»   » 'ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ' ಎಂಟ್ರಿ! 'ಸಂತೋಷ್' ಯಾರಿಗೆ?

'ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ' ಎಂಟ್ರಿ! 'ಸಂತೋಷ್' ಯಾರಿಗೆ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ 'ಚಕ್ರವರ್ತಿ' ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.['ಬಾಹುಬಲಿ' ಮೀರಿಸಿದ ದರ್ಶನ್ 'ಚಕ್ರವರ್ತಿ']

ಗಾಂಧಿನಗರದಲ್ಲಿ 'ಚಕ್ರವರ್ತಿ' ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ 'ಹೆಬ್ಬುಲಿ' ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಪ್ರದರ್ಶನವಾಗುತ್ತಿದೆ. ಹೀಗಿರುವಾಗ 'ಚಕ್ರವರ್ತಿ'ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ ಹುಟ್ಟುಹಾಕಿದೆ.

ಆದ್ರೆ, ಮೂಲಗಳ ಪ್ರಕಾರ 'ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ' ಬರಲಿದ್ದಾನೆ ಎನ್ನಲಾಗುತ್ತಿದೆ. ಮುಂದೆ ಓದಿ.....

'ನರ್ತಕಿ' ದರ್ಶನ್ ಗೆ ನೆಚ್ಚಿನ ಚಿತ್ರಮಂದಿರ

ಕೆ.ಜಿ.ರಸ್ತೆಯಲ್ಲಿರುವ ಚಿತ್ರಮಂದಿರಗಳ ಪೈಕಿ ನರ್ತಕಿ ಚಿತ್ರಮಂದಿರ ದರ್ಶನ್ ಗೆ ಫೆವರೆಟ್. ಇದುವರೆಗೂ ದರ್ಶನ್ ಅಭಿನಯದ ಬಹುತೇಕ ಚಿತ್ರಗಳು ಅಲ್ಲಿಯೇ ತೆರೆಕಂಡಿದೆ.[ಟ್ರೈಲರ್ ಸ್ಪೆಷಾಲಿಟಿ: ಭರ್ಜರಿ ಬೇಟೆಗೆ ಸಿದ್ಧವಾದ 'ಚಕ್ರವರ್ತಿ' ದರ್ಶನ್]

ನರ್ತಕಿಯಲ್ಲಿ 'ರಾಜಕುಮಾರ' ಸವಾರಿ!

ಸದ್ಯ, 'ನರ್ತಕಿ' ಚಿತ್ರಮಂದಿರದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾ ಯಶಸ್ವಿ ಪ್ರದರ್ಶನವಾಗುತ್ತಿದೆ. ಹೀಗಾಗಿ, ಚಾಲೆಂಜಿಂಗ್ ಸ್ಟಾರ್ ಸಿನಿಮಾಗೆ 'ನರ್ತಕಿ' ಸಿಗುವುದು ಬಹುತೇಕ ಅನುಮಾನ.['ಡಿ-ಬಾಸ್' ಅಭಿಮಾನಿಗಳಿಗೆ ಪಂಚಾಮೃತ ಸವಿದಷ್ಟೇ ಸಿಹಿ ಸುದ್ದಿ ಇದು!]

ಸಂತೋಷ್ ಚಿತ್ರಮಂದಿರದಲ್ಲಿ 'ಹೆಬ್ಬುಲಿ'

ಇನ್ನು 'ನರ್ತಕಿ' ಬಿಟ್ಟರೇ ದರ್ಶನ್ ಸಿನಿಮಾಗಳು ತೆರೆಕಾಣುವುದು ಅಲ್ಲೆ ಪಕ್ಕದಲ್ಲಿರುವ ಸಂತೋಷ್ ಚಿತ್ರಮಂದಿರದಲ್ಲಿ. ಆದ್ರೆ, ಸಂತೋಷ್ ಚಿತ್ರಮಂದಿರಲ್ಲಿ ಸದ್ಯ, ಸುದೀಪ್ ಅಭಿನಯದ 'ಹೆಬ್ಬುಲಿ' ಪ್ರದರ್ಶನವಾಗುತ್ತಿದೆ.[ದರ್ಶನ್ 'ಅಂಬರೀಶ'ನಿಗೆ 'ಭೂತ'ದ ಕಾಟ]

'ಹೆಬ್ಬುಲಿ' ಜಾಗಕ್ಕೆ 'ಚಕ್ರವರ್ತಿ'

ಸಂತೋಷ್ ಚಿತ್ರಮಂದಿರದಲ್ಲಿ `ಹೆಬ್ಬುಲಿ' 40 ದಿನಗಳನ್ನು ಪೂರೈಸಿ 50 ನೇ ದಿನದತ್ತ ದಾಪುಗಾಲಿಟ್ಟಿದೆ. 'ಹೆಬ್ಬುಲಿ' 50 ದಿನ ಪೂರೈಸಿದ ಬಳಿಕ ಸಂತೋಷ್‌ ಚಿತ್ರಮಂದಿರದಲ್ಲಿ ದರ್ಶನ್ 'ಚಕ್ರವರ್ತಿ' ಬರಲಿದ್ದಾನಂತೆ.[ಕಡೆಗೂ 'ಪ್ರಸನ್ನ'ನಾದ ದರ್ಶನ್ 'ಅಂಬರೀಶ']

'ಅಂಬರೀಶ'ನಿಗೆ ಎದುರಾಗಿತ್ತು ಥಿಯೇಟರ್ ಸಮಸ್ಯೆ!

ಈ ಹಿಂದೆ ಕೂಡ ಇಂತಹದ್ದೇ ಸಮಸ್ಯೆ ದರ್ಶನ್ ಅವರ 'ಅಂಬರೀಶ' ಚಿತ್ರಕ್ಕೆ ಎದುರಾಗಿತ್ತು. ಕೊನೆಗೆ ಮೇನ್ ಥಿಯೇಟರ್ ಎಂಬ ಕಾನ್ಸೆಪ್ಟ್ ಬ್ರೇಕ್ ಮಾಡಿ 'ಪ್ರಸನ್ನ' ಚಿತ್ರದಲ್ಲಿ 'ಅಂಬರೀಶ' ಚಿತ್ರವನ್ನ ಬಿಡುಗಡೆ ಮಾಡಿದ್ದರು.['ಅಂಬರೀಶ' ಬಗ್ಗೆ ಮೌನ ಮುರಿದ ಚಾಲೆಂಜಿಂಗ್ ಸ್ಟಾರ್]

'ಚಕ್ರವರ್ತಿ'ಗೂ ಸಮಸ್ಯೆ ಆಗುತ್ತಾ!

ಸದ್ಯದ ಮಟ್ಟಿಗೆ 'ಚಕ್ರವರ್ತಿ' ಚಿತ್ರಕ್ಕೆ ಮುಖ್ಯ ಚಿತ್ರಮಂದಿರ ಯಾವುದು ಎಂದು ಇನ್ನು ಬಹಿರಂಗವಾಗಿಲ್ಲ. ಇನ್ನು 10 ದಿನಗಳು ಮಾತ್ರ ಬಾಕಿಯಿದ್ದು, ಥಿಯೇಟರ್ ಲೀಸ್ಟ್ ಕೂಡ ಘೋಷಣೆ ಆಗಿಲ್ಲ. ಮತ್ತೊಂದೆಡೆ ಹೆಬ್ಬುಲಿ ಸಿನಿಮಾ ಸಂತೋಷ್ ಚಿತ್ರಮಂದಿರದಲ್ಲೇ ಮುಂದುವರೆದರೇ ಚಕ್ರವರ್ತಿಗೆ ಯಾವ ಥಿಯೇಟರ್ ಸಿಗಬಹುದು ಎಂಬ ಕುತೂಹಲ. ಹಾಗಾಗಿ 'ಚಕ್ರವರ್ತಿ' ಚಿತ್ರಕ್ಕೆ ಮೇನ್ ಥಿಯೇಟರ್ ಸಮಸ್ಯೆ ಆಗಬಹುದಾ?

ಏಪ್ರಿಲ್ 14ಕ್ಕೆ 'ಚಕ್ರವರ್ತಿ' ಅಬ್ಬರ

ವಿಭಿನ್ನ ಗೆಟಪ್ ಗಳ ಮೂಲಕ ನಿರೀಕ್ಷೆ ಹುಟ್ಟಿಸಿರುವ 'ಚಕ್ರವರ್ತಿ' ಏಪ್ರಿಲ್ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ದರ್ಶನ್ ಗೆ ದೀಪಾ ಸನ್ನಿಧಿ ನಾಯಕಿಯಾಗಿ ನಟಿಸಿದ್ದಾರೆ. 'ಕುಮಾರ್ ಬಂಗಾರಪ್ಪ, ಸೃಜನ್ ಲೋಕೇಶ್, ಆದಿತ್ಯ, ದಿನಕರ್ ತೂಗುದೀಪ ಸೇರಿದಂತೆ ಅನೇಕರು 'ಚಕ್ರವರ್ತಿ'ಗೆ ಸಾಥ್ ನೀಡಿದ್ದಾರೆ. ಚಿತ್ರವನ್ನು ಸಿದ್ಧಾರ್ಥ್ ನಿರ್ಮಿಸಿದರೆ, ಚಿಂತನ್ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

English summary
According to Source Challenging Star Darshan Starrer Chakravarthy Movie Will Releasing April 14 On Santhosh theater at KG Road. Now Presently Sudeep Starrer hebbuli Running in Santhosh Theater.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada