»   » ನಟ ಚಿರಂಜೀವಿ ಸರ್ಜಾಗೆ ನಿದಿರೆ ಬರದಿರೆ ಏನಂತೀ?

ನಟ ಚಿರಂಜೀವಿ ಸರ್ಜಾಗೆ ನಿದಿರೆ ಬರದಿರೆ ಏನಂತೀ?

Posted By:
Subscribe to Filmibeat Kannada

ಎಲ್ಲೇ ಹೋದ್ರೂ ಕಚ್ಕೊಂಡೇ ಓಡಾಡುವ 'ಫೆವಿಕ್ವಿಕ್ ಜೋಡಿ' ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾರನ್ನ ನೋಡಿದವ್ರು, ಇಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ಇರಬಹುದು ಅಂತ ಊಹಿಸಿ ಬಹಳ ಕಾಲವೇ ಆಯ್ತು. ಆದ್ರೆ, ಅದರ ಬಗ್ಗೆ ಈ ಪ್ರೇಮಪಕ್ಷಿಗಳು ಎಲ್ಲೂ ತುಟಿಕ್ ಪಿಟಿಕ್ ಅಂದಿರ್ಲಿಲ್ಲ.

ಇದೆಲ್ಲಾ ಬರೀ ಗಾಸಿಪ್ಪು, ಅದರ ಮೇಲೊಂದು ಸಿಪ್ಪು! ಅಂತ ನೀವೇ ಅಂದುಕೊಂಡು ಸುಮ್ಮನಾದರೂ, ಚಿರು ಲವ್ವಲ್ಲಿ ಬಿದ್ದಿರೋದು ಪಕ್ಕಾ. ಪ್ರೀತಿ ನಶೆಯಲ್ಲಿ ತೇಲಾಡುತ್ತಿರುವುದು ಹಂಡ್ರೆಡ್ ಪರ್ಸೆಂಟ್ ನಿಜ. ಪ್ರೇಮದಿಂದ ಕೋಮಾಗೆ ಜಾರಿರುವುದು ಅಷ್ಟೇ ಸತ್ಯ. ಅದಕ್ಕೆ ಚಿರು ಮಾಡಿರುವ ಈ ಟ್ವೀಟ್ ಸಾಕ್ಷಿ.

Confirmed, Chiranjeevi Sarja is in love

''ಪ್ರೀತಿ ಮಾಡುತ್ತಿರುವುದು ತುಂಬಾ ಹಿತ'' ಅಂತ ಚಿರಂಜೀವಿ ಸರ್ಜಾ ಮಾಡಿರುವ ಟ್ವೀಟ್ ನೋಡಿದ್ರೆ, ಪ್ರೀತೀಲಿ ಚಿರು ಢಮಾರ್ ಆಗಿದ್ದಾರೆ ಅಂತ ಸ್ಪೆಷಲ್ಲಾಗಿ ಹೇಳ್ಬೇಕಾಗಿಲ್ಲ ಅಲ್ವಾ? ಪ್ರೀತೀಲಿ ಬಿದ್ದು, ''ಪ್ರೇಮ..ಕೋಮಾ..'' ಅಂತ ಹಾಡು ಹಾಡಿದ್ರೆ ಪರ್ವಾಗಿಲ್ಲ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ರೋಮ್ಯಾಂಟಿಕ್ ಸಾಂಗ್ ಹಾಡಿದ್ರೆ ''ಆಹಾ'' ಅನ್ನಬಹುದು.

ಆದ್ರೆ, ಅದೆಲ್ಲವನ್ನೂ ಬಿಟ್ಟು ಚಿರು ''ಅಮ್ಮಾಟೆ'' ಅಂದಿರುವುದೇ ಈಗ ಎಲ್ಲರಿಗೆ ಕಾಡುತ್ತಿರುವ ಡೌಟು. ತನ್ನ ತಮ್ಮ ಧೃವ ತೆರೆಮೇಲೆ ಫೀಲಿಂಗ್ ನಲ್ಲಿ ಹಾಡೋ ''ಅಮ್ಮಾಟೆ'' ಹಾಡನ್ನ ಚಿರು ರಿಯಲ್ಲಾಗಿ ಹಾಡಿ, ಅವ್ರೂ ಕನ್ಫ್ಯೂಸ್ ಆಗೋದ್ರ ಜೊತೆಗೆ ಎಲ್ಲರಿಗೂ ಕನ್ಫ್ಯೂಸ್ ಮಾಡಿದ್ದಾರೆ. [ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?]

''ಲವ್ವಲ್ಲಿರುವುದು ಚಂದ'' ಅಂತ ಚಿರು ಹೇಳಿದ್ದಾರೆ, ಅಷ್ಟು ಬಿಟ್ರೆ ಯಾರ ಜೊತೆ ಅಂತ ಬಹಿರಂಗ ಪಡಿಸಿಲ್ಲ. ''ಅಮ್ಮಾಟೆ'' ಅನ್ನುವ ತರಹ ಏನಾಗಿದೆ ಅಂತಲೂ ಸ್ಪಷ್ಟಪಡಿಸಿಲ್ಲ. ಆದರೂ ಎಲ್ಲರಿಂದ ಸಲಹೆಗಳನ್ನು ಕೇಳಿದ್ದಾರೆ.

ಹಾಗೊಂದು ವೇಳೆ ಚಿರು ಲವ್ವಲ್ಲಿರೋದು ಮೇಘನಾ ಜೊತೆಗೆ ಆಗಿದ್ರೆ, ಅವರಿಗೊಂದು 'ಬಹುಪರಾಕ್' ಹಾಕಿ ಸಾಕು. ಎಷ್ಟೇ ಆಗ್ಲಿ ಪ್ರೀತೀಲಿ ಕಿತ್ತಾಟ ಮೂಮೂಲು. ಏನೇ ಆದ್ರೂ, ಲವ್ವಲ್ಲಿ ಬಿದ್ಮೇಲೆ ನಿದಿರೆ ಬರದಿರೆ ಏನಂತೀ...ಲವ್ವೋ ಲವ್ವೋ ಲವ್ವೋ...

English summary
Actor Chiranjeevi Sarja is in love. Chiru took twitter to express his love but not revealed his pair yet. He tweeted, "I feel soo good to be in love... And feel wired bec of things going on... Aamate aamate... Confused give some suggestions PLS guys.."

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada