'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್ ಜೊತೆ ರಚಿತಾ ರಾಮ್ ರೊಮ್ಯಾನ್ಸ್?

ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಮಿಶ್ರ ಪ್ರತಿಕ್ರಿಯೆ ನಡುವೆಯೂ ತಕ್ಕಮಟ್ಟಿಗೆ ಗೆದ್ದಿದೆ. ಚಿತ್ರದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಬ್ಬರ ಪರ್ಫಾರ್ಮನ್ಸ್ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿದೆ. ಡಿಂಪಲ್ ಕ್ವೀನ್ ನಟನೆಗೆ ಕಾಲಿವುಡ್ ಮಂದಿ ಕೂಡ ಫಿದಾ ಆಗಿದ್ದಾರೆ.

'ಕೈದಿ', 'ಮಾಸ್ಟರ್', 'ವಿಕ್ರಂ' ಹಾಗೂ 'ಲಿಯೋ' ರೀತಿಯ ಹಿಟ್ ಸಿನಿಮಾಗಳಿಗೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದಾರೆ. 4 ಸಿನಿಮಾಗಳಿಂದ ಸ್ಟಾರ್ ಡೈರೆಕ್ಟ್ ಪಟ್ಟ ಅಲಂಕರಿಸಿದ್ದರು. ರಜನಿಕಾಂತ್ ಜೊತೆ ಲೋಕೇಶ್ ಕೈಜೋಡಿಸುತ್ತಾರೆ ಎಂದಾಗಲೇ ಭಾರೀ ಹೈಪ್ ಕ್ರಿಯೇಟ್ ಆಗಿತ್ತು. ಸಿನಿಮಾ 1000 ಕೋಟಿ ರೂ. ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ಶುರುವಾಗಿತ್ತು. ಆದರೆ ಅದು ಸುಳ್ಳಾಗಿದೆ. ಇದೀಗ ಲೋಕೇಶ್ ಹೀರೊ ಆಗಲು ಹೊರಟಿದ್ದಾರೆ.

Coolie Fame Rachita Ram approached to play lead in Lokesh Kanagaraj s acting debut film

ಈಗಾಗಲೇ ಶ್ರುತಿ ಹಾಸನ್ ಜೊತೆ ಲೋಕೇಶ್ ಒಂದು ಆಲ್ಬಮ್ ಸಾಂಗ್‌ನಲ್ಲಿ ಮಿಂಚಿದ್ದಾರೆ. ಅದು ಹಿಟ್ ಆಗಿತ್ತು. 'ಮಾಸ್ಟರ್' ಚಿತ್ರದ ಸಣ್ಣ ಝಲಕ್‌ನಲ್ಲೂ ಕಾಣಿಸಿಕೊಂಡಿದ್ದರು. ಇದೀಗ ಹೀರೊ ಆಗಿ ನಟಿಸುವ ಲೆಕ್ಕಾಚಾರದಲ್ಲಿದ್ದಾರೆ. ಅರುಣ್ ಮಥೇಶ್ವರನ್ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಈ ಹಿಂದೆ ಧನುಷ್ ಹಾಗೂ ಶಿವರಾಜ್‌ಕುಮಾರ್ ನಟಿಸಿದ್ದ 'ಕ್ಯಾಪ್ಟನ್ ಮಿಲ್ಲರ್' ಚಿತ್ರಕ್ಕೆ ಅರುಣ್ ಮಥೇಶ್ವರನ್ ಸಾರಥ್ಯ ವಹಿಸಿದ್ದರು. ಲೋಕೇಶ್ ಹಾಗೂ ರಚಿತಾ ರಾಮ್ ಸ್ನೇಹಿತರು. ಅದೇ ಸ್ನೇಹ 'ಕೂಲಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಲು ಸಹಾಯ ಮಾಡಿತ್ತು. ಕಾರ್ಯಕ್ರಮವೊಂದರಲ್ಲಿ ರಚಿತಾ ರಾಮ್ ಹಾಗೂ ಲೋಕೇಶ್ ಕನಕರಾಜ್ ಪರಿಚಯವಾಗಿತ್ತು. ಲೋಕೇಶ್ ಸಿನಿಮಾಗಳನ್ನು ರಚ್ಚು ಬಹಳ ಮೆಚ್ಚಿದ್ದರು. ಅವರೊಟ್ಟಿಗೆ ಕೆಲಸ ಮಾಡಬೇಕು ಅಂದುಕೊಂಡಾಗ 'ಕೂಲಿ' ಚಿತ್ರದ ಕಲ್ಯಾಣಿ ಪಾತ್ರ ಸಿದ್ಧವಾಗಿತ್ತು.

ರಚಿತಾ ರಾಮ್ ಅವರಿಗೆ ಮೊದಲಿನಿಂದಲೂ ನೆಗೆಟಿವ್ ಪಾತ್ರದಲ್ಲಿ ನಟಿಸುವ ಆಸೆ ಇದೆ. 'ಪಡೆಯಪ್ಪ' ಚಿತ್ರದಲ್ಲಿ ರಜನಿಕಾಂತ್ ಎಂದು ನೀಲಾಂಬರಿಯಾಗಿ ರಮ್ಯಾಕೃಷ್ಣ ಅಬ್ಬರಿಸಿದ್ದು ಗೊತ್ತೇಯಿದೆ. ಅದೇ ರೀತಿಯ ಪಾತ್ರ ಮಾಡುವ ಆಸೆ ಇತ್ತಂತೆ. 'ಕೂಲಿ' ಚಿತ್ರದ ಕಲ್ಯಾಣಿ ಪಾತ್ರ ಆಕೆಗೆ ಕಾಲಿವುಡ್‌ನಲ್ಲಿ ಬ್ರೇಕ್ ಕೊಟ್ಟಿದೆ. ತಮಿಳು ಚಿತ್ರರಂಗಕ್ಕೆ ಲೋಕೇಶ್ ಕನಕರಾಜ್ ನನಗೆ ಗಾಡ್ ಫಾದರ್ ಎಂದು ಆಕೆ ಹೇಳಿಕೊಂಡಿದ್ದಾರೆ.

Coolie Fame Rachita Ram approached to play lead in Lokesh Kanagaraj s acting debut film

'ಕೂಲಿ' ಚಿತ್ರದ ನಿಜವಾದ ನಾಯಕ ಮಲಯಾಳಂ ನಟ ಸೌಬಿನ್ ಸಾಹಿರ್ ಅದೇ ರೀತಿ ನಾಯಕಿ ರಚಿತಾ ರಾಮ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅಷ್ಟರಮಟ್ಟಿಗೆ ಇವರಿಬ್ಬರ ಪಾತ್ರಗಳು, ಅಭಿನಯ ಮೋಡಿ ಮಾಡಿದೆ. 'ಕೂಲಿ' ಬಳಿಕ ಲೋಕೇಶ್ ಕನಕರಾಜ್ ಜೋಡಿಯಾಗಿ ರಚಿತಾ ನಟಿಸುತ್ತಾರಾ? ಕಾದು ನೋಡಬೇಕಿದೆ.

ನಟಿ ರಚಿತಾ ರಾಮ್ ಮೊದಲಿನಿಂದಲೂ ಕನ್ನಡ ಸಿನಿಮಾಗಳಲ್ಲೇ ಹೆಚ್ಚು ನಟಿಸುತ್ತಿದ್ದಾರೆ. ಒಂದು ತೆಲುಗು ಚಿತ್ರದಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. 'ಕೂಲಿ' ಚಿತ್ರದ ಮೂಲಕ ಕಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಆರಂಭದಲ್ಲಿ ಇದು ಗುಟ್ಟಾಗಿಯೇ ಇತ್ತು. ಟ್ರೈಲರ್ ಬಿಡುಗಡೆ ಬಳಿಕ ಆಕೆ ನಟಿಸಿರುವುದು ಪಕ್ಕಾ ಆಗಿತ್ತು. ಚಿತ್ರದಲ್ಲಿ ತಮ್ಮ ನಟನೆಗೆ ಪ್ರೇಕ್ಷಕರ ರೆಸ್ಪಾನ್ಸ್ ಕಂಡು ರಚ್ಚು ಧನ್ಯವಾದ ತಿಳಿಸಿದ್ದರು. ಇನ್ನು 'ಕೂಲಿ' ಸಿನಿಮಾ 500 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಬಾಕ್ಸಾಫೀಸ್ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಕೆಲವರು ಸಿನಿಮಾ ಸೋತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕೂಡ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡ್ತಿದೆ.

More from Filmibeat

English summary
Rachita Ram is likely to play the female lead opposite lokesh kanagaraj in his acting debut
Read more about: rachita ram kollywood tamil
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X