ಬಾಯ್ ಫ್ರೆಂಡ್ ಪರಿಚಯಿಸಿದ್ರಾ ಕೀರ್ತಿ ಸುರೇಶ್? ಫೋಟೊಗಳು ಫುಲ್ ವೈರಲ್
ಬಹುಭಾಷಾ ನಟಿ ಕೀರ್ತಿ ಸುರೇಶ್ 'ಮಹಾನಟಿ' ಸಿನಿಮಾದಿಂದ ಬಾಲಿವುಡ್ ಮಂದಿಗೂ ಪರಿಚಿತರಾಗಿದ್ದರು. ತಮ್ಮ ಸಹಜ ಅಭಿನಯದಿಂದ ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೀರ್ತಿ ಮಿಂಚುತ್ತಿದ್ದಾರೆ. ಇನ್ನು ಮಹಾನಟಿಯ ಮದುವೆ ಸುದ್ದಿ ಪದೇ ಪದೇ ಸದ್ದು ಮಾಡುತ್ತಿರುತ್ತದೆ. ಇತ್ತೀಚೆಗೆ ತಮಿಳು ನಟ ದಳಪತಿ ವಿಜಯ್ ಜೊತೆಗೂ ಚೆನ್ನೈ ಚೆಲುವೆಯ ಹೆಸರು ತಳುಕು ಹಾಕಿಕೊಂಡಿತ್ತು.
ಕೀರ್ತಿ ಕೊನೆಯದಾಗಿ ನಾನಿ ನಟನೆಯ 'ದಸರಾ' ಸಿನಿಮಾದಲ್ಲಿ ಮಿಂಚಿದ್ದರು. ವೆನ್ನೆಲಾ ಪಾತ್ರದಲ್ಲಿ ಮೋಡಿ ಮಾಡಿದ್ದರು. ಈ ಸಿನಿಮಾ 5 ಭಾಷೆಗಳಲ್ಲಿ ಪ್ರೇಕ್ಷಕರನ್ನು ರಂಜಿಸಿತ್ತು. ಚಿತ್ರಕ್ಕೆ ಕೆಲಸ ಮಾಡಿದ್ದ ತಂತ್ರಜ್ಞರಿಗೆ ನಟಿ ಉಡುಗೊರೆ ನೀಡಿ ಎಲ್ಲರ ಗಮನ ಸೆಳೆದಿದ್ದರು. ಸದ್ಯ ಐದಾರು ಸಿನಿಮಾ ಈ ಚೆಲುವೆಯ ಕೈಯಲ್ಲಿವೆ. ತಾಯಿ ಮೇನಕ ನಟಿಯಾಗಿದ್ದರು. ತಂದೆ ಜಿ. ಸುರೇಶ್ ಕುಮಾರ್ ನಿರ್ಮಾಪಕರಾಗಿದ್ದರು. ಹಾಗಾಗಿ ಕೀರ್ತಿ ಚಿತ್ರರಂಗಕ್ಕೆ ಬರೋದು ಬಹಳ ಕಷ್ಟ ಏನು ಆಗಲಿಲ್ಲ. ಬಾಲ ನಟಿಯಾಗಿಯೇ ಬಣ್ಣ ಹಚ್ಚಿದ್ದಾರೆ.

ಮಹಾನಟಿ ಕೀರ್ತಿ ಸುರೇಶ್ ಪ್ರೀತಿಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ಇದೀಗ ವೈರಲ್ ಆಗ್ತಿದೆ. ಇತ್ತೀಚೆಗೆ ಆಕೆ ಹಂಚಿಕೊಂಡಿದ್ದ ಫೋಟೊವೊಂದು ಇಂತಾದೊಂದು ಚರ್ಚೆ ಹುಟ್ಟಾಕ್ಕಿದೆ. ಒಬ್ಬರ ಜೊತೆ ಕೀರ್ತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಆತನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಶುಭಾಶಯ ಕೋರಿದ್ದಾರೆ. ಫೋಟೊ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆಗಿರುವ ಆ ವ್ಯಕ್ತಿ ಯಾರು ಎಂದು ಕೆಲವರು ಹುಡುಕಾಟ ಶುರು ಮಾಡಿದ್ದಾರೆ.
ಆತನ ಹೆಸರು ಫರ್ಹಾನ್ ಬಿನ್ ಲೈತ್. ರಿಯಲ್ ಎಸ್ಟೇಟ್ ಉದ್ಯಮಿ. ರೆಸ್ಟೋರೆಂಟ್ ಒಡೆಯ. ಆಸ್ತಿ ಅಂತಸ್ತಿನಲ್ಲಿ ಕೀರ್ತಿಗೆ ಹೇಳಿ ಮಾಡಿಸಿದ ಜೋಡಿ, ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದಾರೆ, ಶೀಘ್ರದಲ್ಲೇ ಮದುವೆ ಕೂಡ ಸುದ್ದಿ ಕೊಡ್ತಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಈ ಹಿಂದೆ ಕೀರ್ತಿ ತನ್ನ ಕ್ಲಾಸ್‌ಮೇಟ್ ಒಬ್ಬರನ್ನು ಮದುವೆ ಆಗ್ತಾರೆ ಎನ್ನುವ ಸುದ್ದಿ ಬಂದಾಗ ಅದನ್ನು ಅವರ ತಾಯಿ ಖಂಡಿಸಿದ್ದರು. ಆಕೆ ಇನ್ನು ಸಿಂಗಲ್, ಅಂತದ್ದೇನಾದರೂ ಇದ್ದರೆ ನಾವೇ ಹೇಳ್ತೀವಿ ಎಂದಿದ್ದರು.

ಇನ್ನು ನಟಿ ಕೀರ್ತಿ ಇತ್ತೀಚೆಗೆ ಗ್ಲಾಮರ್ ಡೋಸ್ ಹೆಚ್ಚಿಸುತ್ತಿದ್ದಾರೆ. ಹಾಟ್ ಹಾಟ್ ಫೋಟೊಶೂಟ್‌ಗಳನ್ನು ದರ್ಶನ ಕೊಡುತ್ತಿದ್ದಾರೆ. ಮೊದಲೆಲ್ಲಾ ಡೀ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ ಈಗ ಕೊಂಚ ಸ್ಕಿನ್ ಶೋಗೆ ಒಗ್ಗಿಕೊಳ್ಳುತ್ತಿದ್ದಾರೆ. ಆ ಮೂಲಕ ಮತ್ತಷ್ಟು ಅವಕಾಶಗಳನ್ನು ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ಸದ್ಯ ಈ ಚೆನ್ನೈ ಚೆಲುವೆ ಕೈಯಲ್ಲಿ 5 ಸಿನಿಮಾಗಳಿವೆ. ತೆಲುಗಿನ 'ಭೋಳಾ ಶಂಕರ್' ಚಿತ್ರದಲ್ಲಿ ಚಿರಂಜೀವಿ ಸಹೋದರಿಯಾಗಿ ನಟಿಸ್ತಿದ್ದಾರೆ. ತಮಿಳಿನ 'ಮಾಮನನ್', 'ಸಿರೇನ್', 'ರಘು ತಾತ' ಹಾಗೂ 'ರಿವಾಲ್ವರ್ ರೀಟಾ' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. 'ರಘು ತಾತ' ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ.
ಇತ್ತೀಚೆಗೆ ಕೀರ್ತಿ ಇನ್‌ಸ್ಟಾ ಪೋಸ್ಟ್‌ವೊಂದು ವೈರಲ್ ಆಗಿತ್ತು. ಮುಖ ಸುಟ್ಟು ಹೋದಂತೆ ಗುರುತೇ ಸಿಗದಂತೆ ಇರುವ ಫೋಟೊಗಳನ್ನು ಶೇರ್ ಮಾಡಿದ್ದರು. ದಿಢೀರನೇ ಈ ಫೋಟೊಗಳನ್ನು ನೋಡಿದವರು ಮಹಾನಟಿಗೆ ಏನಾಯ್ತು? ಅಂತ ಒಂದು ಕ್ಷಣ ಶಾಕ್ ಆಗಿದ್ದರು. ಅಂದಹಾಗೆ ಅದು ಕೀರ್ತಿ ನಟಿಸಿದ 'ಸಾನಿ ಕಾಯಿದಂ' ಚಿತ್ರದಲ್ಲಿ ಆಕೆಯ ಲುಕ್. ಸಿನಿಮಾ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಚಿತ್ರೀಕರಣದ ಸಮಯದ ಫೋಟೊಗಳನ್ನು ತೇಲಿ ಬಿಟ್ಟಿದ್ದರು.


Click it and Unblock the Notifications











