»   » ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು?

ದರ್ಶನ್ 'ತಾರಕ್' ಮೊದಲ 3 ದಿನದಲ್ಲಿ ಗಳಿಸಿದ್ದೆಷ್ಟು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಬಿಡುಗಡೆಯಾದ ಈ ಚಿತ್ರವನ್ನ ಕುಟುಂಬ ಸಮೇತ ನೋಡಿ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ.

ಇನ್ನು ತಾರಕ್ ಚಿತ್ರ ಸತತ ನಾಲ್ಕನೇ ದಿನವೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಆಯುಧ ಪೂಜೆ, ವಿಜಯದಶಮಿ ಹಾಗೂ ಗಾಂಧಿ ಜಯಂತಿಯ ಹಿನ್ನೆಲೆ ಸತತ ರಜೆಯಲ್ಲಿರುವ ಅಭಿಮಾನಿಗಳಿಗೆ 'ತಾರಕ್' ಭರ್ಜರಿ ರಸದೌತಣ ನೀಡಿದೆ.

ಹಾಗಿದ್ರೆ, 'ತಾರಕ್' ಮೊದಲ ಮೂರು ದಿನದ ಕಲೆಕ್ಷನ್ ಎಷ್ಟಿರಬಹುದು? ಎಂದು ತಿಳಿದುಕೊಳ್ಳಲು ಮುಂದೆ ಓದಿ......

ಬಾಕ್ಸ್ ಆಫೀಸ್ ನಲ್ಲಿ 'ತಾರಕ್' ಪರಾಕ್ರಮ

ಸೆಪ್ಟೆಂಬರ್ 29 ರಂದು ತೆರೆಕಂಡ 'ತಾರಕ್' ಸಿನಿಮಾ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ವಿಜಯ ಪತಾಕೆ ಹಾರಿಸಿದೆ. ಸುಮಾರು 300 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಬಿಡುಗಡೆಯಾದ 'ತಾರಕ್' ಕೇವಲ ಮೂರು ದಿನದಲ್ಲೇ ದಾಖಲೆಯ ಕಲೆಕ್ಷನ್ ಮಾಡಿದೆಯಂತೆ.

ವಿಮರ್ಶೆ: ದರ್ಶನ್ ಇಮೇಜ್ ಬದಲಿಸಿದ 'ತಾರಕ್'

ಮೊದಲ ದಿನ 'ತಾರಕ್' ಗಳಿಸಿದ್ದೆಷ್ಟು?

ರಾಜ್ಯಾದ್ಯಂತ ಭರ್ಜರಿಯಾಗಿ ತೆರೆಗೆ ಬಂದ 'ತಾರಕ್' ಮೊದಲ ದಿನ ಬರೋಬ್ಬರಿ 8.5 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ.

ಬಿಡುಗಡೆಯಾದ ಮೊದಲ ದಿನವೇ 'ತಾರಕ್'ಗೆ ಶಾಕ್ ಕೊಟ್ಟ ಕಿಡಿಗೇಡಿಗಳು.!

3 ದಿನಕ್ಕೆ ದಾಖಲೆಗಳು ಉಡೀಸ್

ದಸರಾ ಹಬ್ಬಕ್ಕೆ ಬಂದಿದ್ 'ತಾರಕ್' ಮೊದಲ ಮೂರು ದಿನವೂ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದೆಯಂತೆ. ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ತಾರಕ್ ಮೊದಲ ಮೂರು ದಿನದಲ್ಲಿ 25 ರಿಂದ 30 ಕೋಟಿವರೆಗೂ ಗಳಿಸಿದೆ ಎನ್ನಲಾಗುತ್ತಿದೆ.

ಮುಂದಿದೆ ಮಾರಿಹಬ್ಬ

ಮೊದಲ ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿರುವ ತಾರಕ್ ಸಿನಿಮಾ, ಮುಂದಿನ ದಿನಗಳಲ್ಲಿ ಮತ್ತಷ್ಟು ಕೋಟಿ ಕೊಳ್ಳೆ ಹೊಡೆಯಲಾಗುತ್ತೆ ಎಂಬ ನಿರೀಕ್ಷೆ ಮಾಡಬಹುದು.

English summary
Challenging Star Darshan Starrer 'Tarak' Movie has collected around 25 crore (Gross Collection) in 1st 3 Days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada