For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ-ಸುದೀಪ್ ರವರ 'ಕಲಿ' ಚಿತ್ರದ ನಾಯಕಿಯರು ಯಾರು?

  By Harshitha
  |

  ಮೊಟ್ಟ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ನಟಿಸಲು ಒಪ್ಪಿಕೊಂಡಿರುವ ಸಿನಿಮಾ 'ಜೋಗಿ' ಪ್ರೇಮ್ ನಿರ್ದೇಶನದ 'ಕಲಿ'.

  ಬರೋಬ್ಬರಿ 100 ಕೋಟಿ ರೂಪಾಯಿಯಲ್ಲಿ ತಯಾರಾಗುವ 'ಕಲಿ' ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕ ಪ್ರೇಮ್ ಬಿಜಿಯಾಗಿದ್ದಾರೆ. 'ಕಲಿ' ಚಿತ್ರ ಸೆಟ್ಟೇರುವುದಕ್ಕೆ ಇನ್ನೂ ಸಾಕಷ್ಟು ಸಮಯ ಇರುವಾಗಲೇ, ಗಾಂಧಿನಗರದಲ್ಲಿ 'ಕಲಿ' ಸಿನಿಮಾದ ಬಗ್ಗೆ ದಿನಕ್ಕೊಂದು ಗಾಸಿಪ್ ಹುಟ್ಟಿಕೊಳ್ಳುತ್ತಿದೆ. [ಶಿವಣ್ಣ-ಸುದೀಪ್ 'ಕಲಿ' ಚಿತ್ರದ ಬಗ್ಗೆ ಹೊಸ ಗಾಸಿಪ್!]

  ಈ ಬಾರಿ 'ಕಲಿ' ಚಿತ್ರ ಸುದ್ದಿಯಾಗಿರುವುದು ನಾಯಕಿಯರ ವಿಚಾರವಾಗಿ. ಹಾಗಾದ್ರೆ, ಗಾಂಧಿನಗರದ ಗಾಸಿಪ್ ಪಂಡಿತರ ಪ್ರಕಾರ 'ಕಲಿ' ಚಿತ್ರದ ಹೀರೋಯಿನ್ಸ್ ಯಾರು? ಉತ್ತರ ತಿಳಿಯಲು ಕೆಳಗಿರುವ ಸ್ಲೈಡ್ಸ್ ಕ್ಲಿಕ್ ಮಾಡಿ.....

  ಕನ್ನಡಕ್ಕೆ ಮರಳಿ ಬರ್ತಾರಾ ದೀಪಿಕಾ ಪಡುಕೋಣೆ?

  ಕನ್ನಡಕ್ಕೆ ಮರಳಿ ಬರ್ತಾರಾ ದೀಪಿಕಾ ಪಡುಕೋಣೆ?

  'ಕಲಿ' ಚಿತ್ರದ ನಾಯಕಿಯರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಹೆಸರೂ ಇದೆ ಎನ್ನಲಾಗಿದೆ. ಬೆಂಗಳೂರಿನಲ್ಲೇ ಬೆಳೆದಿರುವ ದೀಪಿಕಾ ಪಡುಕೋಣೆ ಆಗಲೇ ಕನ್ನಡದ 'ಐಶ್ವರ್ಯ' ಸಿನಿಮಾದಲ್ಲಿ ನಟಿಸಿದ್ದಾರೆ. ಉತ್ತಮ ಸ್ಕ್ರಿಪ್ಟ್ ಸಿಕ್ಕರೆ, ಕನ್ನಡದಲ್ಲಿ ನಟಿಸುವೆ ಎಂದು ಹೇಳಿರುವ ದೀಪಿಕಾ 'ಕಲಿ' ಚಿತ್ರದ ಮೂಲಕ ಮರಳಿ ಸ್ಯಾಂಡಲ್ ವುಡ್ ಗೆ ಬರ್ತಾರಾ ಅನ್ನೋದು ಸದ್ಯದ ಪ್ರಶ್ನೆ. [ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

  ಅನುಷ್ಕಾ ಶೆಟ್ಟಿ?

  ಅನುಷ್ಕಾ ಶೆಟ್ಟಿ?

  ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಸಖತ್ ಬಿಜಿಯಾಗಿರುವ ನಟಿ ಅನುಷ್ಕಾ ಶೆಟ್ಟಿ ರವರನ್ನ ಸ್ಯಾಂಡಲ್ ವುಡ್ ಗೆ ಕರೆತರುವ ಪ್ರಯತ್ನ ಅನೇಕರಿಂದ ನಡೆದಿದೆ. ಆದ್ರೆ, ಯಾವುದಕ್ಕೂ ಓಕೆ ಅನ್ನದ ಅನುಷ್ಕಾ ಶೆಟ್ಟಿ, 'ಕಲಿ' ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ತಾರಾ?

  ಸಮಂತಾ ಕೂಡ ಬರ್ತಾರಂತೆ!

  ಸಮಂತಾ ಕೂಡ ಬರ್ತಾರಂತೆ!

  ನಿರ್ದೇಶಕ ಪ್ರೇಮ್ ತಲೆಯಲ್ಲಿ ಸಮಂತಾ ಕೂಡ ಇದ್ದಾರೆ ಎನ್ನುತ್ತಿವೆ ಮೂಲಗಳು.

  ರಕ್ಷಿತಾ ಕೂಡ ನಟಿಸುತ್ತಾರೆ!

  ರಕ್ಷಿತಾ ಕೂಡ ನಟಿಸುತ್ತಾರೆ!

  ಈಗಾಗಲೇ ಹಬ್ಬಿರುವ ಸುದ್ದಿ ಪ್ರಕಾರ, ನಟಿ ರಕ್ಷಿತಾ ಪ್ರೇಮ್ ಕೂಡ 'ಕಲಿ' ಸಿನಿಮಾದಲ್ಲಿ ಅಭಿನಯಿಸಲಿದ್ದಾರಂತೆ.

  ಪ್ರೇಮ್ ಏನಂತಾರೆ?

  ಪ್ರೇಮ್ ಏನಂತಾರೆ?

  ''ಕಲಿ' ಸಿನಿಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳು ನಟಿಸುವುದು ಖಚಿತ. ಆದ್ರೆ, ಈಗಲೇ ಹೆಸರು ಬಹಿರಂಗ ಪಡಿಸುವುದಿಲ್ಲ'' ಅಂತಾರೆ ನಿರ್ದೇಶಕ ಪ್ರೇಮ್.

  English summary
  According to the Grapevine, Actress Deepika Padukone, Anushka Shetty, Samantha to act in Shiva Rajkumar and Sudeep starrer 'Kali'. Prem is directing this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X