ತಮಿಳು ನಟ ಅಜಿತ್ ಚಿತ್ರದ ರೀಮೇಕ್ ನಲ್ಲಿ ದರ್ಶನ್ ನಟನೆ.!

By Bharath Kumar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ತಮ್ಮ 50ನೇ ಚಿತ್ರ 'ಕುರುಕ್ಷೇತ್ರ'ದಲ್ಲಿ ಬಿಜಿಯಾಗಿದ್ದಾರೆ. 'ತಾರಕ್' ಚಿತ್ರದ ಯಶಸ್ಸಿನ ನಂತರ ವೃತ್ತಿ ಜೀವನದ ವಿಶೇಷ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈ ಮಧ್ಯೆ ದರ್ಶನ್ ಅವರ 51 ಹಾಗೂ 52ನೇ ಚಿತ್ರಗಳ ಬಗ್ಗೆ ದಿನಕ್ಕೊಂದು ಸುದ್ದಿ ಕೇಳಿ ಬರುತ್ತಲೇ ಇದೆ. ಹೀಗಿರುವಾಗ, ದರ್ಶನ್ ಕಡೆಯಿಂದ ಹೊಸದೊಂದು ಬ್ಲ್ಯಾಸ್ಟಿಂಗ್ ನ್ಯೂಸ್ ಹೊರಬಿದ್ದಿದೆ.

ಅದೇನಪ್ಪಾ ಅಂದ್ರೆ, ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾದ ಕನ್ನಡ ರೀಮೇಕ್ ನಲ್ಲಿ ದರ್ಶನ್ ಬಣ್ಣ ಹಚ್ಚಲಿದ್ದಾರಂತೆ. ಯಾವ ಚಿತ್ರ, ಯಾವಾಗ ಎಂದು ತಿಳಿಯಲು ಮುಂದೆ ಓದಿ.....

ರೀಮೇಕ್ ಚಿತ್ರಕ್ಕೆ ಜೈ ಅಂತಾರ ದರ್ಶನ್.!

ರೀಮೇಕ್ ಚಿತ್ರಕ್ಕೆ ಜೈ ಅಂತಾರ ದರ್ಶನ್.!

'ಕುರುಕ್ಷೇತ್ರ'ದ ನಂತರ ಶೈಲಜಾ ನಾಗ್ ಮತ್ತು ಸಂದೇಶ ನಾಗರಾಜ್ ಅವರ ಚಿತ್ರಗಳಲ್ಲಿ ದರ್ಶನ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಹೀಗಿರುವಾಗ, ತಮಿಳಿನ ರೀಮೇಕ್ ಚಿತ್ರವೊಂದಕ್ಕೆ ದರ್ಶನ್ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಹೊಸ ಸುದ್ದಿ ಚರ್ಚೆಯಾಗುತ್ತಿದೆ.

ಕನ್ನಡದಲ್ಲಿ 'ವೀರಂ'

ಕನ್ನಡದಲ್ಲಿ 'ವೀರಂ'

ಅಜಿತ್ ಕುಮಾರ್ ಅಭಿನಯಿಸಿದ್ದ 'ವೀರಂ' ಚಿತ್ರದ ಕನ್ನಡ ರೀಮೇಕ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಎಂ.ಡಿ.ಶ್ರೀಧರ್ ಆಕ್ಷನ್ ಕಟ್.!

ಎಂ.ಡಿ.ಶ್ರೀಧರ್ ಆಕ್ಷನ್ ಕಟ್.!

ಈ ಹಿಂದೆ ನಿರ್ಧರವಾಗಿದ್ದ ಪ್ರಕಾರ ದರ್ಶನ್ ಅವರ 50ನೇ ಚಿತ್ರವನ್ನ ನಿರ್ದೇಶನ ಮಾಡುವ ಅವಕಾಶ ಎಂ.ಡಿ.ಶ್ರೀಧರ್ ಅವರಿಗೆ ಸಿಕ್ಕಿತ್ತು. ಆದ್ರೆ, 'ಕುರುಕ್ಷೇತ್ರ'ದ ಸರ್ಪ್ರೈಸ್ ಎಂಟ್ರಿ ಮಧ್ಯೆ ಎಂ.ಡಿ.ಶ್ರೀಧರ್ ಅವರ ಚಿತ್ರ ಮುಂದೂಡಲಾಗಿತ್ತು. ಈಗ, ಎಂ.ಡಿ.ಶ್ರೀಧರ್ ಅವರು ಸೈಲಾಂಟ್ ಆಗಿ ತಮ್ಮ ಚಿತ್ರದ ಕೆಲಸ ಶುರು ಮಾಡಿದ್ದಾರೆ.

'ಪೋಕಿರಿ', 'ಬುಲ್ ಬುಲ್' ನಂತರ ಮತ್ತೊಂದು?

'ಪೋಕಿರಿ', 'ಬುಲ್ ಬುಲ್' ನಂತರ ಮತ್ತೊಂದು?

ಅಂದ್ಹಾಗೆ, ನಿರ್ದೇಶಕ ಎಂ.ಡಿ.ಶ್ರೀಧರ್ ಅವರು ಈಗಾಗಲೇ ದರ್ಶನ್ ಜೊತೆ 'ಪೋಕಿರಿ' ಮತ್ತು 'ಬುಲ್ ಬುಲ್' ಅಂತಹ ರೀಮೇಕ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಈಗ ಮತ್ತೊಂದು ರೀಮೇಕ್ ಚಿತ್ರದ ಮೂಲಕ ದಾಸ ಮತ್ತು ಎಂ.ಡಿ.ಶ್ರೀಧರ್ ಜೋಡಿ ಒಂದಾಗುತ್ತಿದೆಯಂತೆ.

'ವೀರಂ' ಚಿತ್ರದ ಬಗ್ಗೆ....

'ವೀರಂ' ಚಿತ್ರದ ಬಗ್ಗೆ....

2014ರಲ್ಲಿ ಬಿಡುಗಡೆಯಾಗಿದ್ದ 'ವೀರಂ' ಚಿತ್ರವನ್ನ ಶಿವ ನಿರ್ದೇಶನ ಮಾಡಿದ್ದರು. ತಮನ್ನಾ, ಸಿದ್ಧಾರ್ಥ್, ಸಂತಾನಂ ಸೇರಿದಂತೆ ಹಲವು ಯವ ನಟರು ಅಭಿನಯಿಸಿದ್ದರು. ಇದೇ ಚಿತ್ರವನ್ನ ತೆಲುಗಿನಲ್ಲಿ ಪವನ್ ಕಲ್ಯಾಣ್ ರೀಮೇಕ್ ಮಾಡಿದ್ದರು. ಈಗ ಕನ್ನಡದಲ್ಲಿ ದರ್ಶನ್ ಅವರು ಮಾಡುವ ಸಾಧ್ಯತೆ ಇದೆ.

More from Filmibeat

English summary
Ajith Kumar's hit movie Veeram is now being remade in Kannada. Darshan is stepping into the shoes of Thala in the upcoming flick to be directed by MD Sridhar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X