For Quick Alerts
  ALLOW NOTIFICATIONS  
  For Daily Alerts

  ಯಶ್, ರಕ್ಷಿತ್, ಕಿಚ್ಚನಂತೆ ಯಾರೂ ಇಲ್ಲ ಎಂದ ಬೆಂಗಳೂರು ಎಫ್‌ಸಿ: ಯಾಕೆ ಅಪ್ಪು, ದರ್ಶನ್ ಇಲ್ವಾ?

  |

  ಸಾಮಾಜಿಕ ಜಾಲತಾಣದಲ್ಲಿ ಫುಟ್‌ಬಾಲ್ ಕ್ಲಬ್ ಬೆಂಗಳೂರು ಎಫ್ ಸಿ ಮಾಡಿರುವ ಪೋಸ್ಟ್ ಒಂದು ಇದೀಗ ದರ್ಶನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಇಂದು ( ಸೆಪ್ಟೆಂಬರ್ 7 ) ವಿಶೇಷವಾಗಿ ಎಡಿಟ್ ಮಾಡಿರುವ ಚಿತ್ರವೊಂದನ್ನು ಬೆಂಗಳೂರು ಎಫ್ ಸಿ ತನ್ನ ಅಧಿಕೃತ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಯಶ್ ಹಾಗೂ ಸುದೀಪ್ ಅವರ ಫೋಟೊಗಳನ್ನು ಬಳಸಿ ಬೆಂಗಳೂರು ಫುಟ್‌ಬಾಲ್ ತಂಡದ ಜೆರ್ಸಿ ತೊಡಿಸಿ ಎಡಿಟ್ ಮಾಡಲಾಗಿದೆ. 'ಅವರಂತೆ ಯಾರೂ ಇಲ್ಲ' ಎಂದೂ ಸಹ ಚಿತ್ರದಲ್ಲಿ ಬರೆಯಲಾಗಿದೆ.

  ಹೀಗೆ ಎಡಿಟ್ ಮಾಡಲಾಗಿರುವ ಫೋಟೊವನ್ನು ಅಪ್‌ಲೋಡ್ ಮಾಡಿರುವ ಬೆಂಗಳೂರು ಎಫ್ ಸಿ "ಕಿಚ್ಚ ಸುದೀಪ್, ಯಶ್, ರಕ್ಷಿತ್ ಶೆಟ್ಟಿ ಅಂತೆ ಯಾರೂ ಇಲ್ಲ!' ಎಂದು ಕ್ಯಾಪ್ಷನ್ ಬರೆದುಕೊಂಡಿದೆ. ಇನ್ನು ಫೇಸ್‌ಬುಕ್ ಹಾಗೂ ಟ್ವಿಟರ್‌ನಲ್ಲಿ ಈ ಪೋಸ್ಟ್ ನೋಡಿದ ಈ ಮೂವರು ನಟರ ಅಭಿಮಾನಿಗಳು ಸಂತಸದಿಂದ ಲೈಕ್ ಬಟನ್ ಒತ್ತಿದ್ದರೆ, ದರ್ಶನ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಎಲ್ಲಾ ಸರಿ ಆದರೆ ಈ ಚಿತ್ರದಲ್ಲಿ ನಮ್ಮ ಡಿ ಬಾಸ್ ಚಿತ್ರವನ್ನು ಏಕೆ ಹಾಕಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.

  ಹೀಗೆ ಬೆಂಗಳೂರು ಎಫ್‌ಸಿ ಮಾಡಿರುವ ಟ್ವೀಟ್‌ನಲ್ಲಿ ದರ್ಶನ್ ಅಭಿಮಾನಿಗಳು ಕಾಮೆಂಟ್ ಮಾಡಲು ಆರಂಭಿಸುತ್ತಿದ್ದಂತೆ ಸಾಮಾನ್ಯವಾಗಿ ಫ್ಯಾನ್ ವಾರ್ ಆರಂಭಗೊಂಡಿದೆ. ಕೂಡಲೇ ಈ ಪೋಸ್ಟ್ ಡಿಲಿಟ್ ಮಾಡಿ ಎಂದು ದರ್ಶನ್ ಫ್ಯಾನ್ಸ್ ಕಾಮೆಂಟ್ ಮಾಡಿದ್ದರೆ, ಯಶ್ ಹಾಗೂ ಸುದೀಪ್ ಅಭಿಮಾನಿಗಳು ಪೋಸ್ಟ್ ಸರಿಯಾಗಿಯೇ ಇದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.

  ಅವರಂತೆ ಯಾರೂ ಇಲ್ಲ; ಯಾಕೆ ದರ್ಶನ್ ಇಲ್ವಾ?

  ಅವರಂತೆ ಯಾರೂ ಇಲ್ಲ; ಯಾಕೆ ದರ್ಶನ್ ಇಲ್ವಾ?

  "ಈ ರೀತಿ ಪೋಸ್ಟ್‌ಗಳನ್ನು ಮಾಡುವುದರಿಂದಲೇ ಫ್ಯಾನ್ ವಾರ್ ಶುರುವಾಗುವುದು ಎಂದು ಕೆಲ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಇಂಥ ಪೋಸ್ಟ್‌ಗಳನ್ನು ಮಾಡುವಾಗ ಸರಿಯಾದ ಕ್ಯಾಪ್ಷನ್ ಬಳಸಿ ಎಂದಿದ್ದಾರೆ. ಅವರಂತೆ ಯಾರೂ ಇಲ್ಲ ಎಂದು ಹೊಗಳುವ ಭರದಲ್ಲಿ ಬೇರೆ ನಟರ ಅಭಿಮಾನಿಗಳಲ್ಲಿ ಬೇಸರ ಮೂಡುವಂತೆ ಮಾಡಬೇಡಿ, ಯಾಕೆ ಅವರಂತೆ ದರ್ಶನ್ ಇಲ್ವಾ" ಎಂದು ಕಾಮೆಂಟ್ ಮಾಡಿದ್ದಾರೆ.

  ದರ್ಶನ್ ಅಭಿಮಾನಿ ಟಾಂಗ್

  ದರ್ಶನ್ ಅಭಿಮಾನಿ ಟಾಂಗ್

  ಇನ್ನು ಕೆಲ ದರ್ಶನ್ ಅಭಿಮಾನಿಗಳು ಈ ಪೋಸ್ಟ್‌ ವಿರುದ್ಧ ಕಾಮೆಂಟ್ ಮೂಲಕ ಕಿಡಿಕಾರಿದ್ದರೆ, ಇನ್ನೂ ಕೆಲ ಅಭಿಮಾನಿಗಳು ಇದೇ ಬೆಂಗಳೂರು ಎಫ್ ಸಿ ಈ ಹಿಂದೆ ಕೇವಲ ದರ್ಶನ್ ಅವರ ಚಿತ್ರವನ್ನು ಹಂಚಿಕೊಂಡಿದ್ದರ ಸ್ಕ್ರೀನ್‌ಶಾಟ್ ಹಾಕಿ "ಆನೆ ಯಾವತ್ತಿದ್ರೂ ಸಿಂಗಲ್ ಆಗಿಯೇ ಬರೋದು" ಎನ್ನುತ್ತಿದ್ದಾರೆ. ಈ ಹಿಂದೊಮ್ಮೆ ಬೆಂಗಳೂರು ಎಫ್ ಸಿ ದರ್ಶನ್ ಅಭಿನಯದ ಯಜಮಾನ ಚಿತ್ರದ ಫೋಟೊ ಹಂಚಿಕೊಂಡು ಆನೆ ನಡೆದಿದ್ದೇ ದಾರಿ ಎಂದು ಬರೆದುಕೊಂಡಿತ್ತು.

  ಅಪ್ಪು ಅಭಿಮಾನಿಗಳಲ್ಲೂ ಬೇಸರ

  ಅಪ್ಪು ಅಭಿಮಾನಿಗಳಲ್ಲೂ ಬೇಸರ

  ಇನ್ನು ಈ ಪೋಸ್ಟ್ ಕೇವಲ ದರ್ಶನ್ ಅಭಿಮಾನಿಗಳಲ್ಲಷ್ಟೇ ಅಲ್ಲದೇ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಲ್ಲಿಯೂ ಬೇಸರ ಮೂಡಿಸಿದೆ. ಅಪ್ಪು ಫ್ಯಾನ್ಸ್ ಕೂಡ ಪುನೀತ್ ರಾಜ್‌ಕುಮಾರ್ ಅವರ ಚಿತ್ರವನ್ನೇಕೆ ಹಾಕಿಲ್ಲ ಎಂದು ಬೆಂಗಳೂರು ಎಫ್ ಸಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಅಪ್ಪು ಇಲ್ಲ ಎಂದು ಈ ರೀತಿ ನಿರ್ಲಕ್ಷಿಸುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿರುವ ಅಪ್ಪು ಫ್ಯಾನ್ಸ್ ಈ ಪೋಸ್ಟ್‌ ಅನ್ನು ವಿರೋಧಿಸಿದ್ದಾರೆ.

  ಇಲ್ಲೂ ಕೆಲ ಅಭಿಮಾನಿಗಳ ಕಿತ್ತಾಟ

  ಇಲ್ಲೂ ಕೆಲ ಅಭಿಮಾನಿಗಳ ಕಿತ್ತಾಟ

  ಇನ್ನು ಈ ಟ್ವೀಟ್‌ನ ಕಾಮೆಂಟ್ ವಿಭಾಗದಲ್ಲಿಯೂ ಫ್ಯಾನ್ ವಾರ್ ನಡೆದಿದೆ. ಕೆಲ ಸುದೀಪ್ ಹಾಗೂ ಯಶ್ ಅಭಿಮಾನಿಗಳು ಬೆಂಗಳೂರು ಎಫ್‌ಸಿ ಕೇವಲ ಒಂದನೇ ಶ್ರೇಣಿಯ ನಟರ ಚಿತ್ರಗಳನ್ನು ಹಂಚಿಕೊಂಡಿದೆ ಹಾಗೂ ಇಲ್ಲಿಯೂ ದರ್ಶನ್ ಅವರನ್ನು ಬ್ಯಾನ್ ಮಾಡಿದ್ದಾರೆ ಎಂದು ಕಾಮೆಂಟ್ ಮಾಡಿದ್ದರೆ, ಈ ಕಾಮೆಂಟ್‌ಗಳಿಗೆ ದರ್ಶನ್ ಫ್ಯಾನ್ಸ್ ಪ್ರತ್ಯುತ್ತರ ನೀಡುತ್ತಿದ್ದಾರೆ. ಹೀಗೆ ದರ್ಶನ್ ಮತ್ತು ಯಶ್, ಸುದೀಪ್ ಫ್ಯಾನ್ಸ್ ನಡುವೆ ಫ್ಯಾನ್ ವಾರ್ ನಡೆದಿದೆ.

  English summary
  Darshan and Puneeth Rajkumar fans opposed Bengaluru FC's latest post. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X