For Quick Alerts
  ALLOW NOTIFICATIONS  
  For Daily Alerts

  ಸಿದ್ಧಗಂಗಾ ಮಠದ ಮಹತ್ವದ ಕೆಲಸಕ್ಕೆ ಜೊತೆಯಾದ 'ಯಜಮಾನ'

  |

  ನಡೆದಾಡುವ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಡಾ ಶಿವಕುಮಾರ ಸ್ವಾಮೀಜಿ ಇತ್ತೀಚಿಗಷ್ಟೆ ಲಿಂಗೈಕರಾಗಿದ್ದರು. ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ಜಗತ್ತಿಗೆ ಮಾದರಿಯಾಗಿದ್ದ ಸಿದ್ಧಗಂಗಾ ಮಠ ಇಂದು ಶ್ರೀಗಳಿಲ್ಲದೇ ಅನಾಥವಾಗಿದೆ.

  ಈಗ ಶಿವಕುಮಾರ ಸ್ವಾಮೀಜಿ ಹಾಕಿಕೊಟ್ಟ ಮಾರ್ಗದಲ್ಲಿ ಕಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ ಕೋಟ್ಯಾಂತರ ಮಕ್ಕಳು, ಭಕ್ತರು ಸಾಗಬೇಕಿದೆ. ಇಂತಹ ಮಠಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಭಕ್ತರು.

  ಶ್ರೀಗಳ ಅಂತಿಮ ದರ್ಶನ ಪಡೆದ ನಟ ದರ್ಶನ್

  ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನ ಪಡೆಯುವ ಮೂಲಕ ನಾನೊಬ್ಬ ನಿಷ್ಠವಂತ ಭಕ್ತ ಎಂದು ತೋರಿದ್ದರು. ಅಷ್ಟೇ ಅಲ್ಲದೇ ಸಿದ್ಧಗಂಗಾ ಮಠಕ್ಕೆ ತಮ್ಮ ಕೈಲಾದ ಸಹಾಯವನ್ನ ಮಾಡಲು ದಾಸ ನಿರ್ಧರಿಸಿದ್ದಾರಂತೆ.

  'ಯಜಮಾನ'ನ 'ಬಸಣ್ಣಿ' ಪದದ ಅರ್ಥ ಗೊತ್ತಾಯ್ತು.!

  ಹೌದು, ಸಿದ್ಧಗಂಗಾ ಮಠದಲ್ಲಿ ನಡೆಯುವ ದಾಸೋಹಕ್ಕೆ ಪ್ರತಿ ತಿಂಗಳು 2 ಕ್ವಿಂಟೋಲ್ ಅಕ್ಕಿ, ಬೇಳೆ, ಸಕ್ಕರೆಯನ್ನ ನೀಡಲು ಚಾಲೆಂಜಿಂಗ್ ಸ್ಟಾರ್ ಮುಂದಾಗಿದ್ದಾರಂತೆ. ಹೀಗಂತ ಸಿದ್ಧಗಂಗಾ ಮಠದ ಅನುಯಾಯಿ ಫೇಸ್ ಬುಕ್ ಪೇಜ್ ಗಳು ಪ್ರಕಟ ಮಾಡಿವೆ. ಇದನ್ನ ಗಮನಿಸಿದ ದರ್ಶನ್ ಫ್ಯಾನ್ಸ್ ಕ್ಲಬ್ ಗಳು ನೆಚ್ಚಿನ ನಟನ ಕೆಲಸವನ್ನ ಕೊಂಡಾಡಿದೆ.

  ಒಂದು ಕೈಯಲ್ಲಿ ಮಾಡಿದ ಸಹಾಯವನ್ನ ಇನ್ನೊಂದು ಕೈಗೆ ಗೊತ್ತಾಗದೇ ಹಾಗೆ ಕಾಪಾಡುವುದು ದರ್ಶನ್ ಅವರ ವ್ಯಕ್ತಿತ್ವ. ತಾವು ಮಾಡುವ ಸಮಾಜಮುಖಿ ಕೆಲಸಗಳ ಬಗ್ಗೆ ಎಲ್ಲಿಯೂ ಮಾತನಾಡಲ್ಲ. ಬಹುಶಃ ಇದು ಕೂಡ ಹಾಗೆ ಇರಬಹುದು ಎಂದು ಹೇಳಲಾಗ್ತಿದೆ.

  English summary
  Kannada actor, challenging star darshan have contribute to siddaganga mutt monastery

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X