»   » NTR ಬಯೋಪಿಕ್ ನಲ್ಲಿ ಶ್ರೀದೇವಿಯಾಗಲು ಅವಕಾಶ ಪಡೆದ ಸ್ಟಾರ್ ನಟಿ.!

NTR ಬಯೋಪಿಕ್ ನಲ್ಲಿ ಶ್ರೀದೇವಿಯಾಗಲು ಅವಕಾಶ ಪಡೆದ ಸ್ಟಾರ್ ನಟಿ.!

Posted By:
Subscribe to Filmibeat Kannada

ತೆಲುಗು ಸೂಪರ್ ಸ್ಟಾರ್ ನಟ ಎನ್.ಟಿ. ರಾಮರಾವ್ ಅವರ ಬಯೋಪಿಕ್ ಸಿನಿಮಾ ಸೆಟ್ಟೇರಿದ್ದು, ಈಗಾಗಲೇ ಚಿತ್ರೀಕರಣ ಕೂಡ ಆರಂಭಿಸಿದೆ. ಈ ಚಿತ್ರದಲ್ಲಿ ಎನ್.ಟಿ.ಆರ್ ಅವರ ಖಾಸಗಿ ಜೀವನದ ಅನೇಕ ವಿಷ್ಯಗಳನ್ನ ತೋರಿಸಲಾಗುತ್ತಿದೆ. ಇದೀಗ, ಈ ಚಿತ್ರದ ಬಗ್ಗೆ ಕೇಳಿ ಬಂದಿರುವ ತಾಜಾ ಸುದ್ದಿ ಅಂದ್ರೆ, ಶ್ರೀದೇವಿಯ ಪಾತ್ರಕ್ಕಾಗಿ ಸ್ಟಾರ್ ನಟಿಯೊಬ್ಬಳು ಅವಕಾಶ ಪಡೆದುಕೊಂಡಿದ್ದಾರಂತೆ.

ಹೌದು, ಎನ್.ಟಿ.ಆರ್ ಬಯೋಪಿಕ್ ನಲ್ಲಿ ಶ್ರೀದೇವಿ ಪಾತ್ರ ಕೂಡ ಪ್ರಮುಖವಾಗಿದ್ದು, ಈ ಪಾತ್ರ ನಿಭಾಯಿಸಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಆಫರ್ ಮಾಡಲಾಗಿದೆಯಂತೆ. ಎನ್.ಟಿ.ಆರ್ ಮತ್ತು ಶ್ರೀದೇವಿ ಜೋಡಿ ತೆಲುಗು ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದೆ. ಹೀಗಾಗಿ, ಬಯೋಪಿಕ್ ನಲ್ಲಿ ದೀಪಿಕಾ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.

ಗುಟ್ಟಾಗಿ ಮದುವೆ ಆದ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್!

ಇದಕ್ಕೂ ಮುಂಚೆ ಎನ್.ಟಿ.ರಾಮರಾವ್ ಅವರ ಪತ್ನಿ ಬಸವತಾರಕಮ್ ಅವರ ಪಾತ್ರದಲ್ಲಿ ವಿದ್ಯಾಬಾಲನ್ ಹಾಗೂ ನಂದೇಲಾ ಬಾಸ್ಕರ್ ರಾವ್ ಪಾತ್ರದಲ್ಲಿ ಪರೇಶ್ ರಾವಲ್ ನಟಿಸಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೆ ಈಗ ಮತ್ತೋರ್ವ ಬಾಲಿವುಡ್ ನಟಿ ಎನ್.ಟಿ.ಆರ್ ಬಯೋಪಿಕ್ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರಂತೆ.

Deepika Padukone to play Sridevi in ntr biopic

ಎನ್.ಟಿ.ಆರ್ ಬಾಲ್ಯ, ಸಿನಿಮಾ, ರಾಜಕೀಯ ಮತ್ತು ವಿವಾದಗಳು ಹೀಗೆ ಎಲ್ಲವೂ ಈ ಚಿತ್ರದಲ್ಲಿ ಒಳಗೊಂಡಿರಲಿದೆ. ಎನ್.ಟಿ.ಆರ್ ಪಾತ್ರದಲ್ಲಿ ಅವರ ಮಗ ಬಾಲಕೃಷ್ಣ ಅವರೇ ಅಭಿನಯಿಸುತ್ತಿದ್ದು, ಈಗಾಗಲೇ ಸಿನಿಮಾ ಅದ್ಧೂರಿಯಾಗಿ ಆರಂಭವಾಗಿದೆ.

ಶ್ರೀದೇವಿ ಸ್ಥಾನ ತುಂಬಿದ ಮಾಧುರಿ ದೀಕ್ಷಿತ್

ತೇಜ್ ಎಂಬ ನಿರ್ದೇಶಕ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಡಾ ರಾಜ್ ಕುಮಾರ್ ಅವರ ಪಾತ್ರವೂ ಬರಲಿದೆ ಎನ್ನಲಾಗಿದೆ. ಆದ್ರೆ, ಅಣ್ಣಾವ್ರ ಪಾತ್ರದಲ್ಲಿ ಯಾರೂ ಬಣ್ಣ ಹಚ್ಚಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.

Deepika Padukone to play Sridevi in ntr biopic

ಇನ್ನುಳಿದಂತೆ ಎನ್.ಟಿ.ಆರ್ ಜೀವನ ಕುರಿತು ಇನ್ನು ಎರಡು ಸಿನಿಮಾಗಳು ಶುರುವಾಗುತ್ತಿದೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಎನ್.ಟಿ.ಆರ್ ಎರಡನೇ ಪತ್ನಿ ಪಾರ್ವತಿಯವರ ದೃಷ್ಠಿಕೋನದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅದರ ಜೊತೆಗೆ ನಿರ್ಮಾಪಕ ಕೆತಿ ರೆಡ್ಡಿ, ಜಗದೇಶ್ವರ್ ರೆಡ್ಡಿ ಅವರು ಕೂಡ ಎನ್.ಟಿ.ಆರ್ ಜೀವನ ಕುರಿತು ಬಯೋಪಿಕ್ ಮಾಡಲು ನಿರ್ಧರಿಸಿದ್ದಾರಂತೆ.

English summary
The N. T. Rama Rao biopic starring NTR’s son, Nandamuri Balakrishna, has been the talk of the town for a while now. While earlier reports stated that Vidya Balan and Paresh Rawal have been offered cameos in the film, now we hear that even Deepika Padukone has been approached for the same.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X