ಬಾಲಿವುಡ್‌ನಿಂದ '777 ಚಾರ್ಲಿ' ರಿಮೇಕ್‌ಗೆ ಬೇಡಿಕೆ?

ನಟ ರಕ್ಷಿತ್ ಅಭಿನಯದ '777 ಚಾರ್ಲಿ' ಸಿನಿಮಾ ರಿಲೀಸ್ ಜೂನ್ 10ರಂದು ತೆರೆಕಂಡಿದೆ. '777 ಚಾರ್ಲಿ' ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ವಿಭಿನ್ನವಾಗಿ ನಿಲ್ಲುತ್ತದೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲೂ ಉತ್ತಮ ಗಳಿಕೆ ಕಂಡಿದೆ.

ಕನ್ನಡದ ನಟ ರಕ್ಷಿತ್ ಶೆಟ್ಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದು. ಕನ್ನಡ ಸೇರಿದಂತೆ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ಕೂಡ ಸಿನಿಮಾ ರಿಲೀಸ್ ಆಗಿದೆ. ಪ್ರೇಕ್ಷಕರಿಂದ ಸಿನಿಮಾಗೆ ಉತ್ತಮ ಪ್ರಶಂಸೆ ಸಿಕ್ಕಿದೆ.

ಕನ್ನಡದ ಚಾರ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದರೂ, ಕೂಡ ಚಿತ್ರಕ್ಕೆ ರಿಮೇಕ್ ಬೇಡಿಕೆ ಬಂದಿದೆಯಂತೆ. ಅರೆ ಈ ಸಿನಿಮಾ ಬೇರೆ ಭಾಷೆಗಳಿಗೂ ಡಬ್ ಆಗಿದೆ. ಆದರೂ ರಿಮೇಕ್ ರೈಟ್ಸ್ ಯಾಕೆ ಎಂದುಕೊಂಡರೆ ಅದು ನಿಜ. ಆದರೂ ಕೂಡ ಚಾರ್ಲಿ ರಿಮೇಕ್ ಹಕ್ಕು ಪಡೆಯಲು ಮಾತುಕತೆ ಶುರುವಾಗಿದೆಯಂತೆ.

ಬಾಲಿವುಡ್‌ನಲ್ಲಿ '777 ಚಾರ್ಲಿ' ರಿಮೇಕ್?

ಬಾಲಿವುಡ್‌ನಲ್ಲಿ '777 ಚಾರ್ಲಿ' ರಿಮೇಕ್?

'777 ಚಾರ್ಲಿ' ಸಿನಿಮಾ ರಿಲೀಸ್ ಆಗಿ 3 ವಾರಗಳು ಕಳೆದಿವೆ. ವಿಶ್ವದಾದ್ಯಂತ ರಿಲೀಸ್ ಆದ ಈ ಸಿನಿಮಾ ಪ್ರೇಕ್ಷಕರನ್ನು ಭಾವನಾತ್ಮಕನಾಗಿ ಸೆಳೆದಿದೆ. ಹಿಂದಿಗೆ ಡಬ್ ಆಗಿ ರಿಲೀಸ್ ಆಗಿದೆ. ಆದರೂ ಕೂಡ ಈ ಸಿನಿಮಾದ ರಿಮೇಕ್ ಹಕ್ಕಿಗೆ ಬೇಡಿಕೆ ಬಂದಿದೆಯಂತೆ. ಹಿಂದಿಗೆ ಸಿನಿಮಾ ರಿಮೇಕ್ ಮಾಡಲು ಬೇಡಿಕೆ ಬಂದಿದೆಯಂತೆ. ಆದರೆ ಯಾರು ಚಾರ್ಲಿಗಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನುವುದನ್ನು ಚಿತ್ರತಂಡವೇ ಧೃಡಪಡಿಸಬೇಕಿದೆ.

17 ದಿನ ಪೂರೈಸಿದ '777 ಚಾರ್ಲಿ'!

17 ದಿನ ಪೂರೈಸಿದ '777 ಚಾರ್ಲಿ'!

ಚಾರ್ಲಿ ಸಿನಿಮಾ 17 ದಿನಗಳನ್ನೂ ಪೂರೈಸಿದೆ. ಬಾಕ್ಸಾಫೀಸ್‌ನಲ್ಲೂ ಕೂಡ ಮೊದಲ ದಿನದಿಂದ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ. ಇನ್ನು ಸಿನಿಮಾ 17 ದಿನಗಳನ್ನು ಪೂರೈಸುವ ನಿಟ್ಟಿನಲ್ಲಿ ಅಂದಾಜು 80 ಕೋಟಿ ರೂ. ಗಡಿಯನ್ನು ದಾಟಿದೆ ಎನ್ನಲಾಗಿದೆ. ಇನ್ನು 100 ಕೋಟಿ. ರೂ ಗಳಿಕೆಗೆ ಕೆಲವೇ ದಿನಗಳು ಬಾಕಿದೆ. ಇದರ ಜೊತೆಗೆ ಚಾರ್ಲಿಗೆ ರಿಮೇಕ್ ಬೇಡಿಯೂ ಬಂದಿದೆಯಂತೆ.

ಚಾರ್ಲಿ ಮೂಲಕ ರಕ್ಷಿತ್ ಶೆಟ್ಟಿ ದಾಖಲೆ!

ಚಾರ್ಲಿ ಮೂಲಕ ರಕ್ಷಿತ್ ಶೆಟ್ಟಿ ದಾಖಲೆ!

777 ಚಾರ್ಲಿ ಸಿನಿಮಾ ನಟ ರಕ್ಷಿತ್ ಶೆಟ್ಟಿಗೆ ಉತ್ತಮ ಗೆಲುವು ತಂದುಕೊಟ್ಟಿದೆ. ರಕ್ಷಿತ್ ಶೆಟ್ಟಿಯ ಕೆರಿಯರ್‌ನಲ್ಲಿ ಅತಿ ಹೆಚ್ಚು ಗ್ರಾಸ್ ಕಂಡ ಸಿನಿಮಾ ಇದು. ಜೊತೆಗೆ ಗಳಿಕೆಯಲ್ಲೂ ಈ ಸಿನಿಮಾದ ಮೂಲ ನಟ ರಕ್ಷಿತ್ ಶೆಟ್ಟಿ ದಾಖಲೆ ಮಾಡಿದ್ದಾರೆ. ಧರ್ಮ ಮತ್ತು ಚಾರ್ಲಿ ಜಂಜಾಟದ ಕಥೆ ತಮ್ಮದೇ ರೀತಿಯಲ್ಲಿ ಪ್ರೇಕ್ಷಕರನ್ನು ಸೆಳೆದಿದೆ. 100 ಕೋಟಿ ರೂ. ಮಾಡಿ ದಾಖಲೆ ಬರೆಯುವುದೊಂದೇ ಇನ್ನೂ ಬಾಕಿ ಇದೆ.

ರಕ್ಷಿತ್ ಕೈಯಲ್ಲಿ ಸಾಲು, ಸಾಲು ಸಿನಿಮಾ!

ರಕ್ಷಿತ್ ಕೈಯಲ್ಲಿ ಸಾಲು, ಸಾಲು ಸಿನಿಮಾ!

ನಟ ರಕ್ಷಿತ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ರಕ್ಷಿತ್ ಮುಂದಿನ ಸಿನಿಮಾ 'ಸಪ್ತ ಸಾಗರದಾಚೆ ಎಲ್ಲೋ'. ಈಗಾಗಲೇ ಈ ಚಿತ್ರದ ಶೂಟಿಂಗ್ ಕೂಡ ಬಹುತೇಕ ಮುಗಿದಿದೆ. ಇತ್ತೀಚೆಗೆ ರಿಲೀಸ್ ಆಗಿದ್ದ ರಕ್ಷಿತ್ ಲುಕ್ ಕೂಡ ಸಿಕ್ಕಾ ಪಟ್ಟೆ ವೈರಲ್ ಆಗಿತ್ತು. ಬಳಿಕ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟನಿ' ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

More from Filmibeat

English summary
Demand For 777 Charlie Hindi Remake Rights, Even Hindi Though Dubbed Version Released,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X