ನಿರ್ದೇಶಕ ಪ್ರೇಮ್ ಗಾಗಿ ತನ್ನ ಹಳೆ ನಿಯಮ ಮುರಿದ ದಾಸ ದರ್ಶನ್!
Recommended Video

ನಟ ದರ್ಶನ್ ಸದ್ಯ 'ಕುರುಕ್ಷೇತ್ರ' ಸಿನಿಮಾದಲ್ಲಿ ಬಿಜಿ ಇದ್ದಾರೆ. 'ಕುರುಕ್ಷೇತ್ರ'ದಲ್ಲಿ ದುರ್ಯೋಧನನಾಗಿ ಅಬ್ಬರಿಸಿರುವ ದರ್ಶನ್ ನೋಡುವುದಕ್ಕೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಆದರೆ ತಮ್ಮ ಫ್ಯಾನ್ಸ್ ಗಳಿಗೆ ದರ್ಶನ್ ಈಗ ಮತ್ತೊಂದು ಸುದ್ದಿ ಕೊಟ್ಟಿದ್ದಾರೆ.
ಈ ಹಿಂದೆಯೇ ನಿರ್ದೇಶಕ ಪ್ರೇಮ್ ಜೊತೆ ದರ್ಶನ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಆ ಸುದ್ದಿ ಪಕ್ಕಾ ಆಗಿದೆ. 'ಕುರುಕ್ಷೇತ್ರ' ನಂತರ ದರ್ಶನ್ ನಿರ್ದೇಶಕ ಪ್ರೇಮ್ ಗ್ಯಾಂಗ್ ಸೇರಲಿದ್ದಾರೆ. ಈ ಹಿಂದೆ 'ಕರಿಯ' ಸಿನಿಮಾ ಮಾಡಿದ್ದ ಈ ಜೋಡಿ 14 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದೆ. ಇದರ ಜೊತೆಗೆ ನಿರ್ದೇಶಕ ಪ್ರೇಮ್ ಗಾಗಿ ದರ್ಶನ್ ತಮ್ಮ ಹಳೆಯ ನಿಯಮವನ್ನು ಕೈ ಬಿಟ್ಟಿದ್ದಾರೆ. ಮುಂದೆ ಓದಿ...

ದರ್ಶನ್ ಕಾಲ್ ಶೀಟ್
ದರ್ಶನ್ 'ತಾರಕ್' ಚಿತ್ರದ ಸಂಧರ್ಭದಲ್ಲಿ ಒಂದು ನಿರ್ಧಾರ ತೆಗೆದುಕೊಂಡಿದ್ದರು. ''ಇನ್ನು ಮುಂದೆ ಐತಿಹಾಸಿಕ ಅಥವಾ ಪೌರಾಣಿಕ ರೀತಿಯ ಸಿನಿಮಾವನ್ನು ಬಿಟ್ಟು ಬೇರೆ ಸಿನಿಮಾಗಳಿಗೆ ಹೆಚ್ಚು ಅಂದರೆ 65 ದಿನ ಕಾಲ್ ಶೀಟ್ ನೀಡುತ್ತಾನೆ'' ಎಂದಿದ್ದರು. ಅದೇ ರೀತಿ 'ತಾರಕ್' ಸಿನಿಮಾ 65 ದಿನಗಳ ಒಳಗೆ ಚಿತ್ರೀಕರಣ ಮುಗಿದಿತ್ತು.

ನಿರ್ಧಾರ ಬದಲಿಸಿದ ಡಿ ಬಾಸ್
65 ದಿನ ಕಾಲ್ ಶೀಟ್ ನೀಡುವ ನಿಯಮವನ್ನು ದರ್ಶನ್ ಪ್ರೇಮ್ ಅವರಿಗಾಗಿ ಮುರಿದಿದ್ದಾರೆ. ಪ್ರೇಮ್ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ದರ್ಶನ್ 65 ದಿನಗಳ ಬದಲಿಗೆ 85 ದಿನಗಳನ್ನು ನೀಡಿದ್ದಾರಂತೆ.

'ಆಂಜನೇಯ'
ದರ್ಶನ್ ಮತ್ತು ನಿರ್ದೇಶಕ ಪ್ರೇಮ್ ಅವರ ಈ ಹೊಸ ಚಿತ್ರಕ್ಕೆ ಈ ಹಿಂದೆಯೇ 'ಆಂಜನೇಯ' ಎಂಬ ಟೈಟಲ್ ಫಿಕ್ಸ್ ಆಗಿತ್ತು.

ಸದ್ಯ ಇಬ್ಬರು ಬಿಜಿ
ಸದ್ಯ ದರ್ಶನ್ ಅವರ 'ಕುರುಕ್ಷೇತ್ರ' ಚಿತ್ರೀಕರಣ ಇನ್ನೂ ಬಾಕಿ ಇದ್ದು, ಆ ಸಿನಿಮಾದ ನಂತರ 'ಆಂಜನೇಯ' ಸಿನಿಮಾ ಸೆಟ್ಟೇರಲಿದೆ. ಪ್ರೇಮ್ ಕೂಡ ತಮ್ಮ 'ದಿ ವಿಲನ್' ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

'ಹೆಬ್ಬುಲಿ' ನಿರ್ಮಾಪಕ
ದರ್ಶನ್ ಮತ್ತು ಪ್ರೇಮ್ ಕಾಂಬಿನೇಶನ್ ನಲ್ಲಿ ಬರುವ ಈ ಚಿತ್ರಕ್ಕೆ 'ಹೆಬ್ಬುಲಿ' ಸಿನಿಮಾದ ನಿರ್ಮಾಪಕ ಉಮಾಪತಿ ಬಂಡವಾಳ ಹಾಕಲಿದ್ದಾರಂತೆ.

14 ವರ್ಷದ ನಂತರ
'ಕರಿಯ' ಸಿನಿಮಾ ಮಾಡಿ ದರ್ಶನ್ ಮತ್ತು ಪ್ರೇಮ್ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಯಶಸ್ಸು ಗಳಿಸಿದ್ದರು. ಈಗ ಈ ಯಶಸ್ವಿ ಜೋಡಿ 14 ವರ್ಷಗಳ ಬಳಿಕ ಒಂದಾಗುತ್ತಿದ್ದು, ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬಹಳ ದೊಡ್ಡದಿದೆ.


Click it and Unblock the Notifications











