ಲಂಡನ್‌ನಲ್ಲಿ ಬಾಡಿಗೆಗೆ ಪಡೆದಿದ್ದ ಬಂಗಲೆಯನ್ನೇ ಖರೀದಿಸಿದ್ರಾ ಪ್ರಭಾಸ್?

ನಿರ್ಮಾಪಕರು ನಟ ಪ್ರಭಾಸ್ ನಂಬಿ ಬರೋಬ್ಬರಿ 1000 ಕೋಟಿ ರೂ. ಸುರಿದಿದ್ದಾರೆ. ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. 'ಕಲ್ಕಿ 2898AD' ಚಿತ್ರದ ಬಜೆಟ್ 500 ಕೋಟಿ ರೂ. ದಾಟಿದೆ. ಇನ್ನು 'ಸಲಾರ್-2', 'ರಾಜಾ ಸಾಬ್', 'ಸ್ಪಿರಿಟ್' ಹೀಗೆ ದೊಡ್ಡ ಸಿನಿಮಾಗಳು ಕೈಯಲ್ಲಿವೆ.

ಚಿತ್ರವೊಂದಕ್ಕೆ ಪ್ರಭಾಸ್ 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತಿದೆ. ಅದಕ್ಕೆ ತಕ್ಕಂತೆ ವಿಲಾಸಿ ಜೀವನಶೈಲಿ ಅಳವಡಿಸಿಕೊಂಡಿದ್ದಾರೆ. ತಮ್ಮದೇ ಯುವಿ ಕ್ರಿಯೇಷನ್ಸ್ ಸಿನಿಮಾ ನಿರ್ಮಾಣ ಸಂಸ್ಥೆ ಕೂಡ ಹೊಂದಿದ್ದಾರೆ. ಇನ್ನು ಯಂಗ್ ರೆಬಲ್ ಸ್ಟಾರ್ ಜೊತೆ ಸಿನಿಮಾ ಮಾಡಲು ನಿರ್ಮಾಪಕರು, ನಿರ್ದೇಶಕರು ಕ್ಯೂ ನಿಂತಿದ್ದಾರೆ. 'ಬಾಹುಬಲಿ' ಸರಣಿ ಬಳಿ ಬ್ಯಾಕ್ ಟು ಬ್ಯಾಕ್ 3 ಫ್ಲಾಪ್‌ ಸಿನಿಮಾಗಳನ್ನು ಕೊಟ್ಟಿದ್ದ ಪ್ರಭಾಸ್ ಕೊನೆಗೆ 'ಸಲಾರ್' ಆಗಿ ಗೆದ್ದರು.

Did Actor Prabhas buy house in London for this whopping amount

ಸದ್ಯ 'ಕಲ್ಕಿ 2898AD' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೇ 9ಕ್ಕೆ ಸಿನಿಮಾ ತೆರೆಗೆ ಬರಬೇಕಿದೆ. ಆದರೆ ಲೋಕಸಭಾ ಚುನಾವಣೆ ಹಿನ್ನೆಲೆ ರಿಲೀಸ್ ಡೇಟ್ ಮುಂದೂಡುವ ಗುಸುಗುಸು ಶುರುವಾಗಿದೆ. ಇನ್ನು ಶೂಟಿಂಗ್‌ನಿಂದ ಬಿಡುವು ಪಡೆದು ಆಗಾಗ್ಗೆ ಪ್ರಭಾಸ್ ವಿದೇಶಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. 4 ತಿಂಗಳ ಹಿಂದೆ ಪ್ರಭಾಸ್ ಮೊಣಕಾಲು ಶಸ್ತ್ರ ಚಿಕಿತ್ಸೆಗಾಗಿ ಯೂರೋಪ್‌ಗೆ ಹೋಗಿ ಬಂದಿದ್ದರು. ತಿಂಗಳ ಕಾಲ ಅಲ್ಲೇ ಬೀಡು ಬಿಟ್ಟಿದ್ದರು.

ಇತ್ತೀಚೆಗೆ ಇಟಲಿಯಲ್ಲಿ ಪ್ರಭಾಸ್ 'ಕಲ್ಕಿ 2898AD' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ದಿಶಾ ಪಟಾನಿ ಜೊತೆ ಹೆಜ್ಜೆ ಹಾಕಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೀಗೆ ಪ್ರಭಾಸ್ ಪದೇ ಪದೆ ಯೂರೋಪ್‌ಗೆ ಹೋಗುತ್ತಿರುತ್ತಾರೆ. ಅಭಿಮಾನಿಗಳ ಪ್ರೀತಿಯ ಡಾರ್ಲಿಂಗ್‌ಗೆ ಅದು ಮತ್ತೊಂದು ಮನೆ ಎನ್ನುವಂತಾಗಿಬಿಟ್ಟಿದೆ. ಸದ್ಯ ಲಂಡನ್‌ನಲ್ಲೇ ಒಂದು ಬಂಗಲೆಯನ್ನು ಪ್ರಭಾಸ್ ಕೊಂಡುಕೊಂಡಿದ್ದಾರೆ ಎಂದು ಟಾಲಿವುಡ್‌ನಲ್ಲಿ ಚರ್ಚೆ ಆಗುತ್ತಿದೆ.

Did Actor Prabhas buy house in London for this whopping amount

ಕೆಲ ದಿನಗಳ ಹಿಂದೆ ಲಂಡನ್‌ಗೆ ಹೋಗಿದ್ದ ಪ್ರಭಾಸ್ ಬಂಗಲೆಯಂತಹ ಮನೆಯೊಂದರಲ್ಲಿ ಉಳಿದುಕೊಂಡಿದ್ದರು. ಆ ಮನೆಗೆ ತಿಂಗಳಿಗೆ 60 ಲಕ್ಷ ರೂ. ಬಾಡಿಗೆ ಕೊಟ್ಟಿದ್ದರು ಎಂದು ವರದಿ ಆಗಿತ್ತು. ಆ ಮನೆ ಬಹಳ ಇಷ್ಟವಾಗಿ ಅದನ್ನು ಈಗ ಕೊಂಡುಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರ್ತಿದೆ. ಭಾರೀ ಮೊತ್ತ ಕೊಟ್ಟು ಪ್ರಭಾಸ್ ಮನೆ ಖರೀದಿದ್ದಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

8 ವರ್ಷಗಳ ಹಿಂದೆ ಪ್ರಭಾಸ್ ಇಟಲಿಯಲ್ಲಿ ವಿಲ್ಲಾ ಖರೀಸಿದಿದ್ದರು ಎಂದು ಇತ್ತೀಚೆಗೆ ಸುದ್ದಿ ಆಗಿತ್ತು. 40 ಲಕ್ಷಕ್ಕೆ ಆ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇದೀಗ ಲಂಡನ್‌ನಲ್ಲಿ ಮನೆ ಖರೀದಿಸಿರುವ ಬಗ್ಗೆ ಚರ್ಚೆ ನಡೀತಿದೆ. ನೂರಾರು ಕೋಟಿ ಸಂಭಾವನೆ ಪಡೆಯುವ ಪ್ರಭಾಸ್‌ಗೆ ಲಂಡನ್‌ನಲ್ಲಿ ಮನೆ ಖರೀದಿಸುವುದ ದೊಡ್ಡ ವಿಷಯ ಏನಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ಇನ್ನು ಪ್ರಭಾಸ್ ಸಿನಿಮಾಗಳ ವಿಚಾರಕ್ಕೆ ಬಂದರೆ 'ಕಲ್ಕಿ 2898AD' ಬಳಿಕ ಮಾರುತಿ ನಿರ್ದೇಶನದ 'ರಾಜಾ ಸಾಬ್' ತೆರೆಗೆ ಬರಲಿದೆ. ಇನ್ನು ಪ್ರಶಾಂತ್ ನೀಲ್ ಆದಷ್ಟು ಬೇಗ 'ಸಲಾರ್'-2 ಸಿನಿಮಾ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ. ಡಿಸೆಂಬರ್ 22ಕ್ಕೆ ತೆರೆಕಂಡಿದ್ದ ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. 'ಅನಿಮಲ್' ಸಿನಿಮಾ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ ಹೀರೊ ಆಗಿ 'ಸ್ಪಿರಿಟ್' ಎನ್ನುವ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದಾರೆ.

More from Filmibeat

English summary
Actor prabhas buys a new home at London?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X