ರಾಜಿಗೆ ಕಾನೂನಿನ ಅಡಿ ಅವಕಾಶ ಇಲ್ಲ: ಬಿ.ವಿ. ಆಚಾರ್ಯ

77 ವರ್ಷದ ಆಚಾರ್ಯರು ವಕೀಲಿ ವೃತ್ತಿಯಲ್ಲಿ 55 ವರ್ಷ ಸವೆಸಿದ್ದಾರೆ. ದಕ್ಷಿಣ ಕನ್ನಡದ ಉಡುಪಿ ತಾಲೂಕಿನ ಬೆಲುಪೂರು ಗ್ರಾಮದ ಆಚಾರ್ಯರು ಇತ್ತೀಚೆಗೆ ಐದನೆಯ ಬಾರಿಗೆ ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, 498ಎ ಅಡಿ ದಾಖಲಾಗುವ ದೂರುಗಳು 'ರಾಜಿ ಸಂಧಾನಕ್ಕೆ ಯೋಗ್ಯ' ಎಂದು ಪರಿಗಣಿಸುವಂತೆ ಕಾನೂನು ಆಯೋಗಕ್ಕೆ ವಿಪರೀತ ಒತ್ತಡಗಳು ಬರುತ್ತಿವೆ. ಆದರೆ ಆ ಬಗ್ಗೆ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಕಾರಣ, ರಾಜಿಗೆ ಕಾನೂನಿನ ಅಡಿ ಅವಕಾಶ ಇಲ್ಲ ಎಂದಿದ್ದಾರೆ.
ಮಾಜಿ ನ್ಯಾಯಮೂರ್ತಿ ರವಿ ಬಿ. ನಾಯಕ್ ಹಾಗೂ ಹಿರಿಯ ವಕೀಲ ಎಂ.ಟಿ.ನಾಣಯ್ಯ ಅವರ ಪ್ರಕಾರ, ಯಾವುದೇ ಪ್ರಕರಣದಲ್ಲಿ ಕೊಲೆಗೆ ಯತ್ನ ನಡೆಸಿರುವುದು ಸಾಬೀತಾದರೆ ಅದಕ್ಕೆ ಜೀವಾವಧಿ ಶಿಕ್ಷೆಯಾಗುತ್ತದೆ. ಇಂತಹ ಪ್ರಕರಣದಲ್ಲಿ ರಾಜಿಯ ಪ್ರಶ್ನೆ ಇಲ್ಲ.
ಒಂದು ವೇಳೆ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲದ ಸಂದರ್ಭದಲ್ಲಿ ಮಾತ್ರ ದೂರನ್ನು ನ್ಯಾಯಾಲಯ ರದ್ದು ಮಾಡಬಹುದು. ಇದೇ ಅಭಿಪ್ರಾಯ ರಾಜ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಎಸ್. ಚಂದ್ರಮೌಳಿ ಅವರದ್ದು. ಅವರ ಪ್ರಕಾರ ಈ ಪ್ರಕರಣವನ್ನು ಪೊಲೀಸರು ಅಷ್ಟು ಸುಲಭದಲ್ಲಿ ಮುಚ್ಚಿಹಾಕಲು ಆಗುವುದಿಲ್ಲ.


Click it and Unblock the Notifications











