ಎದೆಯೆತ್ತರಕ್ಕೆ ಬೆಳೆದ ಮಕ್ಕಳ ಎದುರು ಧನುಷ್ 2ನೇ ಮದುವೆ?ಪ್ರೇಮಿಗಳ ದಿನ ಮೃಣಾಲ್ ಜೊತೆ ರಜಿನಿ ಮಾಜಿ ಅಳಿಯನ ಕಲ್ಯಾಣ?

ಹೇಳಿ ಕೇಳಿ ಇದು ಬಣ್ಣದ ಲೋಕ. ಇಲ್ಲಿ ದಿನಕ್ಕೊಂದು ಸುದ್ದಿಗಳು ಹರಿದಾಡುತ್ತವೆ. ಹೀಗೆ ಹರಿದಾಡುವ ಸುದ್ದಿಗಳಲ್ಲಿ ಕೆಲವು ಸತ್ಯ ಆಗಿದ್ದರೆ ಇನ್ನು ಕೆಲವು ಮಿಥ್ಯ ಆಗಿರುತ್ತವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಚಿತ್ರರಂಗದ ಧ್ರುವತಾರೆಯರ...

ಬದುಕಿನಲ್ಲಿ ಬ್ರೇಕಪ್ಪು.. ಲವ್ವು.. ಡವ್ವು.. ಕಡಿಮೆ ಇಲ್ಲ. ಒಬ್ಬರ ನಂತರ ಒಬ್ಬರನ್ನು ಮದುವೆಯಾಗುವುದು ಆ ನಂತರ ಅವರಿಗೂ ಕೂಡ ಗುಡ್ ಬೈ ಹೇಳಿ ಹೊರನಡೆಯುವುದು ಹೊಸದೇನೂ ಅಲ್ಲ. ಇಲ್ಲಿ ಹಲವರಿಗೆ ಎಲ್ಲವೂ ಬಟ್ಟೆ ಬದಲಿಸಿದಷ್ಟೇ ಸುಲಭ. ಹೀಗಾಗಿ ಇವರ ವ್ಯೆಯಕ್ತಿಕ ಬದುಕಿನ ಮೇಲೆ ಹಲವರ ಕಣ್ಣಿರುತ್ತೆ. ಇವರ ಸೋಶಿಯಲ್ ಮೀಡಿಯಾ ಮೇಲೆ ಒಂದು ವರ್ಗ ನಿಗಾ ವಹಿಸಿರುತ್ತೆ. ಇದಕ್ಕೆ ಇನ್ನೊಂದು ಉದಾಹರಣೆಯೇ ಧನುಷ್ ಮತ್ತು ಮೃಣಾಲ್ ಠಾಕೂರ್ ಅವರ ಮದುವೆ ಸುದ್ದಿ.

Dhanush and Mrunal Thakur s Valentine s Day Wedding Viral Rumor or Secret Reality Here s the Truth

ಹೌದು, ಜನಸಾಮಾನ್ಯರನ್ನು ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮೊದಲಿಂದ ಮಾಡಿಕೊಂಡು ಬಂದ ಧನುಷ್ ಸದ್ಯ ಸಿಂಗಲ್ ಆಗಿರುವುದು ಎಲ್ಲರಿಗೆ ಗೊತ್ತೇ ಇದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಮಗಳು ಐಶ್ವರ್ಯ ಜೊತೆ 2022ರಲ್ಲಿಯೇ ಸಂಬಂಧ ಕಡಿದುಕೊಂಡ ಧನುಷ್ ಎರಡು ವರ್ಷದ ಹಿಂದೆ ವಿಚ್ಛೇದನ ಪಡೆದರು. ಈ ಮೂಲಕ 20 ವರ್ಷದ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟರು.

ಇಂಥಾ ಧನುಷ್ ''ಸೀತಾರಾಮ''ನ ಸಖಿ ''ಮೃಣಾಲ್ ಠಾಕೂರ್'' ಹಿಂದೆ ಬಿದ್ದಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಇಬ್ಬರ ನಡೆ ಕೂಡ ಹಾಗೇ ಇದೆ. ನೀನೆಲ್ಲೋ.. ನಾನಲ್ಲೇ.. ಎಂಬಂತೆ ಇಬ್ಬರು ಜೊತೆಯಲ್ಲಿ ಓಡಾಡುತ್ತಿದ್ದಾರೆ. ಹಲವು ಬಾರಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದಾರೆ.

ಹೌದು, ಅಸಲಿಗೆ ಕಳೆದ ವರ್ಷ ಮೃಣಾಲ್ ಠಾಕೂರ್ ಹಿಂದಿ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರದ ಹೆಸರು ''ಸನ್ ಆಫ್ ಸರ್ದಾರ್ 2''. ಅಜಯ್ ದೇವಗನ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಧನುಷ್ ಚೆನ್ನೈದಿಂದ ಮುಂಬೈವರೆಗೆ ಪ್ರಯಾಣ ಬೆಳೆಸಿದ್ದರು.

ಮತ್ತೊಂದು ಕಡೆ ಧನುಷ್ ಅಭಿನಯದ ''ತೇರೆ ಇಷ್ಕ್ ಮೇ'' ಚಿತ್ರದ ಚಿತ್ರೀಕರಣ ಮುಕ್ತಾಯವಾದಾಗ ಧನುಷ್ ಜೊತೆ ಸೇರಿ ಮೃ‍ಣಾಲ್ ಠಾಕೂರ್ ಸಂಭ್ರಮಿಸಿದ್ದರು. ಇದು ಸಾಲದು ಎಂಬಂತೆ ಧನುಷ್ ಅವರ ಸಹೋದರಿಯರಾದ ಡಾ.ಕಾರ್ತಿಕಾ ಕಾರ್ತಿಕ್ ಮತ್ತು ವಿಮಲಾ ಗೀತಾ ಅವರನ್ನು ಮೃ‍ಣಾಲ್ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹಿಂಬಾಲಿಸುತ್ತಿದ್ದಾರೆ. ಧನುಷ್ ಸಹೋದರಿಯರು ಕೂಡ ಮೃಣಾಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಇನ್ನು ಧನುಷ್ ಇತ್ತೀಚೆಗೆ ಮೃಣಾಲ್ ಅವರ ಚಿತ್ರದ ಟೀಸರ್‌ಗೆ ''Looks and sounds good" ಎಂದು ಕಾಮೆಂಟ್ ಮಾಡಿದ್ದರು. ಇದಕ್ಕೆ ಮೃಣಾಲ್ ಸೂರ್ಯಕಾಂತಿ ಮತ್ತು ಹಾರ್ಟ್‌ನ ಎಮೋಜಿ ಹಾಕಿ ರಿಪ್ಲೈ ಮಾಡಿದ್ದರು. ಇಬ್ಬರ ಈ ಎಲ್ಲ ವರ್ತನೆಗಳಿಂದ ಹಲವರು ಇಬ್ಬರ ನಡುವೆ ಸ್ನೇಹಕ್ಕೂ ಮೀರಿದ ಸಂಬಂಧ ಇದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು.

ನಿಜಾ. ಈ ಹಿಂದೆ ತಮ್ಮ ಮತ್ತು ಧನುಷ್ ಕುರಿತು ಸುದ್ದಿ ಹಬ್ಬಿದಾಗ ಮೃಣಾಲ್ ನಾವು ಇಬ್ಬರು ಕೇವಲ ಸ್ನೇಹಿತರಷ್ಟೇ ಎಂದು ಹೇಳಿದ್ದರು. ತಮ್ಮ ಕುರಿತು ಹಬ್ಬಿರುವ ಸುದ್ದಿಯನ್ನು ಕೇಳಿ ನಕ್ಕಿದ್ದರು. ಆದರೂ ಕೂಡ ಬಹುತೇಕರಿಗೆ ಸಮಾಧಾನವಾದಂತೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಮೃಣಾಲ್ ಮತ್ತು ಧನುಷ್ ಇದೇ ಫೆಬ್ರವರಿ 14ಕ್ಕೆ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸದ್ಯ ಹಬ್ಬಿದೆ. ಪ್ರೇಮಿಗಳ ದಿನದಂದು ತನಗಿಂತ 9 ವರ್ಷ ದೊಡ್ಡವರಾದ ಧನುಷ್ ಅವರ ಜೊತೆ ಮೃಣಾಲ್ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಗುಲ್ಲಾಗಿದೆ.

''ಡೆಕ್ಕನ್ ಹೆರಾಲ್ಡ್'' ಈ ವಿಚಾರಕ್ಕೆ ಸಂಬಂಧಿಸಿದಂತೆ ಧನುಷ್ ಅವರ ಆಪ್ತ ವಲಯದ ಪ್ರತಿಕ್ರಿಯೆಯನ್ನು ಪಡೆದಿದ್ದು ಆ ಪ್ರಕಾರ ಮೃಣಾಲ್ ಠಾಕೂರ್ ಜೊತೆ ಧನುಷ್ ಮದುವೆಯಾಗುತ್ತಿಲ್ಲ ಎಂದು ಧನುಷ್ ಅವರ ಆಪ್ತ ವಲಯ ಹೇಳಿದೆ. ಆನ್‌ಲೈನ್‌ನಲ್ಲಿ ಹರಡಿರುವ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಯಾರು ಈ ಸುದ್ದಿಯನ್ನು ನಂಬಬೇಡಿ ಎಂದು ಮನವಿಯನ್ನು ಮಾಡಿದೆ. ನಿಜಕ್ಕೂ ಧನುಷ್ ಮತ್ತು ಮೃಣಾಲ್ ಠಾಕೂರ್ ಸದ್ದಿಲ್ಲದೇ ಮದುವೆಯಾಗುತ್ತಾರಾ.. ? ಸ್ಪಷ್ಟವಾದ ಉತ್ತರ ಫೆಬ್ರವರಿ 14ಕ್ಕೆ ಸಿಗಲಿದೆ.

More from Filmibeat

English summary
Dhanush and Mrunal Thakur getting married on February 14th? We separate fact from fiction regarding the viral wedding rumors taking the internet by storm. See what the stars and their teams have said about the shocking headlines.
Read more about: dhanush mrunal thakur rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X