ಕೊನೆಗೂ 'ಡಾಲಿ' ಆಗ್ಬಿಟ್ರು ನಟ ಧನಂಜಯ್.!
'ಡಾಲಿ' ಎಂಬ ಕ್ರೂರ ಪಾತ್ರದ ಸೃಷ್ಟಿಕರ್ತ ನಿರ್ದೇಶಕ ದುನಿಯಾ ಸೂರಿ. ಸೂರಿ ಸಿನಿಮಾಗಳಲ್ಲಿ ಬರುವ ಬಹುತೇಕ ಪಾತ್ರಗಳು ಹೊಸ ಸಿನಿಮಾಗಳ ಶೀರ್ಷಿಕೆ ಆಗುತ್ತೆ ಅಥವಾ ಅದೇ ಹೆಸರಿನಲ್ಲಿ ಆ ನಟರು ಫೇಮಸ್ ಆಗ್ತಾರೆ.
ಡಾಲಿ ಪಾತ್ರದ ಮೂಲಕ ಹೊಸ ಇಮೇಜ್ ಗಿಟ್ಟಿಸಿಕೊಂಡ ಧನಂಜಯ್ ಈಗ ಅದೇ ಹೆಸರಿನಲ್ಲಿ ಸಿನಿಮಾ ಮಾಡ್ತಿದ್ದಾರೆ. ಹೌದು, ಧನಂಜಯ್ ಅಭಿನಯಿಸಿಲಿರುವ ಹೊಸ ಸಿನಿಮಾಗೆ ಡಾಲಿ ಎಂದು ಹೆಸರಿಡಲಾಗಿದೆಯಂತೆ.
ಶಿವರಾಜ್ ಕುಮಾರ್ ಅಭಿನಯಿಸಿದ್ದ ಟಗರು ಸಿನಿಮಾದಲ್ಲಿ ಧನಂಜಯ್ ಡಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ವಿಲನ್ ಕ್ಯಾರೆಕ್ಟರ್ ಆಗಿತ್ತು. ಈಗ ಅದೇ ರೀತಿ ಪಾತ್ರವನ್ನ ಸೃಷ್ಟಿಸಿ ಅದಕ್ಕೆ ಹೀರೋ ಇಮೇಜ್ ನೀಡಲಾಗಿದೆಯಂತೆ. ಅಂದ್ಹಾಗೆ, ಡಾಲಿ ಸಿನಿಮಾದಲ್ಲಿ ಧನಂಜಯ್ ಪಾತ್ರ ಎರಡು ಶೇಡ್ ನಲ್ಲಿದ್ದು, ಹೀರೋ ಮತ್ತು ವಿಲನ್ ರೂಪದಲ್ಲಿ ಮಿಂಚಲಿದ್ದಾರಂತೆ.

ಈ ಚಿತ್ರವನ್ನ 'ಗಣಪ' ಖ್ಯಾತಿಯ ಪ್ರಭು ಶ್ರೀನಿವಾಸ್ ನಿರ್ದೇಶನ ಮಾಡಲಿದ್ದು, ಎರಡನೇ ಸಲ ನಿರ್ಮಾಪಕ ಯೋಗೇಶ್ ನಾರಾಯಣ್ ನಿರ್ಮಿಸಲಿದ್ದಾರಂತೆ. ಸದ್ಯ, ಅಧಿಕೃತವಾಗಿ ಇದನ್ನ ಪ್ರಕಟ ಮಾಡಿಲ್ಲ.
ಸದ್ಯದ ಮಾಹಿತಿ ಪ್ರಕಾರ ಫೆಬ್ರವರಿ 12 ರಂದು ಈ ಸಿನಿಮಾ ಅನೌನ್ಸ್ ಮಾಡಲಿದ್ದು, ಚಿತ್ರೀಕರಣ ಲೇಟ್ ಆಗಲಿದೆಯಂತೆ. ಯಾಕಂದ್ರೆ, ಧನಂಜಯ್ ಸದ್ಯ ದುನಿಯಾ ಸೂರಿ ನಿರ್ದೇಶನಕ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಡಾಲಿ ಆರಂಭವಾಗಬಹುದು.


Click it and Unblock the Notifications











