For Quick Alerts
  ALLOW NOTIFICATIONS  
  For Daily Alerts

  ಮತ್ತೆ ಹಳೆ ಬಾಯ್‌ಫ್ರೆಂಡ್‌ ಜೊತೆ ದೀಪಿಕಾ ಪಡುಕೋಣೆ ಸಿನಿಮಾ!

  |

  ನಟಿ ದೀಪಿಕಾ ಪಡುಕೋಣೆ, ಬಾಲಿವುಡ್‌ನ ಅತ್ಯಂತ ದುಬಾರಿ ಹಾಗೂ ಬೇಡಿಕೆಯ ಸ್ಟಾರ್ ನಟಿ. ಮಹಿಳಾ ಪ್ರಧಾನ ಸಿನಿಮಾಗಳು, ಪ್ರಯೋಗಾತ್ಮಕ ಸಿನಿಮಾಗಳು, ರೊಮ್ಯಾಂಟಿಕ್, ಆಕ್ಷನ್ ಎಲ್ಲ ರೀತಿಯ ಸಿನಿಮಾಗಳಿಗೂ ದೀಪಿಕಾ ಪಡುಕೋಣೆ ಮೊದಲ ಆಯ್ಕೆ!

  ದೀಪಿಕಾ ಪಡುಕೋಣೆ ಮಾಡುತ್ತಿರುವಷ್ಟು ಭಿನ್ನ-ಭಿನ್ನ ಮಾದರಿಯ ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ಇನ್ಯಾವ ನಟಿಯರೂ ಮಾಡುತ್ತಿಲ್ಲ. ಹಿಂದಿ ಸಿನಿಮಾಗಳು ಮಾತ್ರವೇ ಅಲ್ಲದೆ, ಇದೀಗ ತೆಲುಗಿನಿಂದಲೂ ಬಹುದೊಡ್ಡ ಆಫರ್ ಅನ್ನು ದೀಪಿಕಾ ದೋಚಿಕೊಂಡಿದ್ದಾರೆ.

  ದೀಪಿಕಾ To ಕತ್ರಿನಾ ಕೈಫ್: ಪಾರ್ಟಿಗಳಲ್ಲಿ ಡಾನ್ಸ್ ಮಾಡಲು ಕೋಟಿ ಕೋಟಿ ಚಾರ್ಜ್!ದೀಪಿಕಾ To ಕತ್ರಿನಾ ಕೈಫ್: ಪಾರ್ಟಿಗಳಲ್ಲಿ ಡಾನ್ಸ್ ಮಾಡಲು ಕೋಟಿ ಕೋಟಿ ಚಾರ್ಜ್!

  ಇದೀಗ ದೀಪಿಕಾ ಪಡುಕೋಣೆ ಬಗ್ಗೆ ಹೊರಬಿದ್ದಿರುವ ಹೊಸ ಸುದ್ದಿಯೆಂದರೆ, ದೀಪಿಕಾ ಪಡುಕೋಣೆ ತಮ್ಮ ಹಳೆಯ ಬಾಯ್‌ಫ್ರೆಂಡ್‌ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರಂತೆ! ಮದುವೆಯಾಗುವ ಮುಂಚೆ ಕೆಲವು ಹುಡುಗರ ಜೊತೆ ಸುತ್ತಾಡಿದ್ದರು ದೀಪಿಕಾ, ಹಾಗಿದ್ದರೆ ಯಾವ ಬಾಯ್‌ಫ್ರೆಂಡ್‌ ಜೊತೆ ದೀಪಿಕಾ ಸಿನಿಮಾ ಮಾಡುತ್ತಿದ್ದಾರೆ?

  ಬಾಲಿವುಡ್‌ನಲ್ಲಿ ಬಹುಚರ್ಚಿತ ಪ್ರೇಮಕತೆಗಳೆಂದರೆ ಅದು ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಕಪೂರ್ ಪ್ರೇಮಕತೆ. ಬಹುವಾಗಿ ಚರ್ಚಿತವಾಗಿತ್ತು. ಇಬ್ಬರೂ ಬಾಲಿವುಡ್‌ನ ಸ್ಟಾರ್‌ಗಳ ಪ್ರೇಮಕತೆ ಬಹುವಾಗಿ ಚರ್ಚಿತವಾಗಿತ್ತು. ದೀಪಿಕಾ ಪಡುಕೋಣೆ ಅಂತೂ ತಮ್ಮ ಪ್ರೇಮ ಸಂಬಂಧವನ್ನು ಗಂಭೀರವಾಗಿ ಪರಿಗಣಿಸಿದ್ದರು. ರಣ್ಬೀರ್ ಕಪೂರ್ ಹೆಸರನ್ನು 'ಆರ್‌ಕೆ' ಎಂದು ಹಚ್ಚೆ ಸಹ ಹಾಕಿಸಿಕೊಂಡಿದ್ದರು. ಆದರೆ ಇವರಿಬ್ಬರು ಬೇಗನೆ ಬ್ರೇಕ್‌ ಅಪ್ ಸಹ ಮಾಡಿಕೊಂಡರು. ಆದರೆ ಈಗ ಇವರಿಬ್ಬರೂ ಸ್ನೇಹಿತರಾಗಿದ್ದಾರೆ.

  'ಬ್ರಹ್ಮಾಸ್ತ್ರ; ಪಾರ್ಟ್‌ 1' ನಲ್ಲಿ ಅತಿಥಿ ಪಾತ್ರ

  'ಬ್ರಹ್ಮಾಸ್ತ್ರ; ಪಾರ್ಟ್‌ 1' ನಲ್ಲಿ ಅತಿಥಿ ಪಾತ್ರ

  ಇದೀಗ ದೀಪಿಕಾ ಪಡುಕೋಣೆ, ರಣ್ಬೀರ್ ಕಪೂರ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. 2013 ರಲ್ಲಿ ತೆರೆ ಕಂಡ 'ಏ ಜವಾನಿ ಏ ದಿವಾನಿ' ಸಿನಿಮಾದ ಬಳಿಕ ಇಬ್ಬರೂ ಒಟ್ಟಿಗೆ ನಟಿಸಿರಲಿಲ್ಲ. ಇನ್ನು ಮುಂದೆ ಇವರಿಬ್ಬರು ಒಟ್ಟಿಗೆ ನಟಿಸುವುದಿಲ್ಲ ಎನ್ನಲಾಗಿತ್ತು. ಆದರೆ ಈಗ ರಣ್ಬೀರ್ ಕಪೂರ್‌ರ ಹೊಸ ಸಿನಿಮಾ 'ಬ್ರಹ್ಮಾಸ್ತ್ರ'ದ ಎರಡನೇ ಭಾಗದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ 'ಬ್ರಹ್ಮಾಸ್ತ್ರ; ಪಾರ್ಟ್‌ 1' ನಲ್ಲಿ ಅತಿಥಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರಂತೆ.

  'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ

  'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ದೀಪಿಕಾ ಪಡುಕೋಣೆ

  'ಬ್ರಹ್ಮಾಸ್ತ್ರ' ಸಿನಿಮಾದ ನಿರ್ದೇಶಕ ಅಯಾನ್ ಮುಖರ್ಜಿ ಹೇಳಿರುವಂತೆ ತಮ್ಮ ಮುಂದಿನ ಸಿನಿಮಾ 'ಬ್ರಹ್ಮಾಸ್ತ್ರ' ಸಿನಿಮಾದ ಪಾತ್ರಗಳ ಆಧಾರದಲ್ಲಿಯೇ ಆಗಲಿವೆಯಂತೆ. ಹಾಗಾಗಿ ದೀಪಿಕಾ ಪಡುಕೋಣೆ ಸಹ 'ಬ್ರಹ್ಮಾಸ್ತ್ರ' ಸಿನಿಮಾದ ಭಾಗವಾಗಿರುವ ಕಾರಣ ಮುಂದಿನ ದಿನಗಳಲ್ಲಿ ರಣ್ಬೀರ್ ಕಪೂರ್ ಜೊತೆ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಬ್ರಹ್ಮಾಸ್ತ್ರ ಸಿನಿಮಾವು ಸೆಪ್ಟೆಂಬರ್ 9 ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದಲ್ಲಿ ಆಲಿಯಾ ಭಟ್ ನಾಯಕಿಯಾಗಿ ನಟಿಸಿದ್ದಾರೆ.

  ರಣ್ಬೀರ್ ಕಪೂರ್ ಮೋಸ ಮಾಡಿದ ಎಂದಿದ್ದ ದೀಪಿಕಾ

  ರಣ್ಬೀರ್ ಕಪೂರ್ ಮೋಸ ಮಾಡಿದ ಎಂದಿದ್ದ ದೀಪಿಕಾ

  ರಣ್ಬೀರ್ ಕಪೂರ್-ದೀಪಿಕಾ ಪಡುಕೋಣೆ ಪ್ರೇಮಕತೆಯ ಬಗ್ಗೆ ಹೇಳುವುದಾದರೆ ರಣ್ಬೀರ್, ದೀಪಿಕಾರಿಂದ ದೂರಾದ ಬಳಿಕ ದೀಪಿಕಾ ಪಡುಕೋಣೆ ಖಿನ್ನತೆಗೆ ಒಳಗಾಗಿದ್ದರು. ಅವಶ್ಯಕ ಚಿಕಿತ್ಸೆ ಬಳಿಕ ಅವರು ಗುಣವಾದರು. ತಮ್ಮ ಕತ್ತಿನ ಮೇಲೆ ಹಾಕಿಸಿದ್ದ ಆರ್‌ಕೆ ಟ್ಯಾಟೂವನ್ನು ಸಹ ಅಳಿಸಿಹಾಕಿದರು. 2010 ರಲ್ಲಿ ನೀಡಿದ ಸಂದರ್ಶನದಲ್ಲಿ, ರಣ್ಬೀರ್ ಕಪೂರ್ ನನಗೆ ಮೋಸ ಮಾಡಿದ ಎಂದು ಆರೋಪಿಸಿದರು. ಆ ನಂತರದ ಸಂದರ್ಶನವೊಂದರಲ್ಲಿ ರಣ್ಬೀರ್ ಕಪೂರ್ ಅದನ್ನು ಒಪ್ಪಿಕೊಂಡರು ಸಹ.

  ದೀಪಿಕಾ ಪಡುಕೋಣೆ ಪ್ರೇಮಕಹಾನಿಗಳು

  ದೀಪಿಕಾ ಪಡುಕೋಣೆ ಪ್ರೇಮಕಹಾನಿಗಳು

  ಬಹುತೇಕ ಬಾಲಿವುಡ್ ನಟಿಯರಿಗಿರುವಂತೆ ದೀಪಿಕಾ ಪಡುಕೋಣೆಗೂ ಕೆಲವು ಅಫೇರ್‌ಗಳಿದ್ದವು. ಕ್ರಿಕೆಟಿಗರಾದ ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ ಹೆಸರು ಆರಂಭದಲ್ಲಿ ದೀಪಿಕಾ ಜೊತೆ ಕೇಳಿ ಬಂದಿತ್ತು. ಆ ಬಳಿಕ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಜೊತೆಗೂ ದೀಪಿಕಾ ಡೇಟಿಂಗ್ ಮಾಡಿದರು. ಐಪಿಎಲ್ ಕ್ರಿಕೆಟ್ ಮ್ಯಾಚ್‌ನ ವೇಳೆ ಸಿದ್ಧಾರ್ಥ್‌ ಮಲ್ಯ, ದೀಪಿಕಾಗೆ ಚುಂಬಿಸಿದ್ದು ಸುದ್ದಿಯಾಗಿತ್ತು. ನಿಹಾರ್ ಪಾಂಡ್ಯಾ ಹೆಸರಿನ ಮಾಡೆಲ್ ಹಾಗೂ ಬ್ಯುಸಿನೆಸ್ ಮ್ಯಾನ್ ಜೊತೆಗೂ ಡೇಟಿಂಗ್ ನಡೆಸಿದ್ದರು ದೀಪಿಕಾ ಪಡುಕೋಣೆ. ಆ ಬಳಿಕ ರಣ್ವೀರ್ ಸಿಂಗ್ ಅನ್ನು ಪ್ರೀತಿಸಿ ವಿವಾಹವಾಗಿ ಈಗ ಆರಾಮವಾಗಿದ್ದಾರೆ.

  English summary
  Actress Deepika Padukone may do movie with her ex boy friend Ranbir Kapoor. She already acted in Ranbir's Brahmasthra in a guest role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X