ಸಲ್ಮಾನ್ ಚಿತ್ರಕ್ಕೆ ಕೊನೆಗೂ ನಾಯಕಿಯಾದ ಕನ್ನಡತಿ ದೀಪಿಕಾ.!

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಿಂದಿಯ ಬಹುತೇಕ ಸ್ಟಾರ್ ನಟಿಯರ ಜೊತೆ ನಟಿಸಿದ್ದಾರೆ. ಆದ್ರೆ, ಕನ್ನಡತಿ ದೀಪಿಕಾ ಪಡುಕೋಣೆ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಕ್ಕಿರಲಿಲ್ಲ.

ಆ ಸಿನಿಮಾ, ಈ ಸಿನಿಮಾ ಅಂದುಕೊಂಡೆ ಮುಂದೆ ಹೋಗುತ್ತಿದ್ದಾರೆ ಹೊರತು ಯಾವ ಚಿತ್ರದಲ್ಲೂ ಒಟ್ಟಿಗೆ ಬಂದಿಲ್ಲ. ಇದೀಗ, ಬಹಳ ದಿನಗಳ ನಂತರ ಇವರಿಬ್ಬರು ಒಟ್ಟಿಗೆ ಬರುವ ಸೂಚನೆ ಸಿಕ್ಕಿದೆ.

ಹೌದು, ಸಲ್ಮಾನ್ ಖಾನ್ ಅಭಿನಯಿಸಲಿರುವ ಕಿಕ್ 2 ಚಿತ್ರದಲ್ಲಿ ದೀಪಿಕಾ ನಟಿಸುವ ಸಾಧ್ಯತೆ ಇದೆಯಂತೆ. ಈ ಹಿಂದೆ ಈ ಪ್ರಾಜೆಕ್ಟ್ ಗೆ ಜಾಕ್ವೆಲಿನ್ ಫರ್ನಾಂಡಿಸ್ ಆಯ್ಕೆಯಾಗಿದ್ದರು. ಈಗ ಆ ಜಾಗಕ್ಕೆ ದೀಪಿಕಾ ಬರಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

Deepika padukone heroine for salman khan in kick 2

ಸದ್ಯಕ್ಕೆ ಇದು ಅಧಿಕೃತವಾಗಿಲ್ಲವಾದರೂ, ಇಂತಹದೊಂದು ಸುದ್ದಿ ಅಭಿಮಾನಿಗಳಿಗೆ ಖುಷಿ ನೀಡಿದೆ. ''ಸಲ್ಮಾನ್ ಚಿತ್ರದಲ್ಲಿ ರೆಗ್ಯುಲರ್ ಹೀರೋಯಿನ್ ಆಗಿ ನಾನು ನಟಿಸಿಲ್ಲ. ಸಲ್ಲು ಅವರಂತೆ ನನ್ನ ಪಾತ್ರಕ್ಕೂ ಪ್ರಾಮುಖ್ಯತೆ ಇದ್ದರೇ ಮಾಡ್ತೀನಿ'' ಎಂದು ದೀಪಿಕಾ ಹೇಳಿಕೊಂಡಿದ್ದಾರೆ. ಹಾಗಾಗಿ, ನಿರ್ದೇಶಕ ಸಾಜೀದ್ ಪಾತ್ರದ ಮೇಲೆ ಕೆಲಸ ಮಾಡ್ತಿದ್ದಾರಂತೆ.

ಅಂದ್ಹಾಗೆ, ಕಿಕ್ 2 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರನ್ನ ಒಟ್ಟಿಗೆ ತರಬೇಕು ಎನ್ನುವುದು ಚಿತ್ರತಂಡದ ಮೊದಲ ಆಯ್ಕೆಯಾಗಿತ್ತು. ಆದ್ರೆ, ಕಾರಣಾಂತರಗಳಿಂದ ಜಾಕ್ವೆಲಿನ್ ಆಯ್ಕೆಯಾಗಿದ್ದರು. ಈಗ ಮತ್ತೆ ದೀಪಿಕಾ ಅವರನ್ನೇ ಕರೆತರುವ ಪ್ರಯತ್ನ ಸಾಗುತ್ತಿದೆಯಂತೆ.

Deepika padukone heroine for salman khan in kick 2

ಸದ್ಯ, ಸಲ್ಮಾನ್ ಖಾನ್ ಅವರ 'ಭಾರತ್' ಸಿನಿಮಾ ಈದ್ ಹಬ್ಬಕ್ಕೆ ಬಿಡುಗಡೆಯಾಗುತ್ತಿದೆ. 'ದಬಾಂಗ್-3 ಆರಂಭಿಸಿದ್ದಾರೆ. ಇದಾದ ಬಳಿಕ ಕಿಕ್-2 ಕೈಗೆತ್ತಿಕೊಳ್ಳಲಿದ್ದಾರೆ. ಮತ್ತೊಂದೆಡೆ ಚಪಕ್ ಚಿತ್ರದಲ್ಲಿ ದೀಪಿಕಾ ನಟಿಸುತ್ತಿದ್ದಾರೆ. ಬಹುಶಃ ಎಲ್ಲ ಅಂದುಕೊಂಡಂತೆ ಆದ್ರೆ ಕಿಕ್-2 ಚಿತ್ರೀಕರಣ ಆರಂಭವಾಗುವಷ್ಟರಲ್ಲಿ ಸಲ್ಲು-ದೀಪಿಕಾ ಕಾಂಬಿನೇಷನ್ ಪಕ್ಕಾ ಆಗಿರುತ್ತೆ ಎನ್ನಲಾಗುತ್ತಿದೆ.

More from Filmibeat

English summary
According to sources Deepika padukone heroine for salman khan in kick 2. jacqueline fernandez out from this cast.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X