ವಿಗ್ ಮೆಂಟೇನ್ ಮಾಡುವ ಸಮಸ್ಯೆ? ಜೈಲಿನಲ್ಲಿ ತಲೆ ಬೋಳಿಸಿಕೊಂಡ್ರಾ ನಟ ದರ್ಶನ್?

By ಫಿಲ್ಮಿಬೀಟ್ ಡೆಸ್ಕ್

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ 24 ದಿನ ಕಳೆದಿದೆ. ಜುಲೈ 18ರವರೆಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ. ಇನ್ನು ಜೈಲಿನ ಊಟ ಸೇರಿದೆ, ತೂಕ ಕಳೆದುಕೊಂಡು ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಇದೀಗ ನಟ ದರ್ಶನ್ ಧರಿಸಿದ್ದ ವಿಗ್ ತೆಗೆದು ತಲೆ ಬೋಳಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಜೈಲಿನ ಊಟ ಸೇರದೇ ನಿದ್ದೆ ಬಾರದೇ ಚಿಂತೆಯಲ್ಲೇ ಮುಳುಗಿರುವ ದರ್ಶನ್ ದೇಹದ ತೂಕ ಇಳಿದಿದೆ, ಊಟ ಜೀರ್ಣವಾಗದೇ ವಾಂತಿ, ಭೇದಿ ಆಗಿತ್ತು ಎಂದು ಜೈನಿನ ವೈದ್ಯರು ವರದಿ ನೀಡಿದ್ದರು. ಇದನ್ನು ಆಧರಿಸಿ ನಟ ದರ್ಶನ್ ತಮ್ಮ ವಕೀಲರ ಮೂಲಕ ಮನೆ ಊಟ, ಓದಲು ಪುಸ್ತಕ, ಹಾಸಿಗೆ ಕೇಳಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಜುಲೈ 10ರಂದು ನ್ಯಾ ಎಸ್ ಆರ್ ಕೃಷ್ಣಕಮಾರ್ ಪೀಠ ರಿಟ್ ಅರ್ಜಿ ವಿಚಾರಣೆ ನಡೆಸಿತು. ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದೆ.

Did actor Darshan his head shave in parappana agrahara jail

ಹೊರಗೆ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್ ಜೈಲಿನಲ್ಲಿ ಸಾಮಾನ್ಯ ಖೈದಿಯಾಗಿ 4 ಗೋಡೆಗಳ ನಡುವೆ ಕಾಲ ಕಳೆಯುವಂತಾಗಿದೆ. ನಟ ದರ್ಶನ್ ತಮ್ಮ ಹೈಟ್, ಹುರಿಗಟ್ಟಿದ ದೇಹ, ಖಡಕ್ ಲುಕ್‌ನಿಂದ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು. ಇನ್ನು ಬಹಳ ಹಿಂದೆಯೇ ದರ್ಶನ್ ತಲೆ ಕೂದಲು ಸಾಕಷ್ಟು ಉದುರಿದ್ದ ಕಾರಣ ಇತ್ತೀಚೆಗೆ ವಿಗ ಧರಿಸುತ್ತಿದ್ದರು. ಸದ್ಯ ಜೈಲಿನಲ್ಲಿ ಅದನ್ನು ಮೆಂಟೇನ್ ಮಾಡುವುದು ಕಷ್ಟವಾಗುತ್ತಿತ್ತು. ಹಾಗಾಗಿ ತಲೆ ಕೂದಲನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಷ್ಟು ಸುಲಭವಾಗಿ ಜೈಲಿನಲ್ಲಿ ವಿಗ್ ಮೆಂಟೇನ್ ಮಾಡೋದು ಕಷ್ಟ, ಅದಕ್ಕೆ ಅವಕಾಶವೂ ಸಿಗಲ್ಲ. ಹಾಗಾಗಿ ಕೂದಲು ತೆಗೆಸುವುದೇ ಉತ್ತಮ ಎಂದು ದರ್ಶನ್ ನಿರ್ಧರಿಸಿದಂತೆ ಕಾಣಿಸುತ್ತದೆ. ತಲೆ ಬೊಳಿಸಿಕೊಂಡಿರುವುದರಿಂದ ಸದ್ಯಕ್ಕೆ ವಿಗ್ ಮೆಂಟೇನ್ ಮಾಡುವ ಸಮಸ್ಯೆ ಇಲ್ಲ ಎನ್ನಲಾಗುತ್ತಿದೆ. ಮತ್ತೊಂದು ಕಡೆ ದರ್ಶನ್ ನಟನೆಯ 'ಶಾಸ್ತ್ರಿ' ಸಿನಿಮಾ ರೀ-ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

ರೇಣುಕಾಸ್ವಾಮಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ದರ್ಶನ್ ಹಾಗೂ ಗ್ಯಾಂಗ್ ಆತನನ್ನು ಅಪಹರಿಸಿ ಕೊಲೆ ಮಾಡಿದ ಆರೋಪವಿದೆ. ಪ್ರಕರಣ ಸಂಬಂಧ ಜೂನ್ 11ರಂದು ಪೊಲೀಸರು ದರ್ಶನ್ ವಶಕ್ಕೆ ಪಡೆದಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಕರೆತಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿತ್ತು. ಬಳಿಕ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

Did actor Darshan his head shave in parappana agrahara jail

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಈಗಾಗಲೇ ಸಿನಿಮಾ ತಾರೆಯರು ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ದರ್ಶನ್ ಪರ ನಿಂತಿದ್ದಾರೆ. ಇನ್ನು ಕೆಲವರು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎಂದು ಹೇಳುತ್ತಿದ್ದಾರೆ. ಅಭಿಮಾನಿಗಳು ಆದಷ್ಟು ಬೇಗ ತಮ್ಮ ನೆಚ್ಚಿನ ನಟ ಸಂಕಷ್ಟದಿಂದ ಪಾರಾಗಿ ಹೊರಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಇನ್ನು ದರ್ಶನ್ ನಂಬಿ ಹಣ ಹೂಡಿರುವ ನಿರ್ಮಾಪಕರು ಪ್ರಕರಣದ ತೀರ್ಪು ಏನು ಬರುತ್ತದೆ? ಎಂದು ತಲೆ ಕೆಡಿಸಿಕೊಂಡಿದ್ದಾರೆ.

ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಚಿತ್ರೀಕರಣ ಆರಂಭದಲ್ಲೇ ನಿಂತಿದೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಪ್ರಯತ್ನಗಳು ನಡೀತಿತ್ತು. ಆದಷ್ಟು ಬೇಗ ದರ್ಶನ್ ಜೈಲಿನಿಂದ ಹೊರಬಂದು ಸಿನಿಮಾ ಮುಗಿಸುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

More from Filmibeat

English summary
Actor Darshan shave his head in jail because difficulty in maintaining wig?
Read more about: darshan sandalwood case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X