Just In
Don't Miss!
- News
ಜೆರ್ಸಿ ಹಸು ಆಲಸಿ,ರೋಗಕಾರಕ ಎಂದಿರುವ 'ಹಸು ವಿಜ್ಞಾನ' ಪಠ್ಯವನ್ನು ಕೈಬಿಟ್ಟ ಕಾಮಧೇನು ಆಯೋಗ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Finance
50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಜಯ್ 65ನೇ ಚಿತ್ರಕ್ಕೆ ಬಾಲಿವುಡ್‌ನಿಂದ ಸ್ಟಾರ್ ನಟಿ ಮತ್ತು ನಟ ಎಂಟ್ರಿ!
ತಮಿಳು ನಟ ವಿಜಯ್ ನಟಿಸಲಿರುವ 65ನೇ ಚಿತ್ರದ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಎಆರ್ ಮುರುಗದಾಸ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಮುರುಗದಾಸ್ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು.
ಮುರುಗದಾಸ್ ಜಾಗಕ್ಕೆ ಯುವ ನಿರ್ದೇಶಕರೊಬ್ಬರನ್ನು ಕರೆತರುವ ಪ್ರಕ್ರಿಯೆಯಲ್ಲಿರುವ ನಿರ್ಮಾಪಕರು ಮೂರ್ನಾಲ್ಕು ಡೈರಕ್ಟರ್‌ಗಳ ಹೆಸರನ್ನು ಪಟ್ಟಿ ಮಾಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕೋಲಮಾವು ಕೋಕಿಲಾ ಸಿನಿಮಾ ನಿರ್ದೇಶಿಸಿದ್ದ ನೆಲ್ಸನ್ ದಿಲೀಪ್ ಗೆ ಈ ಅವಕಾಶ ಹೋಗಿದೆ ಎನ್ನಲಾಗಿದೆ. ಅದ್ರೆ, ಖಚಿತ ಮಾಹಿತಿ ಇಲ್ಲ. ಇದೀಗ, ವಿಜಯ್ 65ನೇ ಚಿತ್ರದ ಬಗ್ಗೆ ಮತ್ತೊಂದು ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಏನದು? ಮುಂದೆ ಓದಿ...

ವಿಜಯ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!
ವಿಜಯ್ ನಟಿಸಲಿರುವ 65ನೇ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಕರೆತರುವ ತಯಾರಿ ನಡೆಯುತ್ತಿದೆ. ಈ ಸಂಬಂಧ ನಿರ್ಮಾಪಕರು ನಟಿಯ ಜೊತೆ ಮಾತುಕತೆ ಸಹ ಆರಂಭಿಸಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದೆ.
ವಿಜಯ್ 65: ಯುವ ನಿರ್ದೇಶಕನಿಗೆ ಸಿಗುತ್ತಾ ಬಂಪರ್ ಅವಕಾಶ?

ಖಳನಾಯಕನಾಗಿ ಜಾನ್ ಅಬ್ರಹಾಂ
ವಿಜಯ್ ಎದುರು ಪ್ರಮುಖ ಖಳನಾಯಕನ ಪಾತ್ರಕ್ಕಾಗಿ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ನಟಿಸಬಹುದು ಎನ್ನಲಾಗಿದೆ. ಅಬ್ರಹಾಂ ಅವರನ್ನು ವಿಜಯ್ ಸಿನಿಮಾದಲ್ಲಿ ನಟಿಸುವಂತೆ ಕೇಳಲಾಗಿದೆ ಎಂಬ ಸುದ್ದಿಯೂ ಚರ್ಚೆಯಾಗುತ್ತಿದೆ. ಆದ್ರೆ, ಇದು ಅಧಿಕೃತವಾಗಿಲ್ಲ.

ಪ್ರಭಾಸ್ ಚಿತ್ರದಲ್ಲಿ ದೀಪಿಕಾ!
ಮತ್ತೊಂದೆಡೆ ಪ್ರಭಾಸ್ ನಟನೆಯ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ಮತ್ತು ದೀಪಿಕಾ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಮಾಸ್ಟರ್ ಚಿತ್ರದ ಬಗ್ಗೆ....
ಲೋಕೇಶ್ ಕನಕರಾಜ್ ನಿರ್ದೇಶನದ 'ಮಾಸ್ಟರ್' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ವಿಜಯ್ ಜೊತೆ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೇಕಿಂಗ್ ಪೋಸ್ಟರ್‌ಗಳ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ದೀಪಾವಳಿ ಹಬ್ಬಕ್ಕೆ ಟೀಸರ್ ಸಹ ಬಿಡುಗಡೆಯಾಗಿತ್ತು.