ಅಲ್ಲು ಅರ್ಜುನ್- ಚರಣ್‌ ಮಧ್ಯೆ ಶೀತಲ ಸಮರ? ಕಾಟಚಾರಕ್ಕೆ 'ಪುಷ್ಪ'ಗೆ ವಿಶ್ ಮಾಡಿದ್ರಾ ಮಗಧೀರ?

ಟಾಲಿವುಡ್‌ನಲ್ಲಿ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತಿದೆ. ಇದನ್ನು ಚಿರಂಜೀವಿ- ಅಲ್ಲು ಅರವಿಂದ್ ಖಂಡಿಸುತ್ತಾ ಬರುತ್ತಿದ್ದಾರೆ. ಆದರೆ ಇದನ್ನು ಕೆಲವರು ನಂಬಲು ಸಿದ್ಧರಿಲ್ಲ. ಅಲ್ಲು ಅರ್ಜುನ್‌ ಮೆಗಾ ಫ್ಯಾಮಿಲಿ ಹೀರೊ ಗುರ್ತಿಸಿಕೊಳ್ಳಲು ಇಷ್ಟವಿಲ್ಲ. ಅಲ್ಲು ರಾಮಲಿಂಗಯ್ಯ ಮೊಮ್ಮಗನಾಗಿ ಗುರ್ತಿಸಿಕೊಳ್ಳಬೇಕು ಎಂದುಕೊಂಡಿದ್ದಾರೆ ಎನ್ನಲಾಗ್ತಿದೆ.

ಕೆಲ ದಿನಗಳ ಹಿಂದೆ ಚಿರಂಜೀವಿ ಅಭಿಮಾನಿ ಸಂಘದ ಸದಸ್ಯರೊಬ್ಬರು ಅಲ್ಲು ಅರ್ಜುನ್ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ್ದರು. ಆತನಿಂದ ಮೆಗಾ ಫ್ಯಾಮಿಲಿ, ಜನಸೇನಾ ಪಕ್ಷಕ್ಕೆ ಯಾವುದೇ ಪ್ರಯೋಜನ ಇಲ್ಲ. ಹಾಗಾಗಿ ಆತನಿಗೆ ನಮ್ಮ ಸಹಕಾರ ಇರಲ್ಲ ಎಂದಿದ್ದರು. ಇತ್ತೀಚಿನ ದಿನಗಳಲ್ಲಿ ಮೆಗಾ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಅಲ್ಲು ಅರ್ಜುನ್ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಕೆಲವೊಮ್ಮೆ ಕಾಟಚಾರಕ್ಕೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತಿದೆ.

Cold war between Ramcharan, Allu Arjun hasnt ended yet?

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗದೆ. 'ಪುಷ್ಪ' ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 68 ವರ್ಷಗಳಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗೆದ್ದ ತೆಲುಗಿನ ಮೊದಲ ನಟ ಅಲ್ಲು ಅರ್ಜುನ್ ಆಗಿದ್ದಾರೆ. 'ಪುಷ್ಪ'ರಾಜ್ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಭಿಮಾನಿಗಳು ಮಾತ್ರವಲ್ಲ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಪ್ರಶಸ್ತಿ ವಿಜೇತರನ್ನು ಅಭಿನಂದಿಸುತ್ತಿದ್ದಾರೆ. ಅಲ್ಲು ಅರ್ಜುನ್‌ಗೆ ಹೆಚ್ಚೇ ಅಭಿನಂದನೆ ಸಲ್ಲಿಸಲಾಗುತ್ತಿದೆ.

ಇನ್ನು ರಾಷ್ಟ್ರಪ್ರಶಸ್ತಿಗಳ ಬಗ್ಗೆ ಒಂದು ದಿನ ತಡವಾಗಿ ರಾಮ್‌ಚರಣ್ ಪ್ರತಿಕ್ರಿಯಿಸಿದ್ದಾರೆ. ಪ್ರಶಸ್ತಿ ವಿಜೇತರ ಪಟ್ಟಿ ಮಾಡಿ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ. ಲಿಸ್ಟ್‌ನಲ್ಲಿ ಹೆಚ್ಚು ಹೆಸರು ಹೆಚ್ಚು ಕಡಿಮೆ ಕೊನೆಯಲ್ಲಿದೆ. ತಾನು ನಟಿಸಿದ 'RRR' ಸಿನಿಮಾ 6 ಪ್ರಶಸ್ತಿ ಗೆದ್ದಿದನ್ನು ಹೈಲೆಟ್ ಮಾಡಿದ್ದಾರೆ. ಬಳಿಕ ಸೋದರ ಸಂಬಂಧಿ ವೈಷ್ಣವ್ ತೇಜ್ ನಟನೆಯ 'ಉಪ್ಪೆನ' ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಇದು ಅತ್ಯುತ್ತಮ ತೆಲುಗು ಪ್ರಾದೇಶಿಕ ಸಿನಿಮಾ ಎನಿಸಿಕೊಂಡಿತ್ತು. ಮೆಗಾ-ಅಲ್ಲು ಫ್ಯಾಮಿಲಿ ನಡುವಿನ ಅಂತರ ಹೆಚ್ಚಾಗಿದೆ ಎನ್ನುವ ಮಾತು ವಾಸ್ತವ. ಮುಖ್ಯವಾಗಿ ಅಲ್ಲು ಅರ್ಜುನ್ ಹಾಗೂ ರಾಮ್‌ಚರಣ್ ಮಧ್ಯೆ ಶೀತಲ ಸಮರ ನಡೀತಿದೆ ಎನ್ನುತ್ತಿದ್ದಾರೆ.

Cold war between Ramcharan, Allu Arjun hasnt ended yet?

ರಾಮ್‌ಚರಣ್ ಫೋಸ್ಟ್‌ಗೆ ಥ್ಯಾಂಕ್ಸ್ ಎಂದು ರಿಪ್ಲೇ ಮಾಡಿ ಅಲ್ಲು ಅರ್ಜುನ್ ಸುಮ್ಮನಾಗಿದ್ದಾರೆ. ಇನ್ನು ಅಲ್ಲು ಅರ್ಜುನ್ ಹಾಗೂ ತಾರಕ್ ನಡುವೆ ಆತ್ಮೀಯ ಒಡನಾಟವಿದೆ. ಒಬ್ಬರನ್ನೊಬ್ಬರು ಭಾವ ಎಂದು ಸಂಬೋಧಿಸುತ್ತಾರೆ. ಅಲ್ಲು ಅರ್ಜುನ್‌ಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದ್ದಕ್ಕೆ ಜ್ಯೂ. ಎನ್‌ಟಿಆರ್, ಕಂಗ್ರಾಟ್ಸ್ ಭಾವ, ನೀನು ಈ ಪುಷ್ಪ ಪಾತ್ರಕ್ಕೆ ಪ್ರಶಸ್ತಿ ಪಡೆಯಲು ಅರ್ಹನಾಗಿದ್ದೀಯಾ ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟೈಲಿಶ್ ಥ್ಯಾಂಕ್ಯೂ ಭಾವ, ನಿನ್ನ ಮಾತುಗಳು ಮನಸ್ಸಿಗೆ ತಟ್ಟಿದೆ ಎಂದು ಬರೆದುಕೊಂಡಿದ್ದಾರೆ.

ರಾಮ್‌ಚರಣ್‌ ಹಾಗೂ ತಾರಕ್ ಪೋಸ್ಟ್‌ಗಳಲ್ಲಿ ಹೋಲಿಸಿ ಕೆಲವರು ಕಾಲೆಳೆಯುತ್ತಾರೆ. ಚರಣ್‌ಗಿಂತ ತಾರಕ್ ವಾಸಿ. ಬೇಕಂತಲೇ ರಾಮ್‌ಚರಣ್ ಈ ರೀತಿ ಮಾಡುತ್ತಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋದು ಈ ಸೋಷಿಯಲ್ ಮೀಡಿಯಾ ಬಿಹೇವಿಯರ್‌ನಿಂದಲೇ ಗೊತ್ತಾಗುತ್ತದೆ ಎನ್ನುತ್ತಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಪವನ್ ಕಲ್ಯಾಣ್ ಹೆಸರು ಹೇಳಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದರು. ಅದಕ್ಕೆ ಸಾಕಷ್ಟು ಟ್ರೋಲ್ ಆಗಿದ್ದರು.

ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗೆ 'RRR' ಚಿತ್ರದಿಂದ ತಾರಕ್, ಚರಣ್ ಹಾಗೂ 'ಜೈಭೀಮ್' ಚಿತ್ರದಿಂದ ಸೂರ್ಯ ಪೈಪೋಟೊ ನಡೆಸಿದ್ದರು. ಆದರೆ ಅಂತಿಮವಾಗಿ ಪ್ರಶಸ್ತಿ ಅಲ್ಲು ಅರ್ಜುನ್ ಪಾಲಾಗಿದೆ. 'ಜೈಭೀಮ್' ಚಿತ್ರಕ್ಕೆ ಪ್ರಶಸ್ತಿ ಬಂದಿಲ್ಲ ಎಂದು ತೆಲುಗು ನಟ ನಾನಿ ಬೇಸರ ವ್ಯಕ್ತಪಡಿಸಿದ್ದಾರೆ.

More from Filmibeat

English summary
69th National Film Awards: Cold war between Ramcharan and Allu Arjun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X