'ರಾಬರ್ಟ್' ರಿಲೀಸ್ ಮುಂದಕ್ಕೆ: ಒಂದೆ ದಿನ ತೆರೆಗೆ ಬರುತ್ತಾ ದರ್ಶನ್-ಸುದೀಪ್ ಸಿನಿಮಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ರಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಏಪ್ರಿಲ್ ಗೆ ಸಿನಿಮಾ ತೆರೆಗೆ ಬರಲು ಸಜ್ಜಾಗಿತ್ತು. ಆದರೀಗ ಕೊರೊನಾ ವೈರಸ್ ಭೀತಿಯ ಹಿನ್ನಲೆ ಸಂಪೂರ್ಣ ಭಾರತ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಆಗಿದೆ. ಅಂದಮೇಲೆ ಏಪ್ರಿಲ್ ನಲ್ಲಿ ರಾಬರ್ಟ್ ತೆರೆಗೆ ಬರಲ್ಲ ಎನ್ನುವುದು ಕನ್ಫರ್ಮ್.
Recommended Video
ವಿಶೇಷ ಅಂದರೆ ದರ್ಶನ್ ಅಭಿನಯದ ರಾಬರ್ಟ್ ಮತ್ತು ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಒಂದೆ ದಿನ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಅಟ್ಟಹಾಸದ ಪರಿಣಾಮ ಇಡೀ ಚಿತ್ರರಂಗದ ಲೆಕ್ಕಾಚಾರವೆ ತಲೆಕೆಳಗಾಗಿದೆ. ಸದ್ಯ ರಾಬರ್ಟ್ ಸಿನಿಮಾ ರಿಲೀಸ್ ಕೂಡ ಮುಂದಕ್ಕೆ ಹೋಗಿದ್ದು, ವಿಶೇಷ ದಿನದಂದು ಅದೂ ಕೋಟಿಗೊಬ್ಬನ ಎಂಟ್ರಿಯ ದಿನವೇ ರಾಬರ್ಟ್ ಬರ್ತಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ಏಪ್ರಿಲ್ ಗೆ ಬರಲ್ಲ ರಾಬರ್ಟ್
ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ಏಪ್ರಿಲ್ ಗೆ ಬರಲು ಸಜ್ಜಾಗಿತ್ತು. ಆದರೀಗ ರಾಬರ್ಟ್ ರಿಲೀಸ್ ಮುಂದಕ್ಕೆ ಹೋಗಿದೆ. ಕೊರೊನಾ ವೈರಸ್ ಭೀತಿಯ ಹಿನ್ನಲೆ ಇಡೀ ಭಾರತ ಏಪ್ರಿಲ್ 14ರ ವರೆಗೂ ಲಾಕ್ ಡೌನ್ ಆಗಿದೆ. ಹಾಗಾಗಿ ಏಪ್ರಿಲ್ 9ಕ್ಕೆ ರಾಬರ್ಟ್ ರಿಲೀಸ್ ಆಗಲ್ಲ ಎನ್ನುವುದು ಗೊತ್ತಿರುವ ವಿಚಾರ.
ಏಪ್ರಿಲ್ ಬದಲಿಗೆ ರಾಬರ್ಟ್ ಮೇ ತಿಂಗಳಿಗೆ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

ಮೇ 1ಕ್ಕೆ ರಾಬರ್ಟ್ ರಿಲೀಸ್ ಸಾಧ್ಯತೆ?
ರಾಬರ್ಟ್ ಸಿನಿಮಾದ ಹೊಸ ರಿಲೀಸ್ ಡೇಟ್ ರಿವೀಲ್ ಆಗಿದೆ. ಏಪ್ರಿಲ್ ನಿಂದ ಮೇ ತಿಂಗಳಿಗೆ ಶಿಫ್ಟ್ ಆಗಿರುವ ರಾಬರ್ಟ್ ವಿಶೇಷ ದಿನದಂದು ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಹೌದು, ರಾಬರ್ಟ್ ಸಿನಿಮಾ ಮೇ 1 ಕಾರ್ಮಿಕರ ದಿನದಂದು ರಿಲೀಸ್ ಆಗಲಿದೆಯಂತೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ ಸಿನಿಮಾ ಮೇ 1ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಏಪ್ರಿಲ್ 15ರ ನಂತರ ಪ್ರಮೋಷನ್ ಕೆಲಸ ಪ್ರಾರಂಭ
ಸದ್ಯ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಮತ್ತು ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಿಲ್ಲರ್ ವೈಸರ್ ಮಟ್ಟಹಾಕಲು ಇಡೀ ಭಾರತ ಏಪ್ರಿಲ್ 14ರ ವರೆಗೂ ಲಾಕ್ ಡೌನ್ ಆಗಿದೆ. ಆ ನಂತರ ಅಂದರೆ ಏಪ್ರಿಲ್ 15ರ ಮೇಲೆ ರಾಬರ್ಟ್ ಸಿನಿಮಾದ ಪ್ರಮೋಷನ್ ಚಟುವಟಿಕೆಗಳು ನಡೆಯಲಿದೆಯಂತೆ. ಮೇ 1ಕ್ಕೆ ಕಾರ್ಮಿಕರ ದಿನದಂದು ರಿಲೀಸ್ ಆಗಲಿದೆಯಂತೆ.

ಕೋಟಿಗೊಬ್ಬ-3 ಕೂಡ ಮೇ 1ಕ್ಕೆ ರಿಲೀಸ್ ಸಾಧ್ಯತೆ
ರಾಬರ್ಟ್ ಮೇ ತಿಂಗಳಿಗೆ ರಿಲೀಸ್ ಆಗುತ್ತೆ ಎನ್ನುವುದಕ್ಕಿಂತ ಮೊದಲೆ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಮೇ 1ಕ್ಕೆ ತೆರೆಗೆ ಬರಲು ಸಜ್ಜಾಗಿತ್ತು. ಆದರೀಗ ರಾಬರ್ಟ್ ಸಿನಿಮಾ ಮೇ 1ಕ್ಕೆ ಬಿಡುಗಡೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೋಟಿಗೊಬ್ಬ-3 ಮತ್ತು ರಾಬರ್ಟ್ ಸಿನಿಮಾ ಒಂದೆ ದಿನ ತೆರೆಗೆ ಬಂದರೆ, ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ವಾರ್ ನಡೆಯುವ ಸಾಧ್ಯತೆ ಇದೆ.

ಕೋಟಿಗೊಬ್ಬ-3 ರಿಲೀಸ್ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಿಲ್ಲ
ಕೋಟಿಗೊಬ್ಬ-3 ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರುತ್ತೆ ಎಂದು ನಿರ್ಮಾಪಕರು ಬಹಿರಂಗ ಪಡಿಸಿದ್ದರು. ಮೇ 1ಕ್ಕೆ ಕಾರ್ಮಿಕರ ದಿನಕ್ಕೆ ತೆರೆಗೆ ಬರುತ್ತೆ ಎಂದು ಮೂಲಗಳು ಹೇಳುತ್ತಿದ್ದವು. ಆದರೀಗ ಕೊರೊನಾದಿಂದ ಇಡೀ ಭಾರತ ಲಾಕ್ ಡೌನ್ ಆಗಿರುವ ಹಿನ್ನಲೆ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುವ ಸಾಧ್ಯತೆಯೂ ಇದೆ. ಒಂದು ವೇಳೆ ರಾಬರ್ಟ್ ಮತ್ತು ಕೋಟಿಗೊಬ್ಬ-3 ಒಂದೆ ದಿನ ತೆರೆಗೆ ಬಂದರೆ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ವಾರ್ ನಡೆಯಲಿದೆ.


Click it and Unblock the Notifications











