For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ಭಾರತದ ಹಿಟ್ ಸಿನಿಮಾದ ರೀಮೇಕ್‌ನಲ್ಲಿ ದೀಪಿಕಾ ಪಡುಕೋಣೆ!

  |

  ಬಾಲಿವುಡ್‌ಗೆ ದಕ್ಷಿಣ ಭಾರತ ಸಿನಿಮಾಗಳನ್ನು ರೀಮೇಕ್ ಮಾಡುತ್ತಿರುವುದು ಹೊಸ ವಿಷವೇನೂ ಅಲ್ಲ, ದಶಕಗಳಿಂದಲೂ ಹಿಟ್‌ಗಳಿಗಾಗಿ ದಕ್ಷಿಣ ಭಾರತದ ಸಿನಿಮಾಗಳ ಮೇಲೆ ಬಾಲಿವುಡ್ ಅವಲಂಬಿತವಾಗಿದೆ.

  ಅದರಲ್ಲಿಯೂ ಬಾಲಿವುಡ್‌ನ ಸ್ಟಾರ್ ನಟರು ದಕ್ಷಿಣ ಭಾರತದ ಸಾಲು-ಸಾಲು ಸಿನಿಮಾಗಳನ್ನು ರೀಮೇಕ್ ಮಾಡಿ ಹಣ ಬಾಚುತ್ತಲೇ ಬಂದಿದ್ದಾರೆ. ಇದೀಗ ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಸಹ ಇದೇ ಹಾದಿ ಹಿಡಿದಿದ್ದಾರೆ.

  'ಬ್ರಹ್ಮಾಸ್ತ್ರ'ದಲ್ಲಿ ದೀಪಿಕಾ ಪಡುಕೋಣೆ: ಆದರೆ ಗುರುತಿಸಿದ್ದು ಕೆಲವರೇ!'ಬ್ರಹ್ಮಾಸ್ತ್ರ'ದಲ್ಲಿ ದೀಪಿಕಾ ಪಡುಕೋಣೆ: ಆದರೆ ಗುರುತಿಸಿದ್ದು ಕೆಲವರೇ!

  ಮಹಿಳಾ ಪ್ರಧಾನ ಸೂಪರ್ ಹಿಟ್ ತೆಲುಗು ಸಿನಿಮಾ ಒಂದರ ಹಿಂದಿ ರೀಮೇಕ್‌ನಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

  2009 ರಲ್ಲಿ ಬಿಡುಗಡೆ ಆಗಿದ್ದ ಅತಿಮಾನುಷ ಕತೆಯುಳ್ಳ ಸಿನಿಮಾ 'ಅರುಂಧತಿ'ಯನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದ್ದು, ಮೂಲ ಸಿನಿಮಾದಲ್ಲಿ ಕನ್ನಡತಿ ಅನುಷ್ಕಾ ಶೆಟ್ಟಿ ನಟಿಸಿದ್ದ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

  'ಅರುಂಧತಿ' ಸಿನಿಮಾ ಆ ಕಾಲಕ್ಕೆ ಬಹುದೊಡ್ಡ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಮಹಿಳಾ ಪ್ರಧಾನ ಸಿನಿಮಾ ಆಗಿದ್ದರೂ ಸಹ ಸ್ಟಾರ್ ನಟರ ಸಿನಿಮಾಗಳನ್ನೇ ಮಕಾಡೆ ಮಲಗಿಸಿ ಬಾಕ್ಸ್ ಆಫೀಸ್‌ನಲ್ಲಿ ಗೆದ್ದಿತ್ತು. ಸಿನಿಮಾದಲ್ಲಿನ ಕತೆ, ದುಷ್ಟತೆಯ ವಿರುದ್ಧ ಅರುಂಧತಿಯ ವಿಜಯ, ಸಿನಿಮಾದ ಸಂಭಾಷಣೆ, ಸಂಗೀತ, ಗ್ರಾಫಿಕ್ಸ್‌, ಅನುಷ್ಕಾ ಶೆಟ್ಟಿ, ಸೋನು ಸೂದ್‌ರ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.

  ಇದೀಗ ದೀಪಿಕಾ ಪಡುಕೋಣೆಯೂ ಸೀರೆಯುಟ್ಟು, ದೊಡ್ಡ ಬಿಂದಿ ತೊಟ್ಟು 'ಅರುಂಧತಿ' ಆಗಲು ಹೊರಟಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾಗಳಲ್ಲಿ ಐತಿಹಾಸಿಕ ಪಾತ್ರಗಳಿಗೆ ದೀಪಿಕಾ ಬಣ್ಣ ಹಚ್ಚಿದ್ದಾರಾದರೂ ಪೌರಾಣಿಕ ಅಥವಾ ಅತಿಮಾನುಷ ಕತೆಯುಳ್ಳ ಸಿನಿಮಾಗಳಲ್ಲಿ ನಟಿಸಿಲ್ಲ.

  ದಕ್ಷಿಣ ಭಾರತದವರೇ ಆಗಿರುವ ದೀಪಿಕಾ ಪಡುಕೋಣೆಗೆ ಸೀರೆ, ಕುಂಕುಮಗಳು ಹೊಸದೇನೂ ಅಲ್ಲ. ದೀಪಿಕಾಗೆ ಆ ಅವತಾರ ಒಪ್ಪುತ್ತದೆ ಸಹ. ಆದರೆ 13 ವರ್ಷದ ಹಳೆಯ ಸಿನಿಮಾವನ್ನು ಈಗ ಹೊಸ ಅವತಾರದಲ್ಲಿ ಹೇಗೆ ಪ್ರೆಸೆಂಟ್ ಮಾಡುತ್ತಾರೆ ಎಂಬುದು ಕುತೂಹಲದ ವಿಷಯ.

  ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದಲ್ಲಿ ನಟಿಸಿ ಚಿತ್ರಿಕರಣ ಮುಗಿಸಿದ್ದಾರೆ. ಹೃತಿಕ್ ರೋಷನ್ ಜೊತೆಗೆ 'ಫೈಟರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್‌ಗೆ ನಾಯಕಿಯಾಗಿ ನಾಗ್ ಅಶ್ವಿನ್ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ. ಹಾಲಿವುಡ್ ಸಿನಿಮಾ 'ದಿ ಇಂಟರ್ನ್' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ನಟಿಸಲಿದ್ದಾರೆ. ಈ ಸಿನಿಮಾಗಳೆಲ್ಲ ಮುಗಿದ ಮೇಲೆ 'ಅರುಂಧತಿ' ರೀಮೇಕ್ ಶುರುವಾಗುವ ಸಾಧ್ಯತೆ ಇದೆ.

  English summary
  Bollywood actress Deepika Padukone to act in Telugu movie Arundhati's remake. Now she is busy in many other movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X