ಅಬ್ಬಾ..! ಪ್ರಭಾಸ್ ಜೊತೆ ನಟಿಸಲು ದೀಪಿಕಾ ಇಷ್ಟೊಂದು ಸಂಭಾವನೆ ಕೇಳಿದ್ರಾ?
ಟಾಲಿವುಡ್ ನ ಖ್ಯಾತ ನಟ ಪ್ರಭಾಸ್ ಸದ್ಯ 20ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಸಿನಿಮಾದ ನಂತರ ಪ್ರಭಾಸ್ ನ್ಯಾಶನಲ್ ಸ್ಟಾರ್ ಆಗಿದ್ದಾರೆ. ಪ್ರಭಾಸ್ ಸಿನಿಮಾ ಮೇಲೆ ನಿರೀಕ್ಷೆ ಕೂಡ ಇಮ್ಮಡಿಯಾಗಿದೆ. ಅಲ್ಲದೆ ಪ್ರಭಾಸ್ ಜೊತೆ ನಟಿಸಲು ನಾಯಕಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.
ಕಳೆದ ವರ್ಷ ರಿಲೀಸ್ ಆದ ಸಾಹೋ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ಸಿನಿಮಾ ವಿಫಲವಾಗಿದೆ. ಆದರೆ ಬಾಲಿವುಡ್ ನಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಪ್ರಭಾಸ್ 20ನೇ ಸಿನಿಮಾದಲ್ಲಿ ನಿರತರಾಗಿದ್ದರೂ, 21ನೇ ಸಿನಿಮಾ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಅದರಲ್ಲೂ ನಾಯಕಿಯ ವಿಚಾರವಾಗಿ ಸಿನಿಮಾ ಸದ್ದು ಮಾಡುತ್ತಿದೆ. ಮುಂದೆ ಓದಿ..

'ಮಹಾನಟಿ' ನಿರ್ದೇಶಕರ ಜೊತೆ ಪ್ರಭಾಸ್ ಸಿನಿಮಾ
ಪ್ರಭಾಸ್ 20ನೇ ಸಿನಿಮಾದ ಚಿತ್ರೀಕರಣ ಮುಗಿಯುತ್ತಿದ್ದಂತೆ 'ಮಹಾನಟಿ' ಖ್ಯಾತಿಯ ನಿರ್ದೇಶಕ ನಾಗ್ ಅಶ್ವಿನ್ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಈಗಾಗಲೆ ನಾಗ್ ಮತ್ತು ಪ್ರಭಾಸ್ ಸಿನಿಮಾ ಮಾಡುವ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿದೆ. ಸಿನಿಮಾಗೆ ಟಾಲಿವುಡ್ ನ ಪ್ರಸಿದ್ಧ ವೈಜಯಂತಿ ಬ್ಯಾನರ್ ಬಂಡವಾಳ ಹೂಡುತ್ತಿದೆ.

ಪ್ರಭಾಸ್ ಗೆ ನಾಯಕಿಯಾಗ್ತಾರಾ ದೀಪಿಕಾ?
ಪ್ರಭಾಸ್ 21ನೇ ಸಿನಿಮಾಗೆ ನಾಯಕಿಯಾರಾಗ್ತಾರೆ ಎನ್ನುವ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಬಾಲಿವುಡ್ ನ ಖ್ಯಾತ ನಾಯಕಿಯನ್ನು ಕರೆತರಬೇಕಂದು ಸಿನಿಮಾತಂಡ ಹಠಕ್ಕೆ ಬಿದ್ದಿದೆ. ಹಾಗಾಗಿ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಅವರ ಜೊತೆ ಚಿತ್ರತಂಡ ಈಗಾಗಲೆ ಮಾತುಕತೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಭಾರಿ ಮೊತ್ತದ ಸಂಭಾವನೆ ಕೇಳಿದ ದೀಪಿಕಾ
ಪ್ರಭಾಸ್ ಜೊತೆ ನಾಯಕಿಯಾಗಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಪ್ರಭಾಸ್ ಜೊತೆ ನಟಿಸಲು ದೀಪಿಕಾ ಬೇಡಿಕೆ ಇಟ್ಟ ಸಂಭಾವನೆ ಕೇಳಿ ಚಿತ್ರತಂಡ ಶಾಕ್ ಆಗಿದೆಯಂತೆ. ಹೌದು, ದೀಪಿಕಾ, ಪ್ರಭಾಸ್ ಜೊತೆ ನಟಿಸಲು ಬರೋಬ್ಬರಿ 20 ರಿಂದ 25 ಕೋಟಿ ಸಂಭಾವನೆ ಕೇಳಿದ್ದಾರಂತೆ.

ದೀಪಿಕಾ ಪಡೆಯುವ ಸಂಭಾವನೆ ಎಷ್ಟು?
ದೀಪಿಕಾ ಬಾಲಿವುಡ್ ಬಹುಬೇಡಿಕೆಯ ನಟಿ. ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ದೀಪಿಕಾ ಕೂಡ ಒಬ್ಬರು. ಕಂಗನಾ ರಣಾವತ್ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ದೀಪಿಕಾ ಎಂದು ಹೇಳುತ್ತಾರೆ. ಬಾಲಿವುಡ್ ಮೂಲಗಳ ಪ್ರಕಾರ ದೀಪಿಕಾ 14 ರಿಂದ 15 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಆದರೆ ಟಾಲಿವುಡ್ ಸಿನಿಮಾಗೆ ಬರೋಬ್ಬರಿ 20 ರಿಂದ 25 ಕೋಟಿ ಬೇಡಿಕೆ ಇಟ್ಟಿದ್ದಾರೆ. ನಿಜಕ್ಕೂ ದೀಪಿಕಾ ಇಷ್ಟೊಂದು ಸಂಭಾವನೆ ಬೇಡಿಕೆ ಇಟ್ಟಿದ್ದಾರಾ? ಪ್ರಭಾಸ್ ಜೊತೆ ನಟಿಸುತ್ತಾರಾ? ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.


Click it and Unblock the Notifications











