ಏಪ್ರಿಲ್ ತಿಂಗಳಲ್ಲೇ ದರ್ಶನ್ ಬುಲ್ ಬುಲ್ ತೆರೆಗೆ?

By Rajendra

ಇದು ಏಪ್ರಿಲ್ ಫೂಲ್ ಸಮಾಚಾರ ಅಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರ ಏಪ್ರಿಲ್ ನಲ್ಲೇ ತೆರೆಕಾಣಲಿದೆ ಎನ್ನುತ್ತಿವೆ ಮೂಲಗಳು. ಆದರೆ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಅಭಿನಯಿಸಿದ್ದಾರೆ. ಆದ ಕಾರಣ ಚುನಾವಣೆ ನೀತಿ ಸಂಹಿತೆ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡುತ್ತದೆಯೇ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಆದರೆ ಚಿತ್ರತಂಡ ಮಾತ್ರ ಬುಲ್ ಬುಲ್ ಚಿತ್ರ ಏಪ್ರಿಲ್ ನಲ್ಲೇ ತೆರೆಗೆ ಬರುತ್ತಿದೆ ಎನ್ನುತ್ತಿದೆ. ರಚಿತಾ ರಾಮ್ ನಾಯಕಿಯಾಗಿರುವ ಬುಲ್ ಬುಲ್ ಚಿತ್ರ ತೆಲುಗಿನ ಡಾರ್ಲಿಂಗ್ ರೀಮೇಕ್. ಬೆಂಗಳೂರು, ಗೋವಾ ಹಾಗೂ ಮೈಸೂರಿನಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ಸರಿಸುಮಾರು ರು.8 ಕೋಟಿ ಬಜೆಟ್ ನಲ್ಲಿ ಬುಲ್ ಬುಲ್ ಚಿತ್ರವನ್ನು ನಿರ್ಮಿಸಲಾಗಿದೆ. ಈಗಾಗಲೆ ಚಿತ್ರದ ಸ್ಯಾಟಲೈಟ್ ರೈಟ್ಸ್ ರು.4.15 ಕೋಟಿಗೆ ಮಾರಾಟವಾಗಿವೆ. ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಚಿತ್ರಕ್ಕೆ ದಿನಕರ್ ತೂಗುದೀಪ ನಿರ್ಮಾಪಕರು.

ದರ್ಶನ್ ಚಿತ್ರಗಳು ರೀಮೇಕ್ ಆದರೂ ಸರಿ ಸ್ವಮೇಕ್ ಆದರೂ ಸರಿ ಅಭಿಮಾನಿಗಳು ತಲೆಕೆಡಿಸಿಕೊಳ್ಳಲ್ಲ. ಇನ್ನು ಇಂಡಸ್ಟ್ರಿಯಲ್ಲಿ ಚಿತ್ರ ದುಡ್ಡು ಮಾಡ್ತಾ ಇಲ್ವಾ ಎಂಬ ಎರಡೇ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತದೆ. ದುಡ್ಡು ಮಾಡಿದರೆ ಇನ್ನೊಂದು ರೀಮೇಕ್. ಇಲ್ಲದಿದ್ದರೆ ಹೊಸ ಪ್ರಯತ್ನ. ಅಂದಹಾಗೆ ಬುಲ್ ಬುಲ್ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. (ಏಜೆನ್ಸೀಸ್)

More from Filmibeat

English summary
Challenging star Darshan's upcoming film BulBul to be releases April. The film directed by MD Sridhar has Darshan, Ambareesh and newbie Rachita Ram in lead roles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X