For Quick Alerts
  ALLOW NOTIFICATIONS  
  For Daily Alerts

  ಯಾರೂ ನಿರೀಕ್ಷೆ ಮಾಡದ ನಟ ಈಗ ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ.!

  By Bharath Kumar
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಲಿಸರುವ 50ನೇ ಚಿತ್ರ 'ಕುರುಕ್ಷೇತ್ರ' ಜುಲೈ 30 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸೆಟ್ಟೇರಲಿದೆ. ದರ್ಶನ್ ಸೇರಿದಂತೆ ಹಲವು ಪಾತ್ರಗಳು ಈಗಾಗಲೇ ಅಂತಿಮವಾಗಿದೆ.

  ದುರ್ಯೋಧನ, ಶ್ರೀಕೃಷ್ಣ, ಭೀಷ್ಮಾ, ದ್ರೋಣಾಚಾರ್ಯ, ಧೃತರಾಷ್ಟ್ರ, ಶಕುನಿ, ಕುಂತಿ, ಭಾನುಮತಿ, ಹೀಗೆ ಬಹುತೇಕ ಪಾತ್ರಗಳು ಸೋಲ್ಡ್ ಔಟ್ ಆಗಿವೆ. ಪಾಂಡವರು ಪಾತ್ರಗಳು ಆಯ್ಕೆ ಪ್ರಕ್ರಿಯೆಯಲ್ಲಿದ್ದು, ಪಾಂಡವರಲ್ಲಿ ಮೊದಲ ಪಾತ್ರವಾಗಿ ಭೀಮ ಆಯ್ಕೆ ಆಗಿದ್ದಾರಂತೆ.

  ಯಾರೂ ಕೂಡ ಈ ನಟ ಭೀಮನ ಪಾತ್ರಕ್ಕೆ ಆಯ್ಕೆಯಾಗುತ್ತಾನೆಂದು ಊಹೆ ಮಾಡಿರಲಿಲ್ಲ. ಅಂತಹ ಕಲಾವಿದ 'ಕುರುಕ್ಷೇತ್ರ' ಕಾಳಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ರೆ, ದರ್ಶನ್ 'ಕುರುಕ್ಷೇತ್ರ'ದಲ್ಲಿ ಭೀಮ ಯಾರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

  ಕನ್ನಡದ 'ಕುರುಕ್ಷೇತ್ರ'ಕ್ಕೆ ಬಾಲಿವುಡ್ ನಟ

  ಕನ್ನಡದ 'ಕುರುಕ್ಷೇತ್ರ'ಕ್ಕೆ ಬಾಲಿವುಡ್ ನಟ

  ಮುನಿರತ್ನ ನಿರ್ಮಾಣ ಮಾಡುತ್ತಿರುವ ಬಹುಕೋಟಿ ವೆಚ್ಚದ ಕುರುಕ್ಷೇತ್ರದಲ್ಲಿ ಭೀಮನ ಪಾತ್ರಕ್ಕಾಗಿ ರಾಣಾ ದಗ್ಗುಬಾಟಿ ಬರ್ತಾರೆ, ಮತ್ತೊಬ್ಬರು ಬರ್ತಾರೆ ಎನ್ನಲಾಗಿತ್ತು. ಆದ್ರೆ, ಅಂತಿಮವಾಗಿ ಬಾಲಿವುಡ್ ನಟ ಭೀಮನ ಪಾತ್ರಕ್ಕೆ ಆಯ್ಕೆ ಆಗಿದ್ದಾರಂತೆ.

  ದರ್ಶನ್ ಅಂಡ್ ಟೀಂ ರೆಡಿ: ಜುಲೈ 30ಕ್ಕೆ 'ಕುರುಕ್ಷೇತ್ರ' ಶುರುದರ್ಶನ್ ಅಂಡ್ ಟೀಂ ರೆಡಿ: ಜುಲೈ 30ಕ್ಕೆ 'ಕುರುಕ್ಷೇತ್ರ' ಶುರು

  ಹಿಂದಿಯ ಕಿರುತೆರೆ ಕಲಾವಿದ

  ಹಿಂದಿಯ ಕಿರುತೆರೆ ಕಲಾವಿದ

  ಬಾಲಿವುಡ್ ನ ಕಿರುತೆರೆ ನಟ ಕಮ್ ಬಾಡಿ ಬಿಲ್ಡರ್ ಡ್ಯಾನಿಶ್ ಅಖ್ತರ್ ಸೈಫಿ ಭೀಮನ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಘೋಷಣೆ ಮಾಡಬೇಕಿದೆಯಂತೆ.

  ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.! ಬಿಗ್ ಬ್ರೇಕಿಂಗ್: 'ಕುರುಕ್ಷೇತ್ರ'ಕ್ಕೆ ದ್ರೌಪದಿ ಸಿಕ್ಕಿದ್ರಂತೆ.!

  ಡ್ಯಾನಿಶ್ ಅಖ್ತರ್ ಸೈಫಿ ಯಾರು?

  ಡ್ಯಾನಿಶ್ ಅಖ್ತರ್ ಸೈಫಿ ಯಾರು?

  ಡ್ಯಾನಿಶ್ ಅಖ್ತರ್ ಸೈಫಿ ಮುಂಬೈನಲ್ಲಿ ನೆಲಸಿರುವ ಬಿಹಾರ್ ನಿವಾಸಿ. ವೃತ್ತಿಯಲ್ಲಿ ಕಲಾವಿದನಾಗಿರುವ ಡ್ಯಾನೀಶ್ ಹಾಗೂ ಕುಸ್ತಿ ಪಟು ಕೂಡ ಹೌದು. 6.6 ಅಡಿ ಎತ್ತರ ಇರುವ ಡ್ಯಾನಿಶ್ 125 ಕೆ.ಜಿ ತೂಕವಿದ್ದಾರೆ. ಹಿಂದಿಯ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ.

  'ಕುರುಕ್ಷೇತ್ರ'ಕ್ಕೆ ಕಾಲಿಟ್ಟ ಮತ್ತಿಬ್ಬರು ಸ್ಟಾರ್ ನಟರು!'ಕುರುಕ್ಷೇತ್ರ'ಕ್ಕೆ ಕಾಲಿಟ್ಟ ಮತ್ತಿಬ್ಬರು ಸ್ಟಾರ್ ನಟರು!

  ಆಂಜನೇಯನ ಪಾತ್ರ ಹೆಚ್ಚು ಫೇಮಸ್

  ಆಂಜನೇಯನ ಪಾತ್ರ ಹೆಚ್ಚು ಫೇಮಸ್

  ಹಿಂದಿಯಲ್ಲಿ ಪ್ರಸಾರವಾಗುವ ಸಿಯಾ ಕೇ ರಾಮ್ ಧಾರವಾಹಿಯಲ್ಲಿ ಡ್ಯಾನಿಶ್ ಅಖ್ತರ್ ಸೈಫಿ ಆಂಜನೇಯನ ಪಾತ್ರ ಮಾಡಿದ್ದರಂತೆ. ಈ ಪಾತ್ರದ ಮೂಲಕ ಬಾಲಿವುಡ್ ಪ್ರೇಕ್ಷಕರ ಗಮನ ಸೆಳೆದಿದ್ದರು.

  ದರ್ಶನ್ ವರ್ಸಸ್ ಡ್ಯಾನಿಶ್

  ದರ್ಶನ್ ವರ್ಸಸ್ ಡ್ಯಾನಿಶ್

  ಈ ಮೂಲಕ 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ವರ್ಸಸ್ ಡ್ಯಾನಿಶ್ ಎಂಬ ಎರಡು ಮದಗಜಗಳು ಕಾದಾಟ ನಡೆಸಲಿವೆ. ಈ ಸುದ್ದಿ ಇನ್ನು ಅಧಿಕೃತವಾಗಿಲ್ಲ. ಜುಲೈ 30ರಂದು ಸಿನಿಮಾ ಸೆಟ್ಟೇರಲಿದ್ದು, ಯಾವ ಯಾವ ಕಲಾವಿದರು 'ಕುರುಕ್ಷೇತ್ರ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಉತ್ತರ ಸಿಗುವ ನಿರೀಕ್ಷೆ ಇದೆ. ಕಾದು ನೋಡೋಣ.

  50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್50ನೇ ಸಿನಿಮಾ 'ಕುರುಕ್ಷೇತ್ರ'ಕ್ಕಾಗಿ ಡಿ ಬಾಸ್ ದರ್ಶನ್ ಸಿಕ್ಕಾಪಟ್ಟೆ ಡೆಡಿಕೇಶನ್

  English summary
  Account to source bollywood small screen actor danish akhtar saifi to play bheem role in challenging star darshan 50th movie kurukshetra. The movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X