ಹಿಟ್ ಮೇಲೆ ಹಿಟ್ ಕೊಟ್ಟ ಧನುಶ್ ಸಂಭಾವನೆ ಭಾರಿ ಏರಿಕೆ

ಧನುಶ್ ಅಭಿನಯದ 'ಜಗಮೆ ತಂಧಿರಮ್' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಅದಕ್ಕೂ ಮುಂಚೆ ರಿಲೀಸ್ ಆಗಿದ್ದ 'ಕರ್ಣನ್' ಸಿನಿಮಾಗೆ ಅದ್ಭುತ ಗೆಲುವು ಸಿಕ್ಕಿತ್ತು. ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ಜೊತೆ ನಟಿಸಿರುವ 'ಅಟ್ರಂತಿ ರೇ' ರಿಲೀಸ್‌ಗೆ ಸಿದ್ದವಿದೆ. ಇಂಗ್ಲಿಷ್ ಚಿತ್ರವೊಂದರಲ್ಲಿಯೂ ಧನುಶ್ ನಟಿಸುತ್ತಿದ್ದಾರೆ.

Recommended Video

Dhanush ಅವರ ಸಂಭಾವನೆ ಈಗ ಎಷ್ಟು ಗೋತ್ತಾ | Filmibeat Kannada

ಹಿಟ್ ಮೇಲೆ ಹಿಟ್ ಕೊಡುತ್ತಿರುವ ಧನುಶ್ ಸತತವಾಗಿ ಹೊಸ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಾ ಸಾಗುತ್ತಿದ್ದಾರೆ. ಈಗ ತೆಲುಗಿನ ಸ್ಟಾರ್ ನಿರ್ದೇಶಕ ಶೇಖರ್ ಕಮ್ಮುಲ ಜೊತೆ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕಾಗಿ ಧನುಶ್ ತಮ್ಮ ಸಂಭಾವನೆಯನ್ನು ಡಬಲ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಿನಿಮಾನಗರದಲ್ಲಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ, ಧನುಶ್ ಪಡೆಯುವ ಸಂಭಾವನೆ ಎಷ್ಟು? ಹೊಸ ಚಿತ್ರಕ್ಕಾಗಿ ಬೇಡಿಕೆಯಿಟ್ಟಿರುವ ಮೊತ್ತ ಎಷ್ಟು? ಮುಂದೆ ಓದಿ....

ತ್ರಿಭಾಷೆಯಲ್ಲಿ ಹೊಸ ಸಿನಿಮಾ

ತ್ರಿಭಾಷೆಯಲ್ಲಿ ಹೊಸ ಸಿನಿಮಾ

ಫಿದಾ ಖ್ಯಾತಿಯ ನಿರ್ದೇಶಕ ಶೇಖರ್ ಕಮ್ಮುಲ ಜೊತೆ ಧನುಶ್ ಹೊಸ ಸಿನಿಮಾ ಆರಂಭಿಸಿದ್ದು, ಈ ಸಿನಿಮಾ ಮೂರು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ತೆರೆಗೆ ತರಲು ನಿರ್ಧರಿಸಲಾಗಿದೆ. ಶೇಖರ್ ಕಮ್ಮುಲ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಖುದ್ದು ಧನುಶ್ ಟ್ವೀಟ್ ಮಾಡಿದ್ದರು.

ಡಬಲ್ ಸಂಭಾವನೆ?

ಡಬಲ್ ಸಂಭಾವನೆ?

ಶೇಖರ್ ಕಮ್ಮುಲ ಜೊತೆಗಿನ ತ್ರಿಭಾಷಾ ಪ್ರಾಜೆಕ್ಟ್‌ಗಾಗಿ ಧನುಶ್ ಡಬಲ್ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡಿದೆ. ಸಾಮಾನ್ಯವಾಗಿ ಸಿನಿಮಾವೊಂದಕ್ಕೆ ಪಡೆಯುವ ಸಂಭಾವನೆಗಿಂತ ಹೆಚ್ಚು ಹಣವನ್ನು ಈ ಚಿತ್ರಕ್ಕೆ ಕೇಳಿದ್ದಾರಂತೆ. ವರದಿಗಳು ಪ್ರಕಾರ ತ್ರಿಭಾಷಾ ಚಿತ್ರಕ್ಕೆ ಧನುಶ್ 30 ಕೋಟಿ ಪಡೆಯಲಿದ್ದಾರೆ ಎಂಬ ಸುದ್ದಿ ಇದೆ.

ಧನುಶ್ ಸಂಭಾವನೆ ಎಷ್ಟಿದೆ?

ಧನುಶ್ ಸಂಭಾವನೆ ಎಷ್ಟಿದೆ?

ಕೊನೆಯದಾಗಿ ರಿಲೀಸ್ ಆಗಿರುವ 'ಜಗಮೇ ತಂಥೀರಮ್' ಚಿತ್ರಕ್ಕಾಗಿ ನಟ ಧನುಶ್ 15 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ. ಈ ಚಿತ್ರ 17 ಭಾಷೆ ಹಾಗೂ 190ಕ್ಕೂ ಅಧಿಕ ದೇಶಗಳಲ್ಲಿ ವೀಕ್ಷಣೆ ಕಂಡಿದೆ. ಈ ಹಿಂದಿನ ಸಿನಿಮಾಗಳಿಗೆ 10-15 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಸಾಯಿ ಪಲ್ಲವಿ ನಾಯಕಿ?

ಸಾಯಿ ಪಲ್ಲವಿ ನಾಯಕಿ?

ಮೂರು ಭಾಷೆಯಲ್ಲಿ ತಯಾರಾಗಲಿರುವ ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತವಾಗಿ ಪ್ರಕಟವಾಗಿಲ್ಲ. ಶೇಖರ್ ಕಮ್ಮುಲ ಪ್ರಸ್ತುತ, ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸಿರುವ 'ಲವ್ ಸ್ಟೋರಿ' ಸಿನಿಮಾ ನಿರ್ದೇಶಿಸಿದ್ದಾರೆ. ಈ ಚಿತ್ರ ಬಿಡುಗಡೆಯಾಗಬೇಕಿದೆ.

More from Filmibeat

English summary
Tamil actor Dhanush join hands with Telugu star director Sekhar kammula for next. according to latest buzz, Dhanush charges double remuneration for This project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X