'ರಾಬರ್ಟ್' ಸಿನಿಮಾದ ಭರ್ಜರಿ ಸುದ್ದಿ: ಆಡಿಯೋ ರಿಲೀಸ್ ಗೆ ದಿನಾಂಕ-ಸ್ಥಳ ನಿಗದಿ?

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸಿನಿಮಾ ರಿಲೀಸ್ ಗೆ ತಯಾರಿ ನಡೆಸುತ್ತಿದೆ. ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಕೊರೊನಾ ವೈರಸ್ ಪರಿಣಾಮ ವಿದೇಶಿ ಚಿತ್ರೀಕರಣ ರದ್ದು ಮಾಡಿ ಗುಜರಾತ್ ನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದೆ.

Recommended Video

ಅಬಿಮಾನಿಗಳಿಗೆ ಬ್ರೇಕಿಂಗ್ ಸುದ್ದಿ ಕೊಟ್ಟ ರಾಬರ್ಟ್ | Roberrt | Darshan | Audio Release | Kalburgi

ಇದರ ನಡುವೆ ಈಗ ಚಿತ್ರದಿಂದ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಹೌದು, ರಾಬರ್ಟ್ ಸಿನಿಮಾದ ಆಡಿಯೋ ರಿಲೀಸ್ ಗೆ ದಿನಾಂಕ ಮತ್ತು ಸ್ಥಳ ನಿಗದಿಯಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈಗಾಗಲೆ ಬಿಡುಗಡೆಯಾಗಿರುವ ಎರಡು ಹಾಡುಗಳು ಅಭಿಮಾನಿಗಳ ನಿದ್ದೆ ಗೆಡಿಸಿದೆ. ಸದ್ಯ ಚಿತ್ರದಿಂದ ಎಲ್ಲಾ ಹಾಡುಗಳು ಬಿಡುಗಡೆಗೆ ಸಜ್ಜಾಗಿದ್ದು, ಇದೆ ತಿಂಗಳು ಕೊನೆಯಲ್ಲಿ ಹಾಡುಗಳು ಅದ್ದೂರಿಯಾಗಿ ಮಾರುಕಟ್ಟೆಗೆ ಬರಲಿವೆ. ಆಡಿಯೋ ರಿಲೀಸ್ ಎಲ್ಲಿ, ಯಾವಾಗ? ಮುಂದೆ ಓದಿ...

ಮಾರ್ಚ್ 21ಕ್ಕೆ ರಾಬರ್ಟ್ ಆಡಿಯೋ

ಮಾರ್ಚ್ 21ಕ್ಕೆ ರಾಬರ್ಟ್ ಆಡಿಯೋ

ರಾಬರ್ಟ್ ಸಿನಿಮಾದ ಆಡಿಯೋ ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ಈ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು, ಚಿತ್ರದ ಆಡಿಯೋ ಇದೇ ತಿಂಗಳು ಮಾರ್ಚ್ 21ಕ್ಕೆ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ನೀಡಿಲ್ಲ.

ಕಲಬುರಗಿಯಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ

ಕಲಬುರಗಿಯಲ್ಲಿ ಆಡಿಯೋ ರಿಲೀಸ್ ಕಾರ್ಯಕ್ರಮ

ರಾಬರ್ಟ್ ಸಿನಿಮಾದ ಆಡಿಯೋವನ್ನು ಕಲಬುರಗಿಯಲ್ಲಿ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಕಲಬುರಗಿಯಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕಲಬುರಗಿಯಲ್ಲಿ ಅದ್ದೂರಿಯಾಗಿ ಚಿತ್ರದ ಆಡಿಯೋವನ್ನು ತೆರೆಗೆ ತರಲು ಪ್ಲಾನ್ ಮಾಡಿದೆ.

ಆಡಿಯೋ ರಿಲೀಸ್ ಗೆ ಗೆಸ್ಟ್ ಯಾರು?

ಆಡಿಯೋ ರಿಲೀಸ್ ಗೆ ಗೆಸ್ಟ್ ಯಾರು?

ರಾಬರ್ಟ್ ಚಿತ್ರದ ಆಡಿಯೋವನ್ನು ಕಲಬುರಗಿಯಲ್ಲಿ ಅದ್ದೂರಿಯಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿರುವುದಾಗಿ ತಿಳಿದು ಬಂದಿದೆ. ಆದರೆ ಗ್ರ್ಯಾಂಡ್ ಈವೆಂಟ್ ಗೆ ವಿಶೇಷ ಅತಿಥಿಯಾರಾಗಲಿದ್ದಾರೆ ಎನ್ನುವುದು ಅಭಿಮಾನಿಗಳ ಕುತೂಹಲ. ರಾಬರ್ಟ್ ಸಿನಿಮಾದ ಹಾಡುಗಳು ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡುಗಳು ಯಾವ ವಿಶೇಷ ಅತಿಥಿ ರಿಲೀಸ್ ಮಾಡಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.

ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ

ಏಪ್ರಿಲ್ ನಲ್ಲಿ ಸಿನಿಮಾ ತೆರೆಗೆ

ರಾಬರ್ಟ್ ಸಿನಿಮಾ ಏಪ್ರಿಲ್ 9ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಇರುವ ಕಾರಣ ರಿಲೀಸ್ ದಿನಾಂಕ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.

More from Filmibeat

English summary
Kannada Actor Darshan starrer Roberrt movie audio release may be on March 21st at Kalaburagi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X