For Quick Alerts
  ALLOW NOTIFICATIONS  
  For Daily Alerts

  ಸೀತೆ ಪಾತ್ರಕ್ಕಾಗಿ ದೀಪಿಕಾ- ಕರೀನಾ ನಡುವೆ ಪೈಪೋಟಿ; ಯಾರಾಗ್ತಾರೆ 'ರಾಮಾಯಣ'ದ ನಾಯಕಿ?

  By ಫಿಲ್ಮ್ ಡೆಸ್ಕ್
  |

  ಬಾಲಿವುಡ್ ನಲ್ಲಿ 'ರಾಮಾಯಣ'ದ ಬಗ್ಗೆ ಅದ್ದೂರಿಯಾಗಿ ಸಿನಿಮಾ ಮಾಡುವ ಪ್ಲಾನ್ ವರ್ಷಗಳಿಂದ ನಡೆಯುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ಸೆಟ್ಟೇರಿ ಚಿತ್ರೀಕರಣ ಪ್ರಾರಂಭವಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ.

  ಮಧು ಮಂಟೇನಾ ನಿರ್ಮಾಣದ, ನಿತೀಶ್ ತಿವಾರಿ ನಿರ್ದೇಶನದ 3ಡಿ ರಾಮಾಯಣ ಚಿತ್ರಕ್ಕೆ ಮೊದಲು ಹೃತಿಕ್ ರೋಷನ್ ರಾಮನಾಗಿ ಆಯ್ಕೆಯಾಗಿದ್ದರು. ಹೃತಿಕ್ ಗೆ ಜೋಡಿಯಾಗಿ ಅಂದರೆ ಸೀತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿತ್ತು. ಬಳಿಕ ಹೃತಿಕ್ ರಾಮನ ಪಾತ್ರದಿಂದ ದೂರ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದರು.

  'ವಿಕ್ರಂ ವೇದ' ರಿಮೇಕ್‌ನಿಂದ ಹೃತಿಕ್ ರೋಷನ್ ಔಟ್; ಕಾರಣವೇನು?'ವಿಕ್ರಂ ವೇದ' ರಿಮೇಕ್‌ನಿಂದ ಹೃತಿಕ್ ರೋಷನ್ ಔಟ್; ಕಾರಣವೇನು?

  ಮೂಲಗಳ ಪ್ರಕಾರ ಹೃತಿಕ್ ಜಾಗಕ್ಕೆ ಸೌತ್ ಸ್ಟಾರ್ ಮಹೇಶ್ ಬಾಬು ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ರಾಮನಾಗಿ ಮಹೇಶ್ ಬಾಬು ಕಾಣಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇತ್ತ ಹೃತಿಕ್ ರಾವಣನಾಗಿ ಮಿಂಚಲಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವು ಮೂಲಗಳು ಹೃತಿಕ್ ಸಿನಿಮಾದಿಂದನೇ ಹಿಂದೆ ಸರಿದಿದ್ದಾರೆ ಎನ್ನುತ್ತಿವೆ. ಈ ಬೆಳವಣಿಗಳ ನಡುವೆ ಈಗ ಸೀತೆ ಪಾತ್ರದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಸೀತೆ ಪಾತ್ರ ಈಗ ದೀಪಿಕಾ ಕೈ ತಪ್ಪುವ ಸಾಧ್ಯತೆ ಇದೆ..ಮುಂದೆ ಓದಿ...

  ಸೀತೆ ಆಗ್ತಾರಾ ಕರೀನಾ?

  ಸೀತೆ ಆಗ್ತಾರಾ ಕರೀನಾ?

  ಸೀತೆ ಪಾತ್ರದಲ್ಲಿ ದೀಪಿಕಾ ನಟಿಸುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸೀತೆ ಪಾತ್ರಕ್ಕೆ ದೀಪಿಕಾ ಜೊತೆ ನಟಿ ಕರೀನಾ ಹೆಸರು ಕೇಳಿಬರುತ್ತಿದೆ. ಇಬ್ಬರಲ್ಲಿ ಸೀತೆಗಾಗಿ ಪೈಪೋಟಿ ಏರ್ಪಟ್ಟಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸೀತೆಯಾಗಿ ಕರೀನಾ ಕಾಣಿಸಿಕೊಳ್ಳುತ್ತಿದ್ದಾರಂತೆ.

  ಪೌರಾಣಿಕ ಪಾತ್ರಕ್ಕಾಗಿ ಕರೀನಾ ಸಾಹಸ

  ಪೌರಾಣಿಕ ಪಾತ್ರಕ್ಕಾಗಿ ಕರೀನಾ ಸಾಹಸ

  ಇತ್ತೀಚಿಗಷ್ಟೆ ಎರಡನೇ ಮಗುವಿಗೆ ಜನ್ಮ ನೀಡಿರುವ ಕರೀನಾ ಮತ್ತೆ ಬಣ್ಣ ಹಚ್ಚಲು ಸಜ್ಜಾಗುತ್ತಿದ್ದಾರೆ. ಕರಣ್ ಜೋಹರ್ ಸಾರಥ್ಯದಲ್ಲಿ ಮೂಡಿಬರುತ್ತಿದ್ದ ಪೌರಾಣಿಕ ತಖ್ತ್ ಚಿತ್ರದಲ್ಲಿ ಕರೀನಾ ನಟಿಸಬೇಕಿತ್ತು. ಆದರೆ ತಖ್ತ್ ಪ್ರಾರಂಭದಲ್ಲೇ ನಿಂತು ಹೋಗಿದೆ. ಹಾಗಾಗಿ ಮತ್ತೊಂದು ಪೌರಾಣಿಕ ಪಾತ್ರಕ್ಕಾಗಿ ಕಾಯುತ್ತಿದ್ದ ಕರೀನಾಗೆ ರಾಮಾಯಣದ ಸೀತೆ ಪಾತ್ರ ಮಾಡುವ ಅವಕಾಶ ಸಿಕ್ಕಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹಾಗಾಗಿ ಸೀತೆಯಾಗಿ ಕರೀನಾ ಬಣ್ಣ ಹಚ್ಚಿದರೂ ಅಚ್ಚರಿ ಪಡಬೇಕಾಗಿಲ್ಲ.

  ದ್ರೌಪದಿ ಆಗಲು ಸೀತೆ ಪಾತ್ರ ತ್ಯಜಿಸುತ್ತಾರಾ ದೀಪಿಕಾ?

  ದ್ರೌಪದಿ ಆಗಲು ಸೀತೆ ಪಾತ್ರ ತ್ಯಜಿಸುತ್ತಾರಾ ದೀಪಿಕಾ?

  ಇನ್ನು ದೀಪಿಕಾ ವಿಚಾರಕ್ಕೆ ಬರುವುದಾದರೆ ಈಗಾಗಲೇ ಕರಾವಳಿ ಸುಂದರಿ ಮಸ್ತಾನಿ ಮತ್ತು ಪದ್ಮಾವತ್ ಅಂತಹ ಅದ್ಭುತ ಪಾತ್ರಗಳಲ್ಲಿ ಮಿಂಚಿದ್ದಾರೆ. ಇದೀಗ ತನ್ನದೇ ನಿರ್ಮಾಣದಲ್ಲಿ ದ್ರೌಪದಿ ಸಿನಿಮಾ ಮಾಡಲು ತಯಾರಾಗುತ್ತಿದ್ದಾರೆ. ಈ ಚಿತ್ರಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಸೀತೆ ಪಾತ್ರದಲ್ಲಿ ಬ್ಯುಸಿಯಾದರೆ ದ್ರೌಪದಿ ತಡವಾಗುವ ಸಾಧ್ಯತೆ ಇದೆ. ಹಾಗಾಗಿ ದೀಪಿಕಾ ಗೊಂದಲದಲ್ಲಿ ಸಿಲುಕಿದ್ದಾರೆ. ದ್ರೌಪದಿಗಾಗಿ ಸೀತೆ ಪಾತ್ರ ತ್ಯಜಿಸುತ್ತಾರಾ ಎಂದು ಕಾದು ನೋಡಬೇಕು.

  ದೀಪಿಕಾ ಬಳಿ ಇರುವ ಸಿನಿಮಾಗಳು

  ದೀಪಿಕಾ ಬಳಿ ಇರುವ ಸಿನಿಮಾಗಳು

  ಸದ್ಯ ಕರೀನಾ ಮತ್ತು ದೀಪಿಕಾ ಇಬ್ಬರಲ್ಲಿ ಸೀತೆ ಯಾರಾಗ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ದೀಪಿಕಾ ಸದ್ಯ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗೆ ಪ್ರಭಾಸ್ ಜೊತೆ ಇನ್ನು ಹೆಸರಿಡದ ಚಿತ್ರದಲ್ಲೂ ನಾಯಕಿಯಾಗಿ ಮಿಂಚಲಿದ್ದಾರೆ. ಈ ಎರಡು ಸಿನಿಮಾಗಳ ಜೊತೆಗೆ ಸೀತೆ ಆಗ್ತಾರಾ ಎಂದು ಕಾದು ನೋಡಬೇಕು.

  English summary
  Bollywood Actress Deepika Padukone or Kareena Kapoor the run for sita in Ramayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X