For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಆಡಿಯೋ ಬಿಡುಗಡೆಗೆ ಮುಹೂರ್ತ ನಿಗದಿ

  By Bharath Kumar
  |
  ಶೀಘ್ರದಲ್ಲೇ ಕುರುಕ್ಷೇತ್ರ ಆಡಿಯೋ ರಿಲೀಸ್ | FIlmibeat Kannada

  ಶೂಟಿಂಗ್ ಮುಗಿಸಿ ಸದ್ದಿಲ್ಲದೇ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಕೊಂಡಿರುವ 'ಕುರುಕ್ಷೇತ್ರ' ಚಿತ್ರತಂಡದಿಂದ ತಾಜಾ ಸುದ್ದಿ ಹೊರಬಿದ್ದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ 50ನೇ ಸಿನಿಮಾದ ಆಡಿಯೋ ಬಿಡುಗಡೆಗೆ ವೇದಿಕೆ ಸಜ್ಜಾಗುತ್ತಿದೆ.

  ಈಗಾಗಲೇ 'ಕುರುಕ್ಷೇತ್ರ' ಚಿತ್ರದ ಆಡಿಯೋ ಹಕ್ಕು ದುಬಾರಿ ಬೆಲೆಗೆ ಮಾರಾಟವಾಗಿದ್ದು, ಇದೇ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವ ತಯಾರಿ ನಡೆಸಲಾಗಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಏಪ್ರಿಲ್ ಅಂತ್ಯಕ್ಕೆ 'ಕುರುಕ್ಷೇತ್ರ' ಹಾಡುಗಳು ನಿಮ್ಮ ಮುಂದೆ ಬರಬಹುದು.

  ವಿ ಹರಿಕೃಷ್ಣ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ತಕ್ಕಂತೆ ಹಾಡುಗಳು ಮತ್ತು ಶ್ಲೋಕ, ಪದ್ಯಗಳು ಚಿತ್ರದಲ್ಲಿದೆಯಂತೆ.

  ಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡಕ್ಕಾಗಿ 'ಡಿ-ಬಾಸ್' ಜಗಳಹೈದರಾಬಾದ್ ಹೋಟೆಲ್ ನಲ್ಲಿ ಕನ್ನಡಕ್ಕಾಗಿ 'ಡಿ-ಬಾಸ್' ಜಗಳ

  ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸವೂ ಪೂರ್ತಿಯಾಗಿದ್ದು, ಚಿತ್ರದ ಪೈನಲ್ ಕಾಪಿ ಸಿದ್ದವಾಗಿದೆಯಂತೆ. ಈಗೇನಿದ್ರು ಸೆನ್ಸಾರ್ ಮಂಡಳಿ ಎದುರು ಸಿನಿಮಾ ಹೋಗಲಿದ್ದು, ಆದಷ್ಟೂ ಬೇಗ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.

  <span class=ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ದರ್ಶನ್ " title="ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ದರ್ಶನ್ " />ರಾಮೋಜಿ ಫಿಲ್ಮ್ ಸಿಟಿಗೆ ಹೋಗುವುದು 'ಶಾಪ'ವೆಂದ ದರ್ಶನ್

  ಇನ್ನುಳಿದಂತೆ ನಾಗಣ್ಣ ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿದ್ದು, ಮುನಿರತ್ನ ಅವರ ಬಂಡವಾಳ ಹಾಕಿದ್ದಾರೆ. ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ.

  English summary
  The music rights of the mythological drama Muniratna Kurukshetra has been sold to Lahari audio company for a huge price. The makers, meanwhile are preparing for a mega audio launch, which in all likelihood, will take place by end of April.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X