ಜಾಮೀನು ಸಿಕ್ಮೇಲೆ ಒಮ್ಮೆನೂ ದರ್ಶನ್-ಪವಿತ್ರಾ ಗೌಡ ಭೇಟಿನೇ ಆಗಿಲ್ಲ? ಈ ದಿನದಂದೇ ಇಬ್ಬರ ಭೇಟಿ?

By ಫಿಲ್ಮಿಬೀಟ್ ಡೆಸ್ಕ್

ದರ್ಶನ್ ಹಾಗೂ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ 1 ಆಗಿದ್ದರೆ, ದರ್ಶನ್ ಎ 2 ಆಗಿದ್ದರು. ಜಾಮೀನು ಪಡೆಯುವುದಕ್ಕೆ ಹರಸಾಹಸ ಮಾಡಿದ್ದ ಇವರಿಗೆ ಕೊನೆಗೂ ರಿಲೀಫ್ ಸಿಕ್ಕಿದೆ. ಬೆನ್ನು ನೋವಿನ ಕಾರಣಕೊಟ್ಟು ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ, ಪವಿತ್ರಾ ಗೌಡ ಜಾಮೀನು ಅರ್ಜಿ ಹಲವು ಬಾರಿ ತಿರಸ್ಕೃತಗೊಂಡ ಬಳಿಕ ಹೈ ಕೋರ್ಟ್‌ನಲ್ಲಿ ಸಿಕ್ಕಿತ್ತು.

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರಿಗೂ ಒಂದೇ ದಿನ ರೆಗ್ಯೂಲರ್ ಜಾಮೀನು ಮಂಜೂರಾಗಿದೆ. ಜೈಲಿನಿಂದ ಹೊರಬಂದ್ಮೇಲೆ ಪವಿತ್ರಾ ಗೌಡ ಹಾಗೂ ದರ್ಶನ್ ಮುಖಾ ಮುಖಿಯಾಗುತ್ತಾರಾ? ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ, ಇದೂವರೆಗೂ ಈ ಜೋಡಿ ಭೇಟಿಯಾಗುವುದಕ್ಕೆ ಅವಕಾಶವೇ ಸಿಕ್ಕಿಲ್ಲ ಅನ್ನೋ ಸುದ್ದಿ ಹರಿದಾಡುತ್ತಿದೆ.

Darshan and Pavithra Gowda didn t meet after they got bail from the high court of Karnataka

ರೆಗ್ಯೂಲರ್ ಜಾಮೀನು ಸಿಕ್ಕಿದ ಬಳಿಕ ದರ್ಶನ್ ಬಗ್ಗೆ ಪವಿತ್ರಾ ಗೌಡ ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದಾರೆ. ಹೀಗಾಗಿ ಇಬ್ಬರೂ ಬೆಂಗಳೂರಿನಲ್ಲಿ ಭೇಟಿಯಾಗಬಹುದು? ಆರು ತಿಂಗಳ ಬಳಿಕ ಮತ್ತೆ ಒಟ್ಟಿಗೆ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಇದೂವರೆಗೂ ಅದು ಸಾಧ್ಯವಾಗಿಲ್ಲ. ಪವಿತ್ರಾ ಗೌಡ ಕೈಗೆ ದರ್ಶನ್ ಸಿಕ್ಕೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಬ್ಬರ ಭೇಟಿಗೂ ಒಂದು ದಿನ ಕೂಡ ಫಿಕ್ಸ್ ಆಗಿದೆಯಂತೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೋರ್ಟ್ ಅನುಮತಿ ಪಡೆದು ಮೈಸೂರಿನ ಸಮೀಪ ಇರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಇದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಜೊತೆಗೆ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಆರಾಮಾಗಿ ಓಡಾಡಿಕೊಂಡಿರುವ ದೃಶ್ಯಗಳನ್ನು ಕೂಡ ಪ್ರಸಾರ ಆಗಿವೆ. ಹೀಗಾಗಿ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಆದರೆ, ಪವಿತ್ರಾ ಗೌಡ ಮಾತ್ರ ಗಲಿಬಿಲಿಗೊಂಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದ್ದಾರೆ.

Darshan and Pavithra Gowda didn t meet after they got bail from the high court of Karnataka

ದರ್ಶನ್ ಏನೋ ಫಾರ್ಮ್ ಹೌಸ್‌ನಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಆದರೆ, ಪವಿತ್ರಾ ಗೌಡ ಮಾತ್ರ ಬೆಂಗಳೂರಿನಲ್ಲಿಯೇ ಇದ್ದಾರೆ. ಮಾಧ್ಯಮಗಳ ಪ್ರಕಾರ, ಪವಿತ್ರಾ ಗೌಡ ಅವರ ಸಂಬಂಧಿಯ ಅಪಾರ್ಟ್‌ಮೆಂಟ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದೂವರೆಗೂ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಪರಸ್ಪರ ಭೇಟಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ದರ್ಶನ್ ಭೇಟಿಯಾಗುವುದಕ್ಕೆ ಪವಿತ್ರಾ ಗೌಡ ಹಂಬಲಿಸುತ್ತಿದ್ದರು ಎನ್ನಲಾಗಿದೆ.

ಇನ್ನು ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿಗೆ ಕಾನೂನು ಅಡೆ ತಡೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ದರ್ಶನ್ ಕೋರ್ಟ್ ಅನುಮತಿ ಪಡೆದು ಮೈಸೂರಿಗೆ ಹೋಗಿದ್ದರೆ. ಇತ್ತ ದರ್ಶನ್ ಭೇಟಿ ಮಾಡುವುದಕ್ಕೆ ಪವಿತ್ರಾ ಗೌಡ ಮೈಸೂರಿಗೆ ಹೋಗಬೇಕಿದ್ರೆ ಅವರೂ ಕೂಡ ಕೋರ್ಟ್ ಅನುಮತಿಯನ್ನು ಪಡೆಯಬೇಕಿದೆ. ಅನುಮತಿ ಪಡೆದು ಫಾರ್ಮ್‌ ಹೌಸ್‌ಗೆ ಹೋದರೂ ದರ್ಶನ್ ಪತ್ನಿ ಕೆಂಡಾಮಂಡಲ ಆಗುವ ಸಾಧ್ಯತೆಯಿದೆ. ಈ ಕಾರಣಕ್ಕೆ ಬೆಂಗಳೂರಿನಲ್ಲೇ ಇದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ.

ಇನ್ನು ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾ ಮುಖಿಗೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ಜನವರಿ 10ರಂದು ಇಬ್ಬರೂ ಕೋರ್ಟ್‌ನಲ್ಲಿ ಭೇಟಿಯಾಗಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳು ವಿಚಾರಣೆಗೆ ತಪ್ಪದೆ ಹಾಜರಾಗಬೇಕಿದೆ. 57ನೇ ಸಿಸಿಎಚ್ ನ್ಯಾಯಾಧೀಶರ ಮುಂದೆ ಅಷ್ಟೂ ಜನ ಆರೋಪಿಗಳು ಹಾಜರಾಗಬೇಕು. ಅದೇ ದಿನ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಎದುರು ಬದುರಾಗುತ್ತಾರೆಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Darshan and Pavithra Gowda didn't meet after they got bail from the high court of Karnataka;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X