For Quick Alerts
  ALLOW NOTIFICATIONS  
  For Daily Alerts

  ಎಲ್ಲರೂ ಮೆಚ್ಚಿದ‘ದೇವೀರಿ’ಕಾಲೆಳೆದವರು ಯಾರ್ರಿ?

  By Staff
  |

  ಕವಿತಾ ಲಂಕೇಶರ ಚೊಚ್ಚಿಲ ಸಿನಿಮಾ ‘ಪನೋರಮಾ’ಕ್ಕೆ ಯಾಕೆ ಆಯ್ಕೆಯಾಗಿಲ್ಲ !? ಕನಿಷ್ಠ 13 ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿರುವ ‘ದೇವೀರಿ’ಗೆ ಪನೋರಮಾದಲ್ಲಿ ಪ್ರದರ್ಶನವಾಗುವ ಅರ್ಹತೆ ಇಲ್ಲವಾ? ಆದದ್ದಾದರೂ ಏನು ?

  ಇಂಥ ಪ್ರಶ್ನೆಗಳಿಗೆ ಉತ್ತರ ಹೇಳುವುದು ಸುಲಭವಲ್ಲ . ಶ್ರೇಷ್ಟತೆಗಿಂಥ ರಾಜಕಾರಣವೇ ಮೇಲುಗೈಯಾದ ಪನೋರಮಾ ಮಾನದಂಡದ ಬಗೆಗೆ ಆಕ್ಷೇಪಣೆಗಳು ಹೊಸತೂ ಅಲ್ಲ . ಪ್ರತಿ ಬಾರಿಯೂ ಅನೇಕ ಉತ್ತಮ ಚಿತ್ರಗಳಿಗೆ ಅನ್ಯಾಯವಾಗುವುದು, ಆ ಚಿತ್ರಗಳ ನಿರ್ದೇಶಕರು ಆಯ್ಕೆ ಮಂಡಳಿಯನ್ನು ಟೀಕಿಸುವುದು ಮಾಮೂಲೇ. ಈ ಪಾಲಿಗೆ ಹೊಸ ಸೇರ್ಪಡೆ ‘ದೇವೀರಿ’.

  ಪನೋರಮಾದ ಮಂದಿಯ ಅಭಿರುಚಿ ಈ ಮಟ್ಟಕ್ಕಿಳಿಯಿತೇ?

  ದೇವೀರಿಯನ್ನು ಮೊದಲ ಸುತ್ತಿನಲ್ಲೇ ಆಯ್ಕೆ ಸಮಿತಿ ತಳ್ಳಿ ಹಾಕಿತಂತೆ. ಆದರೆ, ಪನೋರಮಾದಲ್ಲಿದ್ದ ಕರ್ನಾಟಕದ ಸದಸ್ಯರು ಪಟ್ಟು ಹಿಡಿದು ಎರಡನೇ ಸುತ್ತಿಗೆ ದೇವೀರಿಯನ್ನು ಒಯ್ದರೂ ಪ್ರಯೋಜನವಾಗಲಿಲ್ಲ . ರಾಜಕೀಯ ಕಾರಣಗಳಿಗಾಗಿ ತೆಲುಗಿನ 2 ಚಿತ್ರಗಳು ಪನೋರಮಾಕ್ಕೆ ಆಯ್ಕೆಯಾದವು. ಈ ಕಾರಣದಿಂದಾಗಿ ಬಲಿಪಶುವಾಗಿದ್ದು ‘ದೇವೀರಿ’.

  ಬಹಿರಂಗವಾಗಿ ‘ದೇವೀರಿ’ಗಾದ ಅನ್ಯಾಯದ ಬಗೆಗೆ ಬಾಯಿ ಬಿಡಲು ಪನೋರಮಾ ಆಯ್ಕೆ ಸಮಿತಿಯಲ್ಲಿದ್ದ ಕರ್ನಾಟಕದ ಮಂದಿ ಹಿಂಜರಿಯುತ್ತಿದ್ದಾರೆ. ಇಷ್ಟಕ್ಕೂ ಚಿತ್ರಗಳನ್ನು ಅರ್ಹತೆಯ ಮೇಲೆ ಆಯ್ಕೆ ಮಾಡುವವರು ಆಯ್ಕೆ ಮಂಡಳಿಯಲ್ಲಿ ಯಾರಿದ್ದರು ಹೇಳಿ? ಇದ್ದ ಕೆಲವು ಸೂಕ್ಷ್ಮ ಮನಸ್ಸಿನ ಮಂದಿ ಮೂಲೆಗುಂಪಾದರು, ಅವರ ಮಾತಿಗೆ ಬೆಲೆಯೇ ಇರಲಿಲ್ಲ ಅನ್ನುವುದು ಅವರ ಕೊರಗು.

  ಎಳೆಯ ನಿರ್ದೇಶಕಿಯ ಬೆಂಬಲಕ್ಕೆ ಬಾರದ ಚಿತ್ರೋದ್ಯಮ

  ಈ ಬಾರಿ ಮುನ್ನುಡಿ, ಮತದಾನ, ಮುಸ್ಸಂಜೆ, ನೀಲಾ ಸೇರಿದಂತೆ ನಾಲ್ಕು ಕನ್ನಡ ಚಿತ್ರಗಳು ಪನೋರಮಾಕ್ಕೆ ಆಯ್ಕೆಯಾಗಿರುವ ಖುಷಿಯಲ್ಲಿರುವ ಚಿತ್ರೋದ್ಯಮ ‘ದೇವೀರಿ’ಗಾದ ಅನ್ಯಾಯವನ್ನು ತಣ್ಣಗೆ ನುಂಗಿಕೊಂಡಿದೆ, ನಿರ್ಲಕ್ಷಿಸಿದೆ.

  ಇಷ್ಟೊಂದು ಸಿನಿಮಾಗಳು ಪನೋರಮಾಕ್ಕೆ ಆಯ್ಕೆಯಾಗಿದ್ದು ಕನ್ನಡ ಚಿತ್ರ ಇತಿಹಾಸದಲ್ಲಿ ಇದೇ ಮೊದಲು. ಈ ಮುನ್ನ ಘಟಶ್ರಾದ್ಧ , ಗ್ರಹಣ ಹಾಗೂ ಸಾವಿತ್ರಿ ಚಿತ್ರಗಳು ಒಮ್ಮೆಗೇ ಪನೋರಮಾ ಪ್ರವೇಶಿಸುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದ ಸ್ಯಾಂಡಲ್‌ವುಡ್‌, ಇದೀಗ ಇನ್ನೂ ಒಂದು ಹೆಜ್ಜೆ ಮುಂದು ಹೋಗಿದೆ. ಇದರಿಂದಾಗಿ ಸಂಭ್ರಮ ಪಡುವುದು ಸರಿಯೇ. ಆದರೆ, ‘ದೇವೀರಿ’ಗಾದ ಅನ್ಯಾಯದ ಬಗ್ಗೆ ಬಾಯಿಮುಚ್ಚಿ ಕೂರುವುದು ಎಷ್ಟು ಸರಿ?‘ದೇವೀರಿ’ಗಾದ ಅನ್ಯಾಯವನ್ನು ಚಿತ್ರೋದ್ಯಮ ಗಟ್ಟಿ ಧ್ವನಿಯಲ್ಲಿ ಪ್ರತಿಭಟಿಸಿದ್ದರೆ, ನಿರಾಶೆಯ ಸುಳಿಯಲ್ಲಿರುವ ಕವಿತಾ ಲಂಕೇಶರ ತುಸು ಚೇತರಿಕೆಗೆ ತುಸು ಸಹಾಯವಾಗುತ್ತಿತ್ತು .

  ಕಾಣದ ಕೈಗಳ ಕೈವಾಡ ?
  ಮೊದಲ ಚಿತ್ರದಲ್ಲೇ ಅಪಾರ ಹೆಸರು- ಯಶಸ್ಸು ಸಾಧಿಸಿದ ಕವಿತಾ ಲಂಕೇಶರ ಬಗ್ಗೆ ಚಿತ್ರೋದ್ಯಮದ ಅನೇಕ ಹಿರಿಯರಿಗೆ- ಸ್ಥಾಪಿತ ಹಿತಾಸಕ್ತಿಗಳಿಗೆ ಅಸಮಾಧಾನ ಇರುವುದು ಗುಟ್ಟೇನಿಲ್ಲ . ಪನೋರಮಾ ಪ್ರಕರಣದ ಹಿಂದೆ ಈ ಕಾಣದ ಕೈಗಳ ಕೈವಾಡ ಇದ್ದರೂ ಅಚ್ಚರಿಯಿಲ್ಲ .

  ‘ನನಗೆ ನಿರಾಶೆಯಾಗಲೀ, ನೋವಾಗಲಿ ಆಗಿಲ್ಲ . ಆದರೆ, ಆಯ್ಕೆ ಸಮಿತಿಯ ಸದಸ್ಯರ ಮನಸ್ಥಿತಿಯ ಬಗ್ಗೆ ಪ್ರಶ್ನೆಗಳೆದ್ದಿವೆ’ ಎನ್ನುತ್ತಾರೆ ಕವಿತಾ. ಆದರೆ, ಈ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ . ಏಕೆಂದರೆ-
  ‘ಅಂತರರಾಷ್ಟ್ರೀಯ ಮಟ್ಟದಲ್ಲಿ ‘ದೇವೀರಿ’ಯನ್ನು ಎಂದೋ ಗುರ್ತಿಸಿಯಾಗಿದೆ, ಹೊಸದಾಗಿ ಗುರ್ತಿಸಬೇಕಾಗಿಲ್ಲ ’ ಎಂದು ಕವಿತಾ ಹೇಳುವ ಮಾತುಗಳಲ್ಲಿ ನ ಅರ್ಥವನ್ನ್ನೂ, ಗಾಢ ವಿಷಾದವನ್ನೂ ಅರ್ಥೈಸಿಕೊಳ್ಳುವ ಸೂಕ್ಷ್ಮತೆಯನ್ನು ಉಳಿಸಿಕೊಂಡವರ ಸಂಖ್ಯೆ ಕಡಿಮೆಯಿದೆ.

  what do you think about this story ?

  ಪನೋರಮಾದಲ್ಲಿ ಕಾಲೆಳೆಸಿಕೊಳ್ಳುವ ಮುನ್ನ ‘ದೇವೀರಿ’ದಾಪುಗಾಲ ಪಥ
  ಡ್ಯುಯವಿಲ್ಲೆ ಏಷ್ಯನ್‌ ಚಿತ್ರೋತ್ಸವ ಸ್ಪರ್ಧೆಗೆ ‘ದೇವೀರಿ’
  ಸಿಂಗಪೂರ್‌, ರೋಟರ್‌ ಡ್ಯಾಂ ಅಂ.ರಾ.ಚಿತ್ರೋತ್ಸವಕ್ಕೆ ದೇವೀರಿ
  ದೇವೀರಿಯ ‘ಪ್ರಥಮ’ ದಾಖಲೆಯ ಪರಾಕ್ರಮ
  ಪನೋರಮಾಕ್ಕೆ ಕನ್ನಡದ 4 ಚಿತ್ರಗಳು

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X