'ರಾಬರ್ಟ್' ಬಿಗ್ ನ್ಯೂಸ್: ತ್ರಿಪಾತ್ರದಲ್ಲಿ ಡಿ ಬಾಸ್ ದರ್ಶನ್!

Recommended Video

Robert : Darshan to play triple role in his next flick | DARSHAN | ROBERT | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಸಿನಿಮಾ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಹಾಡುಗಳನ್ನು ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಹೈದರಾಬಾದ್, ಬೆಂಗಳೂರು, ವಾರಣಾಸಿ ಮುಂತಾದ ಕಡೆ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿದೆ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ರಾಬರ್ಟ್ ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಯಾಗಲಿದೆ. ಈ ನಡುವೆ ಮತ್ತೊಂದು ಮೆಗಾ ಸುದ್ದಿ ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ.

ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಪಾತ್ರ ಏನಿರಬಹುದು ಎಂಬ ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ, ಭರ್ಜರಿ ಸುದ್ದಿಯೊಂದು ಕಾದಿದೆ. ಸದ್ಯದ ಟಾಕ್ ಪ್ರಕಾರ ರಾಬರ್ಟ್ ಚಿತ್ರದಲ್ಲಿ ಡಿ ಬಾಸ್ ತ್ರಿಪಾತ್ರದಲ್ಲಿ ನಟಿಸಲಿದ್ದಾರಂತೆ. ಏನಿದು ಹೊಸ ಬ್ರೇಕಿಂಗ್? ಮುಂದೆ ಓದಿ...

ದರ್ಶನ್ ತ್ರಿಪಾತ್ರ ನಿಜಾನ?

ದರ್ಶನ್ ತ್ರಿಪಾತ್ರ ನಿಜಾನ?

ಇದುವರೆಗೂ ದರ್ಶನ್ ತ್ರಿಪಾತ್ರದ ಬಗ್ಗೆ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ. ಎಲ್ಲಿಯೂ ಚರ್ಚೆಯಾಗುತ್ತಿರಲಿಲ್ಲ. ಈ ಬಗ್ಗೆ ಯಾವುದೇ ನಿರೀಕ್ಷೆನೂ ಇರಲಿಲ್ಲ. ಆದರೆ, ರಾಬರ್ಟ್ ಚಿತ್ರದಲ್ಲಿ ದರ್ಶನ್ ತ್ರಿಪಾತ್ರ ಮಾಡುತ್ತಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಡಿ ಫ್ಯಾನ್ಸ್ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ರಾಬರ್ಟ್, ಸಂಜಯ್, ಅಕ್ಬರ್!

ರಾಬರ್ಟ್, ಸಂಜಯ್, ಅಕ್ಬರ್!

ಈ ಕುರಿತು ವಿಕಿಪೀಡಿಯದಲ್ಲೂ ಮಾಹಿತಿ ಇಲ್ಲ. ಐಎಂಡಿಬಿಯಲ್ಲೂ ಮಾಹಿತಿ ಇಲ್ಲ. ಆದರೆ, ಎಲ್ಲಿಯೂ ಬಹಿರಂಗವಾಗದ ಸುದ್ದಿಯೊಂದು ಈಗ ಸದ್ದು ಮಾಡ್ತಿದ್ದು, ರಾಬರ್ಟ್, ಸಂಜಯ್ ಹಾಗೂ ಅಕ್ಬರ್ ಎಂಬ ಮೂರು ಪಾತ್ರದಲ್ಲಿ ಡಿ ಬಾಸ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜವೇ ಆದರೇ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಇದಕ್ಕಿಂತ ಹಬ್ಬ ಇನ್ನೊಂದಿಲ್ಲ.

ನಿಜ ಇದ್ದರೂ ಇರಬಹುದು!

ನಿಜ ಇದ್ದರೂ ಇರಬಹುದು!

ಈ ಸುದ್ದಿಯನ್ನು ಸುಳ್ಳು ಎಂದು ಅಲ್ಲೆಗೆಳೆಯಲು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ ಸಿನಿಮಾದ ಕಥೆ ಮೇಲೆ ಅಂತಹದೊಂದು ಭರವಸೆ ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ದರ್ಶನ್ ಅವರದ್ದು ಕ್ರಿಶ್ವಿಯನ್ ಪಾತ್ರ ಎಂಬುದು ಶೀರ್ಷಿಕೆ ಹೇಳುತ್ತಿದೆ. ಈ ಹಿಂದೆ ಆಂಜನೇಯ ಭುಜದ ಮೇಲೆ ರಾಮ ಕೂತಿರುವ ಫೋಟೋ ಮತ್ತು ವಾರಣಾಸಿಯಲ್ಲಿ ಶೂಟಿಂಗ್ ಆಗಿರುವುದನ್ನು ಗಮನಿಸಿದರೆ ಹಿಂದೂ ಧರ್ಮ ಅಥವಾ ಸಂಜಯ್ ಎಂಬ ಪಾತ್ರ ಇರಬಹುದು ಅದರ ಜೊತೆಗೆ ಅಕ್ಬರ್ ಪಾತ್ರವೂ ಇರಬಹುದು ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ.

ಎರಡನೇ ಪೋಸ್ಟರ್ ಮೇಲೆ ನಿಂತಿದೆ

ಎರಡನೇ ಪೋಸ್ಟರ್ ಮೇಲೆ ನಿಂತಿದೆ

ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಲಿರುವ ರಾಬರ್ಟ್ ಪೋಸ್ಟರ್ ಮೇಲೆ ಈಗ ಎಲ್ಲರ ಕಣ್ಣು ಬಿದ್ದಿದೆ. ಒಂದು ವೇಳೆ ಎರಡನೇ ಪೋಸ್ಟರ್ ಏನಾದರೂ ರಾಮ, ಹನುಮ, ಹಿಂದೂ ಧರ್ಮ ಎಂಬ ಹಿನ್ನಲೆಯಲ್ಲಿ ಬಂದಿದ್ದೇ ಆದರೆ ಖಂಡಿತಾ ರಾಬರ್ಟ್ ಚಿತ್ರದಲ್ಲಿ ಏನೋ ವಿಶೇಷ ಎಂಬುದು ಖಚಿತವಾಗಲಿದೆ.

'ರಾಬರ್ಟ್' ಬಿಡುಗಡೆ ಯಾವಾಗ?

'ರಾಬರ್ಟ್' ಬಿಡುಗಡೆ ಯಾವಾಗ?

ತರುಣ್ ಸುಧೀರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಆಶಾ ಭಟ್ ನಾಯಕಿಯಾಗಿದ್ದಾರೆ. ವಿನೋದ್ ಪ್ರಭಾಕರ್ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ಗೌಡ ಈ ಸಿನಿಮಾ ನಿರ್ಮಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳಲ್ಲಿ ರಾಬರ್ಟ್ ಎಂಟ್ರಿಯಾಗಲಿದೆ.

More from Filmibeat

English summary
Its mega news for challenging star darshan fans. according to latest buzz, d boss playing triple role in Robert
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X