»   » ದರ್ಶನ್ 49ನೇ ಚಿತ್ರಕ್ಕೆ ಒಬ್ಬರು ಶೃತಿ ಹರಿಹರನ್, ಮತ್ತೊಬ್ಬರು?

ದರ್ಶನ್ 49ನೇ ಚಿತ್ರಕ್ಕೆ ಒಬ್ಬರು ಶೃತಿ ಹರಿಹರನ್, ಮತ್ತೊಬ್ಬರು?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲಿರುವ 49ನೇ ಚಿತ್ರದ ನಾಯಕಿಯರದ್ದೇ ಟಾಕ್. ದರ್ಶನ್ ಅವರು ಇನ್ನೂ 'ಚಕ್ರವರ್ತಿ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ದರ್ಶನ್ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

ಡಿಸೆಂಬರ್ ತಿಂಗಳಲ್ಲಿ ದರ್ಶನ್ ಅಭಿನಯದ 'ಚಕ್ರವರ್ತಿ' ಬಿಡುಗಡೆಯಾಗಲಿದೆ. ಅದಾದ ನಂತರ ಯಾವ ಚಿತ್ರ ಎಂಬ ನಿರೀಕ್ಷೆ ಸಾಮಾನ್ಯವಾಗಿತ್ತು. ಈ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದ್ದು, 'ಡಿ ಕಂಪನಿ' ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

ಹೌದು, ದರ್ಶನ್ ಅವರ 49ನೇ ಚಿತ್ರವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡಲಿದ್ದು, ಈಗಾಗಲೇ ಚಿತ್ರದ ತಯಾರಿ ನಡೆಯುತ್ತಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ದರ್ಶನ್ ಗೆ ಇಬ್ಬರು ನಾಯಕಿಯರಿದ್ದು, 'ಜಗ್ಗುದಾದ' ಜೊತೆಯಲ್ಲಿ ಡುಯೆಟ್ ಹಾಡಲಿರುವ ನಾಯಕಿಯರಿಗಾಗಿ ಡೈರೆಕ್ಟರ್ ಪ್ರಕಾಶ್ ಹುಡುಕಾಟದಲ್ಲಿದ್ದಾರೆ. ಮುಂದೆ ಓದಿ...

ದರ್ಶನ್ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 49ನೇ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಡಿಸೆಂಬರ್ 9 ರಂದು ಸಿನಿಮಾ ಸೆಟ್ಟೇರಲಿದೆಯಂತೆ.

ನಿರ್ದೇಶಕರು ಯಾರು?

ಮಿಲನ ಪ್ರಕಾಶ್ ದರ್ಶನ್ ಅವರ 49ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಈಗಾಗಲೇ ನಾಯಕಿಯರ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

ಮಿಲನ ಪ್ರಕಾಶ್ ನಿರ್ದೇಶನದ ಮೇಲೆ ನಿರೀಕ್ಷೆ

ಲವ್ ಸ್ಟೋರಿ ಸಿನಿಮಾಗಳಿಗೆ ಹೇಳಿ ಮಾಡಿಸಿದ ನಿರ್ದೇಶಕ ಮಿಲನ ಪ್ರಕಾಶ್. 'ಖುಷಿ', 'ರಿಷಿ', 'ಮಿಲನ', 'ವಂಶಿ', 'ಸಿದ್ದಾರ್ಥ್' ಅಂತಹ ರೊಮ್ಯಾಂಟಿಕ್ ಸಬ್ಜೆಕ್ಟ್ ಗಳನ್ನ ಕೊಟ್ಟಿರುವ ಪ್ರಕಾಶ್, ದರ್ಶನ್ ಗೂ ಅಂತಹದ್ದೇ ಸಿನಿಮಾ ಮಾಡ್ತಾರ ಎಂಬ ಕುತೂಹಲ ಗಾಂಧಿನಗರದಲ್ಲಿ ಹುಟ್ಟಿಕೊಂಡಿದೆ.

ಇಬ್ಬರು ನಾಯಕಿಯರು

ಮಿಲನ ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಇಬ್ಬರು ನಾಯಕಿಯರಲಿದ್ದಾರಂತೆ. ಈಗಾಗಲೇ ದರ್ಶನ್ ಅವರ ಜೊತೆ ಅಭಿನಯಿಸಲಿರುವ ಇಬ್ಬರು ಹೀರೋಯಿನ್ ಗಳನ್ನ ನಿರ್ದೇಶಕರು ಆಯ್ಕೆ ಕೂಡ ಮಾಡಿದ್ದರಂತೆ.

ದರ್ಶನ್ ಜೊತೆ ಶೃತಿ ಹರಿಹರನ್

'ದಾಸ'ನ 49ನೇ ಚಿತ್ರದಲ್ಲಿ ಲೂಸಿಯಾ ಬೆಡಗಿ ಶೃತಿ ಹರಿಹರನ್ ನಾಯಕಿಯಾಗಿ ಆಯ್ಕೆ ಆಗಿದ್ದಾರಂತೆ. ಇಬ್ಬರು ಹೀರೋಯಿನ್ ಗಳ ಪೈಕಿ, ಶೃತಿ ಹರಿಹರನ್ ಒಬ್ಬರಾಗಲಿದ್ದಾರಂತೆ. ಈಗಾಗಲೇ ಶೃತಿ ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದು, ಬಹುತೇಕ ಖಚಿತವಾಗಿದೆಯಂತೆ.

ಮತ್ತೊಬ್ಬ ನಾಯಕಿ ಯಾರು?

ದರ್ಶನ್ ಗೆ ಮತ್ತೊಬ್ಬ ನಾಯಕಿಯಾಗುವ ಅವಕಾಶ ರಶ್ಮಿಕಾ ಮಂದಣ್ಣ ಎಂಬ ನವ ನಟಿಗೆ ಸಿಗಲಿದೆಯಂತೆ. ರಶ್ಮಿಕಾ ಮಂದಣ್ಣ ಸದ್ಯ, ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಚೊಚ್ಚಲ ಸಿನಿಮಾ ಬಿಡುಗಡೆಗೂ ಮುಂಚೆ ದೊಡ್ಡ ನಟರ ಸಿನಿಮಾದಲ್ಲಿ ನಾಯಕಿಯಾಗುವ ಬಂಫರ್ ಆಫರ್ ರಶ್ಮಿಕಾಗೆ ಸಿಕ್ಕಿದೆ ಎನ್ನಲಾಗುತ್ತಿದೆ.

ಇಬ್ಬರು ನಟಿಯರಿಗೂ ಮೊದಲ ಅವಕಾಶ

ದರ್ಶನ್ ಅವರ 49ನೇ ಚಿತ್ರಕ್ಕೆ ಶೃತಿ ಹರಿಹರನ್ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರು ಅಂತಿಮವಾದರೇ, ದರ್ಶನ್ ಅವರ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸುವ ಅವಕಾಶ ಪಡೆಯಲಿದ್ದಾರೆ.

ಬ್ಯುಸಿ ನಾಯಕಿಯರು

'ಮಾದ ಮತ್ತು ಮಾನಸಿ', 'ಬ್ಯುಟಿಫುಲ್ ಮನಸ್ಸುಗಳು', 'ಮತ್ತೆ ಹುಟ್ಟಿ ಬಾ ಉಪೇಂದ್ರ' ಚಿತ್ರಗಳ ಶೂಟಿಂಗ್ ಮುಗಿಸಿರುವ ಶೃತಿ ಹರಿಹರನ್ ಸದ್ಯ ಕನ್ನಡದ ಸ್ಟಾರ್ ನಟಿ. ಇನ್ನೂ ವೃತ್ತಿಜೀವನದ ಆರಂಭದಲ್ಲಿ ದೊಡ್ಡ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ರಶ್ಮಿಕಾ, 'ಕಿರಿಕ್ ಪಾರ್ಟಿ' ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ.

ಅರ್ಜುನ್ ಜನ್ಯ ಸಂಗೀತ

ಸ್ಯಾಂಡಲ್ ವುಡ್ ನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ, ಚಕ್ರವರ್ತಿಯ 49ನೇ ಚಿತ್ರಕ್ಕೆ ಸಂಗೀತ ನಿರ್ದೇಶಕನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇನ್ನೂ ಕೃಷ್ಣ ಕುಮಾರ್ ಅವರ ಛಾಯಗ್ರಹಣ ಚಿತ್ರಕ್ಕಿದೆ.

English summary
Challenging Star Darshan's 49th film, the as-yet-untitled film with director Prakash of Milana fame, is set to roll soon. The filmmaker tells us that the film will have two leading ladies opposite Dashan. Sruthi Hariharan and Rashmika mandanna being a part of the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada