twitter
    For Quick Alerts
    ALLOW NOTIFICATIONS  
    For Daily Alerts

    ದರ್ಬಾರ್ ಸಿನಿಮಾ ಈ ಪೊಲೀಸ್ ಅಧಿಕಾರಿಯ ಜೀವನಕಥೆ!

    |

    ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. ಸುಮಾರು 27 ವರ್ಷದ ನಂತರ ಪೊಲೀಸ್ ಅಧಿಕಾರಿಯಾಗಿ ನಟಿಸಿರುವ ರಜನಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

    Recommended Video

    ಕೋಟಿ ಕೋಟಿ ಜೇಬಿಗೆ ಇಳಿಸಿಕೊಂಡ ರಜನಿ ದರ್ಬಾರ್ | DARBAR First day collection report / FILMIBEAT KANNADA

    ಸಿನಿಮಾದಲ್ಲಿ ರಜನಿಕಾಂತ್ ಕೆಟ್ಟ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಮುಂಬೈ ನಗರವನ್ನ ನಡುಗಿಸುವಂತಹ ಪಾತ್ರ ನಿರ್ವಹಿಸಿದ್ದಾರೆ.

    ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!

    ಮುಂಬೈ ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕಾರ ಮಾಡುವ ಆಧಿತ್ಯ ಅರುಣಾಚಲಂ, ಸಿಕ್ಕ ಸಿಕ್ಕ ಕಡೆಯಲೆಲ್ಲ ರೌಡಿಗಳನ್ನು ಎನ್ ಕೌಂಟರ್ ಮಾಡ್ತಾರೆ. ತನಿಖೆಗೆ ಬರುವ ಮಾನವ ಹಕ್ಕಗಳು ಆಯೋಗದ ಅಧಿಕಾರಿಯನ್ನು ಭಯಪಡಿಸಿ ವರದಿ ಬರೆಸಿಕೊಳ್ಳುವಷ್ಟು ಕೆಟ್ಟ ಪೊಲೀಸ್ ರಜನಿಕಾಂತ್.

     Darbar Is A Real Story Of This Mumbai Police

    ಕೆಟ್ಟ ಪೊಲೀಸ್ ಆದರೂ ಒಳ್ಳೆಯ ಉದ್ದೇಶಕ್ಕಾಗಿ ಹೋರಾಡುವ ರಜನಿ ಎಂದಿನಂತೆ ಮಿಂಚಿದ್ದಾರೆ. ತಲೈವಾ ನಟಿಸಿರುವ ಈ ಪಾತ್ರ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಇದೀಗ, ದರ್ಬಾರ್ ಸಿನಿಮಾ ಮುಂಬೈ ಪೊಲೀಸ್ ಅಧಿಕಾರಿಯೊಬ್ಬರ ನೈಜಕಥೆ ಎಂದು ಹೇಳಲಾಗುತ್ತಿದೆ.

    'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ'ದರ್ಬಾರ್' ಕಲೆಕ್ಷನ್: 'ಸರ್ಕಾರ್'-'2.0' ಸಿನಿಮಾ ರೆಕಾರ್ಡ್ ಬ್ರೇಕ್ ಮಾಡುವಲ್ಲಿ 'ದರ್ಬಾರ್' ವಿಫಲ

    ದರ್ಬಾರ್ ಸಿನಿಮಾ ನೋಡಿದ ರಜನಿಕಾಂತ್ ಅಭಿಮಾನಿಯೊಬ್ಬ ಈ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಹುಶಃ ಈ ಸುದ್ದಿ ಸ್ವತಃ ನಿರ್ದೇಶಕ ಹಾಗೂ ರಜನಿಗೂ ಅಚ್ಚರಿ ತಂದಿರಬಹುದು.

    ಮುಂಬೈ ಪೊಲೀಸ್ ಆಗಿದ್ದ ವೈಸಿ ಪವರ್ ಅವರ ಕಥೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಗೊತ್ತಿಲ್ಲ. ಆದರೆ, ಒಂದು 1980ರ ಸಮಯದಲ್ಲಿ ವರದ ಬಾಯ್ ಎಂಬ ವ್ಯಕ್ತಿ ಮುಂಬೈನಲ್ಲಿ ಅನೈತಿಕ ಚಟುವಟಿಕೆಗಳಿಗೆ ಕಾರಣರಾಗಿದ್ದರಂತೆ. ಆತನ ವಿರುದ್ಧ ವೈಸಿ ಪವರ್ ನೇರವಾಗಿ ಫೈಟ್ ಮಾಡಿದ್ದರಂತೆ. ಅದೇ ಕಥೆಯಿಂದ ದರ್ಬಾರ್ ಸ್ಫೂರ್ತಿ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಇನ್ನುಳಿದಂತೆ ಎ ಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ನಯನತಾರ, ನಿವೇತಾ ಥಾಮಸ್, ಸುನೀಲ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    English summary
    Superstar Rajinikanth starrer Darbar movie is based on the story of this real mumbai police officer?
    Friday, January 10, 2020, 20:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X