For Quick Alerts
  ALLOW NOTIFICATIONS  
  For Daily Alerts

  ವಿಜಯ್ 65ನೇ ಚಿತ್ರಕ್ಕೆ ಬಾಲಿವುಡ್‌ನಿಂದ ಸ್ಟಾರ್ ನಟಿ ಮತ್ತು ನಟ ಎಂಟ್ರಿ!

  |

  ತಮಿಳು ನಟ ವಿಜಯ್ ನಟಿಸಲಿರುವ 65ನೇ ಚಿತ್ರದ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಎಆರ್ ಮುರುಗದಾಸ್ ಆಕ್ಷನ್ ಕಟ್ ಹೇಳಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಮುರುಗದಾಸ್ ಈ ಪ್ರಾಜೆಕ್ಟ್‌ನಿಂದ ಹಿಂದೆ ಸರಿದರು.

  ಮುರುಗದಾಸ್ ಜಾಗಕ್ಕೆ ಯುವ ನಿರ್ದೇಶಕರೊಬ್ಬರನ್ನು ಕರೆತರುವ ಪ್ರಕ್ರಿಯೆಯಲ್ಲಿರುವ ನಿರ್ಮಾಪಕರು ಮೂರ್ನಾಲ್ಕು ಡೈರಕ್ಟರ್‌ಗಳ ಹೆಸರನ್ನು ಪಟ್ಟಿ ಮಾಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಕೋಲಮಾವು ಕೋಕಿಲಾ ಸಿನಿಮಾ ನಿರ್ದೇಶಿಸಿದ್ದ ನೆಲ್ಸನ್ ದಿಲೀಪ್ ಗೆ ಈ ಅವಕಾಶ ಹೋಗಿದೆ ಎನ್ನಲಾಗಿದೆ. ಅದ್ರೆ, ಖಚಿತ ಮಾಹಿತಿ ಇಲ್ಲ. ಇದೀಗ, ವಿಜಯ್ 65ನೇ ಚಿತ್ರದ ಬಗ್ಗೆ ಮತ್ತೊಂದು ದೊಡ್ಡ ಅಪ್‌ಡೇಟ್ ಸಿಕ್ಕಿದೆ. ಏನದು? ಮುಂದೆ ಓದಿ...

  ವಿಜಯ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

  ವಿಜಯ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ!

  ವಿಜಯ್ ನಟಿಸಲಿರುವ 65ನೇ ಚಿತ್ರಕ್ಕೆ ನಾಯಕಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರನ್ನು ಕರೆತರುವ ತಯಾರಿ ನಡೆಯುತ್ತಿದೆ. ಈ ಸಂಬಂಧ ನಿರ್ಮಾಪಕರು ನಟಿಯ ಜೊತೆ ಮಾತುಕತೆ ಸಹ ಆರಂಭಿಸಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದೆ.

  ವಿಜಯ್ 65: ಯುವ ನಿರ್ದೇಶಕನಿಗೆ ಸಿಗುತ್ತಾ ಬಂಪರ್ ಅವಕಾಶ?ವಿಜಯ್ 65: ಯುವ ನಿರ್ದೇಶಕನಿಗೆ ಸಿಗುತ್ತಾ ಬಂಪರ್ ಅವಕಾಶ?

  ಖಳನಾಯಕನಾಗಿ ಜಾನ್ ಅಬ್ರಹಾಂ

  ಖಳನಾಯಕನಾಗಿ ಜಾನ್ ಅಬ್ರಹಾಂ

  ವಿಜಯ್ ಎದುರು ಪ್ರಮುಖ ಖಳನಾಯಕನ ಪಾತ್ರಕ್ಕಾಗಿ ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ನಟಿಸಬಹುದು ಎನ್ನಲಾಗಿದೆ. ಅಬ್ರಹಾಂ ಅವರನ್ನು ವಿಜಯ್ ಸಿನಿಮಾದಲ್ಲಿ ನಟಿಸುವಂತೆ ಕೇಳಲಾಗಿದೆ ಎಂಬ ಸುದ್ದಿಯೂ ಚರ್ಚೆಯಾಗುತ್ತಿದೆ. ಆದ್ರೆ, ಇದು ಅಧಿಕೃತವಾಗಿಲ್ಲ.

  ಪ್ರಭಾಸ್ ಚಿತ್ರದಲ್ಲಿ ದೀಪಿಕಾ!

  ಪ್ರಭಾಸ್ ಚಿತ್ರದಲ್ಲಿ ದೀಪಿಕಾ!

  ಮತ್ತೊಂದೆಡೆ ಪ್ರಭಾಸ್ ನಟನೆಯ ಚಿತ್ರದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್ ಮತ್ತು ದೀಪಿಕಾ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

  6 ಗಂಟೆ ಆದ್ರೆ ಒಂದು ಸಲ ಗಡಿಯಾರ ನೋಡಿ ಸಿಗ್ನಲ್ ಕೊಡ್ತಾ ಇದ್ರು ರಾಜ್ ಕುಮಾರ್ | Jaggesh and DR Rajkumar
  ಮಾಸ್ಟರ್ ಚಿತ್ರದ ಬಗ್ಗೆ....

  ಮಾಸ್ಟರ್ ಚಿತ್ರದ ಬಗ್ಗೆ....

  ಲೋಕೇಶ್ ಕನಕರಾಜ್ ನಿರ್ದೇಶನದ 'ಮಾಸ್ಟರ್' ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ವಿಜಯ್ ಜೊತೆ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೇಕಿಂಗ್ ಪೋಸ್ಟರ್‌ಗಳ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ದೀಪಾವಳಿ ಹಬ್ಬಕ್ಕೆ ಟೀಸರ್ ಸಹ ಬಿಡುಗಡೆಯಾಗಿತ್ತು.

  English summary
  Vijay 65th Movie Update: Producers are talks with Bollywood actress deepika padukone and john abraham for Vijay's 65th project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X