ಹಾಲಿವುಡ್‌ 'ದಿ ಗ್ರೇ ಮ್ಯಾನ್'ನಲ್ಲಿ ಧನುಷ್ ಜೂನಿಯರ್ ಆರ್ಟಿಸ್ಟ್ ಪಾತ್ರ?

ತಮಿಳು ನಟ ಧನುಶ್ ಅದ್ಭುತ ಕಲಾವಿದ ಎನ್ನುವುದನ್ನು ಪದೆ, ಪದೇ ಸಾಬೀತು ಮಾಡುತ್ತಲಿರುತ್ತಾರೆ. ಧನುಷ್ ಅದ್ಬುತ ಪ್ರತಿಭಾವಂತ ಕೂಡ. ಯಾವುದೇ ರೀತಿಯ ಪಾತ್ರ ಅದರೂ ಸರಿ, ನಟ ಧನುಷ್ ತಮ್ಮ ಅಭಿನಯದ ಮೂಲಕವೇ ಗಮನ ಸೆಳೆಯುತ್ತಾರೆ.

ಮಾಸ್ ಮತ್ತು ಕ್ಲಾಸ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಧನುಷ್, ಇತ್ತೀಚೇಗೆ ಹಾಲಿವುಡ್‌ನಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಮೊದಲು ಇಂಗ್ಲೀಷ್ ಸಿನಿಮಾ ಒಂದರಲ್ಲಿ ಕಾಣಿಸಿಕೊಂಡಿದ್ದ, ಧನುಷ್ ಈಗ ಪಕ್ಕಾ ಹಾಲಿವುಡ್ ಸಿನಿಮಾ 'ದಿ ಗ್ರೇ ಮ್ಯಾನ್' ಚಿತ್ರದಲ್ಲಿ ನಟಿಸಿದ್ದಾರೆ.

ಹಾಲಿವುಡ್ ಚಿತ್ರದಿಂದ ನಮ್ಮ ಹೀರೋಗೆ ಬೇಡಿಕೆ ಬಂದಿದೆ ಎಂದು ಧನುಷ್ ಅಭಿಮಾನಿಗಳು ಖುಷಿಯಾಗಿದ್ದರು. ಆದರೆ ಧನುಷ್ ಈ ಹಾಲಿವುಡ್ ಸಿನಿಮಾ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಅವರ ಪಾತ್ರ ನೋಡಿದ ಫ್ಯಾನ್‌ ಇದು ಧನಷ್‌ಗಾಗಿ ಅಲ್ಲ ಎನ್ನುತ್ತಿದ್ದಾರೆ.

ಧನುಷ್ 'ದಿ ಗ್ರೇ ಮ್ಯಾನ್' ರಿಲೀಸ್!

ಧನುಷ್ 'ದಿ ಗ್ರೇ ಮ್ಯಾನ್' ರಿಲೀಸ್!

ಧನುಷ್ ಹಾಲಿವುಡ್‌ನ ಆಕ್ಷನ್, ಥ್ರಿಲ್ಲರ್ 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಅದೇ ಹೆಸರಿನ ಕಾದಂಬರಿ ಆಧರಿತ ಸಿನಿಮಾ ಆಗಿದ್ದು, ಸಿಐಎ ಏಜೆಂಟ್ ಹಾಗೂ ಭಿನ್ನ ಮನಸ್ಥಿತಿಯ ಅಪರಾಧಿಯ ನಡುವಿನ ಮಾರಾ-ಮಾರಿಯ ಕಥೆ. 'ದಿ ಗ್ರೇ ಮ್ಯಾನ್' ಸಿನಿಮಾ ನೆಟ್‌ಫ್ಲಿಕ್‌ನಲ್ಲಿ ರಿಲೀಸ್ ಆಗಿದೆ. ಧನುಷ್ ಪಾತ್ರ ನೋಡಿ ಫ್ಯಾನ್ಸ್ ನಿರಾಶರಾಗಿದ್ದಾರೆ.

ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಧನುಷ್!

ಜೂನಿಯರ್ ಆರ್ಟಿಸ್ಟ್ ಪಾತ್ರದಲ್ಲಿ ಧನುಷ್!

ನಟ ಧನುಷ್ 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಹಾಲಿವುಡ್ ಸಿನಿಮಾ ಆದ ಕಾರಣ, ಸಾಕಷ್ಟು ನಿರೀಕ್ಷೆ ಇತ್ತು. ಅದರಲ್ಲೂ ಧನುಷ್ ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಹಾಗಾಗಿ ಹಾಲಿವುಡ್‌ ಚಿತ್ರದಲ್ಲಿ ಅಬ್ಬರಿಸುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅದು ಸುಳ್ಳಾಗಿದೆ. ಯಾಕೆಂದರೆ 'ದಿ ಗ್ರೇ ಮ್ಯಾನ್' ಚಿತ್ರದಲ್ಲಿ ಧನುಷ್ ಮಾತ್ರ ತುಂಬಾನೆ ಚಿಕ್ಕದಾಗಿದೆ. ಮತ್ತು ಅವರ ಪಾತ್ರಕ್ಕೆ ಯಾವುದೇ ಪ್ರಾಮುಖ್ಯತೆ ಇಲ್ಲ, ಸರಿಯಾದ ಡೈಲಾಗ್ಸ್ ಕೂಡ ಇಲ್ಲ. ಹಾಗಾಗಿ ಅಭಿಮಾನಿಗಳು ಇದು ಜೂನಿಯರ್ ಆರ್ಟಿಸ್ಟ್ ಪಾತ್ರದ ಹಾಗಿದೆ ಎನ್ನುತ್ತಿದ್ದಾರೆ.

ಧನುಷ್ ಪಾತ್ರವೇನು!

ಧನುಷ್ ಪಾತ್ರವೇನು!

ಇನ್ನು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟ ರ್ಯಾನ್ ಗೋಸ್ಲಿಂಗ್ 'ಸಿಕ್ಸ್' ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕನನ್ನು ಕೊಲ್ಲಲ್ಲು ಬರುವ ತಮಿಳು ಮೂಲಕ ಹಂತಕನಾಗಿ ಧನುಷ್ ಕಾಣಿಸಿಕೊಂಡಿದ್ದಾರೆ. ಆದರೆ 5 ನಿಮಿಷಕ್ಕಿಂತಲೂ ಮೊದಲೇ ಅವರ ಪಾತ್ರ ಮುಗಿದು ಹೋಗುತ್ತದೆ. ಈ ಪುಟ್ಟ ಪಾತ್ರದಲ್ಲಿ ಧನುಷ್ ಅಭಿನಯ ಕಾಣುವುದೇ ಇಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.

ಹಾಲಿವುಡ್ ಹೆಸರಿಗಷ್ಟೇ ಸಿನಿಮಾ ಮಾಡಿದರೆ!

ಹಾಲಿವುಡ್ ಹೆಸರಿಗಷ್ಟೇ ಸಿನಿಮಾ ಮಾಡಿದರೆ!

ಇನ್ನು ಈ ಸಿನಿಮಾ ನೋಡಿದ ಬಳಿಕ, ಹಲವರು ನಟ ಧನುಷ್ ಇಂತಹ ಪಾತ್ರವನ್ನು ಹೇಗೆ ಒಪ್ಪಿಕೊಂಡೊಂಡರು ಎಂದು ಪ್ರಶ್ನಿಸುತ್ತಿದ್ದಾರೆ. ಕೇವಲ ಹಾಲಿವುಡ್‌ ಸಿನಿಮಾದಲ್ಲಿ ನಟಿಸಿದ್ದಾರೆ ಎನಿಸಿಕೊಳ್ಳಲು ಮಾತ್ರವೇ ಈ ಸಿನಿಮಾ ಒಪ್ಪಿದೇ ಅಥವಾ ಹೆಚ್ಚಿನ ಸಂಭಾವನೆಯ ಕಾರಣಕ್ಕೆ ಈ ಸಿನಿಮಾದಲ್ಲಿ ನಟಿಸಿದರಾ ಎನ್ನುವ ಚರ್ಚೆಗಳು ಹುಟ್ಟಿಕೊಂಡಿವೆ. ಇಡೀ ಸಿನಿಮಾ ಆ್ಯಕ್ಷನ್‌ನಿಂದ ಕೂಡಿದ್ದು. 'ದಿ ಗ್ರೇ ಮ್ಯಾನ್' ಸಿನಿಮಾದಲ್ಲಿ ರ್ಯಾನ್ ಗೋಸ್ಲಿಂಗ್, ಕ್ರಿಸ್ ಇವಾನ್ಸ್ ಅಬ್ಬರಿಸಿದ್ದಾರೆ.

More from Filmibeat

English summary
Dhanush Fans Disappointed With His Hollywood Movie, Dhanush Treated As Junior Artist
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X