ಈ ವರ್ಷ ರಿಲೀಸ್ ಆಗಲ್ವಾ 'ರಾಬರ್ಟ್'? ಏನಿದು ಡಿ ಬಾಸ್ ಸಿನಿಮಾ ಬಗ್ಗೆ ಹೊಸ ಸುದ್ದಿ

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಡಿ ಬಾಸ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕೂಡ ಒಂದು. ಅಂದುಕೊಂಡಂತೆ ಆಗಿದ್ದಾರೆ ಸಿನಿಮಾ ಈಗಾಗಲೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಬೇಕಿತ್ತು. ಆದರೆ ಕೊರೊನಾ ಲಾಕ್ ಡೌನ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.

Recommended Video

ಸುದೀಪ್ ಮನೆಯಲ್ಲಿ ಹೆಚ್ಚಾಯಿತು ಕೊರೊನ ಆತಂಕ | Coronavirus positive near actor Sudeep house.

ಏಪ್ರಿಲ್, ಮೇ, ಆಗಸ್ಟ್ ಅಂತ ರಾಬರ್ಟ್ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಾ, ಹೊಸ ಹೊಸ ರಿಲೀಸ್ ಡೇಟ್ ಕೇಳಿಬರುತ್ತಿದೆ. ಆದರೆ ಇದ್ಯಾವುದು ಅಧಿಕೃತವಲ್ಲ. ಯಾಕಂದ್ರೆ ಕೊರೊನಾ ಹಾವಳಿ ಸದ್ಯಕ್ಕೆ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ. ಪರಿಸ್ಥಿತಿ ಸುಧಾರಿಸುವವರೆಗೂ ಸಿನಿಮಾ ರಿಲೀಸ್ ಆಗುವುದಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಹಾಗಾಗಿ ಸದ್ಯಕ್ಕಂತು ರಾಬರ್ಟ್ ದರ್ಶನ ಇಲ್ಲ ಎನ್ನುವುದು ಕನ್ಫರ್ಮ್ ಆಗಿದೆ. ಆದರೆ ಮೂಲಗಳ ಪ್ರಕಾರ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ ಎನ್ನುವ ಬೇಸರದ ಸುದ್ದಿ ಹೊರಬಿದ್ದೆ.

ಮುಂದಿನ ವರ್ಷ ರಾಬರ್ಟ್ ರಿಲೀಸ್?

ಮುಂದಿನ ವರ್ಷ ರಾಬರ್ಟ್ ರಿಲೀಸ್?

ಬಹುನಿರೀಕ್ಷೆಯ ರಾಬರ್ಟ್ ಸಿನಿಮಾ ಮುಂದಿನ ವರ್ಷ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆಯಂತೆ. ಸದ್ಯದ ಪರಿಸ್ಥಿತಿ ನೋಡಿ ಸಿನಿಮಾತಂಡ ರಾಬರ್ಟ್ ಚಿತ್ರವನ್ನು 2021ಕ್ಕೆ ರಿಲೀಸ್ ಮಾಡಲು ನಿರ್ಧರಿಸಿದೆಯಂತೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ.

ರಿಲೀಸ್ ಗೆ ಸಿದ್ಧವಾಗಿತ್ತು ಸಿನಿಮಾ

ರಿಲೀಸ್ ಗೆ ಸಿದ್ಧವಾಗಿತ್ತು ಸಿನಿಮಾ

ಪರಿಸ್ಥಿತಿ ಸಹಜಸ್ಥಿತಿಗೆ ಮರಳಿದ್ದರೆ ಲಾಕ್ ಡೌನ್ ಬಳಿಕ ರಾಬರ್ಟ್ ಸಿನಿಮಾ ರಿಲೀಸ್ ಆಗುವುದು ಕನ್ಫರ್ಮ್ ಆಗಿತ್ತು. ಕೊನೊನಾ ಲಾಕ್ ಡೌನ್ ಮುಗಿದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಆಗುವ ಸಿನಿಮಾಗಳ ಲಿಸ್ಟ್ ನಲ್ಲಿ ರಾಬರ್ಟ್ ಮೊದಲ ಸ್ಥಾನದಲ್ಲಿತ್ತು. ಆಗಸ್ಟ್ 15ಕ್ಕೆ ಸಿನಿಮಾ ಅಭಿಮಾನಿಗಳ ಮುಂದೆ ಬರಲಿದೆ ಎನ್ನು ಮಾತು ಕೇಳಿಬರುತ್ತಿತು. ಆದರೀಗ ರಾಬರ್ಟ್ ರಿಲೀಸ್ ಆಗುವುದು ಆಗಸ್ಟ್ ಕಥೆ ಇರಲಿ, ಈ ವರ್ಷವೆ ಬರಲ್ಲ ಎಂದು ಹೇಳಲಾಗುತ್ತಿದೆ.

ಹಾಡುಗಳು, ಮೇಕಿಂಗ್ ವಿಡಿಯೋ ರಿಲೀಸ್

ಹಾಡುಗಳು, ಮೇಕಿಂಗ್ ವಿಡಿಯೋ ರಿಲೀಸ್

ಪೋಸ್ಟರ್, ಹಾಡುಗಳು ಮತ್ತು ಮೇಕಿಂಗ್ ವಿಡಿಯೋ ಮೂಲಕ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸುವ ಸಿನಿಮಾ. ಚಿತ್ರದ ಟೈಟಲ್ ಟ್ರ್ಯಾಕ್, ಬ್ರದರ್ ಹಾಡು ಮತ್ತು ಜೈ ಶ್ರೀರಾಮ್ ಹಾಡುಗಳು ಅಭಿಮಾನಿಗಳ ಮನಗೆದ್ದಿವೆ. ಇನ್ನೂ ಸಿನಿಮಾದ ಟ್ರೈಲರ್ ಗಾಗಿ ಅಭಿಮಾನಿಗಳು ಚಿತ್ರತಂಡವನ್ನು ಒತ್ತಾಯಿಸುತ್ತಿದ್ದರು. ಆದೆರ ಸಿನಿಮಾ ರಿಲೀಸ್ ಮುಂದಿನ ವರ್ಷಕ್ಕೆ ಹೋದರೆ ಟ್ರೈಲರ್ ರಿಲೀಸ್ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ.

ಚಿತ್ರದಲ್ಲಿದೆ ದೊಡ್ಡ ತಾರಬಳಗ

ಚಿತ್ರದಲ್ಲಿದೆ ದೊಡ್ಡ ತಾರಬಳಗ

ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋನಲ್ ಮಾಂತೆರೋ, ಐಶ್ವರ್ಯ ಪ್ರಸಾದ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಶಂಕರ್ ಸೇರಿದ್ದಂತೆ ದೊಡ್ಡ ತಾರಾಬಳಗವೆ ಸಿನಿಮಾದಲ್ಲಿದೆ. ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ.

More from Filmibeat

English summary
Darshan starrer Robert Cinema is likely to be released next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X