»   » ಅರ್ಜುನ್, ದರ್ಶನ್ ಇಬ್ಬರಿಗೂ ಚಾಲೆಂಜ್ 'ಐರಾವತ'

ಅರ್ಜುನ್, ದರ್ಶನ್ ಇಬ್ಬರಿಗೂ ಚಾಲೆಂಜ್ 'ಐರಾವತ'

By: ಜೀವನರಸಿಕ
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ದೇಶಕ ಎಪಿ ಅರ್ಜುನ್ ನಡುವೆ ಎಲ್ಲವೂ ಸರಿ ಇಲ್ಲ. ದರ್ಶನ್ ಗೆ ಮೇಕಪ್ ಹಾಕಿಸಿ ಅರ್ಜುನ್ ಶಾಟ್ ತೆಗೆಯಲ್ಲ. ತೆಗೆದುಕೊಂಡ ಡೇಟ್ಸ್ ಮುಗಿದರೂ ಸಿನಿಮಾ ಮುಗಿದಿಲ್ಲ. ಹೀಗೆ ಏನೇನೋ ಗಾಸಿಪ್ ಗಳು ಗಾಂಧಿನಗರದಲ್ಲಿ ಹರಿದಾಡ್ತಿವೆ.

ಆದ್ರೆ 'ಐರಾವತ' ಚಿತ್ರ ದರ್ಶನ್ ಮತ್ತು ಅರ್ಜುನ್ ಇಬ್ಬರಿಗೂ ಚಾಲೆಂಜ್ ಆಗಲಿದೆ. ಐರಾವತದ ಅದ್ಧೂರಿಯಾದ 'ಅಂಬಾರಿ' ಏರಿದ್ರೆ ಮಾತ್ರ ಅರ್ಜುನ್ನ್ ಹ್ಯಾಟ್ರಿಕ್ ಹಿಟ್ ಕೊಟ್ಟ ನಿರ್ದೇಶಕರಾಗಿ ಉಳೀತಾರೆ. ಇನ್ನು ದರ್ಶನ್ ಗೆ ಇದು ಗೆಲ್ಲಲೇಬೇಕಾದ ಸಿನಿಮಾ. ಇದು ಚಾಲೆಂಜಿಂಗ್ ಸ್ಟಾರ್ ಗೂ ಹ್ಯಾಟ್ರಿಕ್ ಚಾಲೆಂಜ್. ['ಐರಾವತ' ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]


Darshan and AP Arjun awaits for Hat trick hit

'ಬೃಂದಾವನ' ಮತ್ತು 'ಅಂಬರೀಶ' ಎರಡೂ ಸಿನಿಮಾಗಳಲ್ಲಿ ದರ್ಶನ್ ನಿರಾಶೆ ಮೂಡಿಸಿದ್ದಾರೆ. 'ಬುಲ್ ಬುಲ್' ನಂತರ ಮತ್ತೊಂದು ಬಾಕ್ಸಾಫೀಸನ್ನ ದೋಚುವಂತಹ ಪರ್ಫಾಮೆನ್ಸ್ ದರ್ಶನ್ ರಿಂದ ಬರಬೇಕಾಗಿದೆ. ಐರಾವತ ಸೋತ್ರೆ ದರ್ಶನ್ ಗೆ ಇದು ಹ್ಯಾಟ್ರಿಕ್ ಸೋಲು. [ಅಂಬರೀಶ ಚಿತ್ರ ವಿಮರ್ಶೆ]


ಏನೇ ಗಾಸಿಪ್ ಗುಮ್ಮಗಳಿದ್ರೂ ದರ್ಶನ್ ಮತ್ತು ಅರ್ಜುನ್ ಸಿನಿಮಾವನ್ನ ಎಚ್ಚರಿಕೆಯಿಂದ ರೆಡಿಮಾಡ್ತಿದ್ದಾರೆ. ಸದಾ ವಿವಾದಗಳಿಂದ್ಲೇ ಸದ್ದು ಮಾಡೋ ಈ ಸೂಪರ್ ಹಿಟ್ ನಿರ್ದೇಶಕ ಹಾಗೂ ಸ್ಟಾರ್ ನಟರ ಕಾಂಬಿನೇಷನ್ ನಲ್ಲಿ ಐರಾವತ ಹೇಗಿರುತ್ತೆ ಅನ್ನೋ ಕುತೂಹಲವಷ್ಟೇ ಎಲ್ಲರ ಮುಂದಿದೆ.

English summary
Challenging Star Darshan and director AP Arjun both are awaiting for Hat Trick Hit from the upcoming movie Airawata. The movie is challenge for both of them.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada