For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬಲ್ಲಿ ಯಕ್ಕ ಯಕ್ಕ ಶೋಭಕ್ಕ ಸಾಂಗ್ ಗದ್ದಲ

  By ಜೀವನರಸಿಕ
  |

  ಒರಟ ಪ್ರಶಾಂತ್ ಅಭಿನಯದ 'ಚಿರಾಯು' ಸಿನಿಮಾ ಈಗ ರಿಲೀಸ್ ಗೆ ರೆಡಿಯಾಗ್ತಿದೆ. ಆದರೆ ಯೂಟ್ಯೂಬ್ ನಲ್ಲಿರೋ ಚಿತ್ರದ ಐಟಂ ಸಾಂಗ್ ಈಗ ಸಣ್ಣ ಮಟ್ಟಿಗೆ ಎಡವಟ್ಟು ಮಾಡಿಕೊಳ್ತಿದೆ. 'ಚಿರಾಯು' ಪಕ್ಕಾ ಮಾಸ್ ಸ್ಟೈಲ್ ಸಿನಿಮಾ.

  ಒರಟ ಪ್ರಶಾಂತ್ ಕೂಡ ವರ್ಷಗಳ ನಂತ್ರ ಬಿಗ್ ಸ್ಕ್ರೀನ್ ಗೆ ಬರೋಕೆ ತಯಾರಿ ಮಾಡಿಕೊಳ್ತಿದ್ದಾರೆ. ಚಿತ್ರದಲ್ಲಿ ಯಕ್ಕಾ ಯಕ್ಕಾ ಶೋಭಕ್ಕ ಸಿನಿಮಾ ಹುಚ್ಚು ಬಿಡಕ್ಕಾ, ಮೂವತ್ತು ವರ್ಷ ತುಂಬುತ್ತೆ ಮೂಸ್ ನೋಡೋರಿಲ್ವಕ್ಕ...ಅನ್ನೋ ಲಿರಿಕ್ಸ್ ಇರೋ ಐಟಂ ಸಾಂಗಿದೆ. [ಯಕ್ಕಾ ಯಕ್ಕಾ ಶೋಭಕ್ಕಾ ವಿಡಿಯೋ ಸಾಂಗ್]

  ಸೂರ ಭಟ್ಟರು ಕುಡ್ಕೊಂಡು ತಿನ್ಕಂಡು ನಮ್ ಜಾತಿಬಿಟ್ಟರು ಅನ್ನೋ ವಿವಾದಾತ್ಮಕ ಸಾಲುಗಳೂ ಇವೆ. ಐಟಂ ಡಾನ್ಸರ್ ಏನೋ ಅದ್ದೂರಿಯಾಗಿ ಸ್ಟೆಪ್ ಹಾಕಿದ್ದಾರೆ. ಅದಕ್ಕೆ ಒರಟ ಪ್ರಶಾಂತ್ ಸಾಥ್ ಕೂಡ ಜೋರಾಗಿದೆ. ಆದರೆ ಸಿನಿಮಾದಲ್ಲಿರೋ ಲಿರಿಕ್ಸ್ ಗಳು ಯಾಕೋ ಎಡವಟ್ಟು ಮಾಡಿಕೊಳ್ಳೋ ಲಕ್ಷಣಗಳಿವೆ.

  ಯಕ್ಕಾ ಯಕ್ಕಾ ಶೋಭಕ್ಕಾ ಆಶ್ರಮ ಸೇರಕ್ಕ ನಿತ್ಯಾನಂದನಿಗೆ ಆನಂದ ಮಿಸ್ ಇಲ್ಲ ಕಾಣಕ್ಕ...ಎಂದು ಹಾಡಿನ ಸಾಹಿತ್ಯ ಸಾಗುತ್ತದೆ. ಚಿತ್ರತಂಡದವರು ತಮ್ಮ ಲಿರಿಕ್ಸ್ ಸಿನಿಮಾಗೆ ಸೂಟಾಗುತ್ತೆ. ಅದಕ್ಕಿಂತ ಹೆಚ್ಚಾಗಿ ಏನನ್ನಾದ್ರೂ ಬಳಸೋಕೆ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಅನ್ನೋ ವಾದ ಇದೆ.

  ಇಷ್ಟಕ್ಕೂ ಮನರಂಜನೆ ನೀಡೋಕೆ ಇದೆಲ್ಲ ಇದ್ರೆ ಸೂಪರ್ ಅಂತಾರೆ. ಏನಾದ್ರೂ ಮಾಡಿ ಸ್ವಾಮಿ ವಿವಾದಗಳಾಗದಿದ್ರೆ ಸಾಕು ಅನ್ನೋದು ಗಾಂಧಿನಗರದ ಮನವಿ. ಅಂದಹಾಗೆ ಈ ಚಿತ್ರದಲ್ಲಿ ಮೈಚಳಿ ಬಿಟ್ಟು ಕುಣಿದಿರುವ ಚೆಲುವೆ ಹೆಸರು ಪ್ರಿಯಾಂಕಾ ಮಲ್ನಾಡ್. ಚಿತ್ರದ ನಾಯಕಿ ಶುಭಾ ಪೂಂಜಾ. ಆಕ್ಷನ್ ಕಟ್ ಹೇಳುತ್ತಿರುವುದು ಒರಟ ಪ್ರಶಾಂತ್.

  English summary
  Kananda item number "Yakka Yakka Shobhakka..." in movie 'Chirayu' lands in controversy. Orata fame Prashanth and Shubha Poojna lead movie lyrics had objectionable words. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X