹಾಗೂ ಗುಜ್ಜರ್ ಟಾಕೀಸ್ ಎರಡೂ ನಿರ್ಮಾಣ ಸಂಸ್ಥೆಯ ಮೂಲಕ ಹೊರ ಬರುತಿತ್ತು. ಆದರೆ, ಇದೀಗ ಪುರುಷೋತ್ತಮ್ ಚಿತ್ರದಿಂದ ಆಚೆ ಬಂದಿದ್ದಾರೆ. ಹೀಗಾಗಿ ಧನಂಜಯ್ ಒಬ್ಬರೇ ತಮ್ಮ ಸಿನಿಮಾವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಶಂಕರ್ ಗುರು ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಅಮೃತ ಐಯ್ಯಂಗರ್ ನಾಯಕಿಯಾಗಿದ್ದಾರೆ.

More from Filmibeat

English summary
Co producer Gujjal Purushotham came out from Badava Rascal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X