ಪವಿತ್ರಾ ಗೌಡ ತಂಟೆಗೆ ಹೋಗಲ್ಲ ಅಂತ ಪತ್ನಿಗೆ ಮಾತು ಕೊಟ್ರಾ ದರ್ಶನ್? ಮನೆ ಸೇರುತ್ತಿದ್ದಂತೆ ಏನಿದು ಸುದ್ದಿ?
ಸುಮಾರು ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿದ್ದ ದರ್ಶನ್ ಇಂದು (ಡಿಸೆಂಬರ್ 18) ಡಿಸ್ಚಾರ್ಜ್ ಆಗಿದ್ದಾರೆ. ಕುಂಟುತ್ತಲೇ ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ಪತ್ನಿ ಹಾಗೂ ಮಗನೊಂದಿಗೆ ಮನೆಗೆ ತೆರಳಿದ್ದಾರೆ. ಆಸ್ಪತ್ರೆ ಸೇರಿದ ಬಳಿಕ ದರ್ಶನ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ, ಹಾಗೆ ಮನೆಗೆ ತೆರಳಿದ್ದಾರೆ. ದರ್ಶನ್ ಬೇಲ್‌ಗಾಗಿ ನಾಟಕ ಮಾಡಿದ್ದಾರೆ ಅಂತ ಸುದ್ದಿಯೊಂದು ಚರ್ಚೆಯಲ್ಲಿದೆ.
ಇದರ ಮಧ್ಯೆನೇ ದರ್ಶನ್ ಡಿಸ್ಚಾರ್ಜ್ ಆಗಿ ಮನೆ ಸೇರುವುದರೊಳಗೆ ಇನ್ನೊಂದು ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪತ್ನಿ ವಿಜಯಲಕ್ಷ್ಮಿ ಮುಂದೆ ದರ್ಶನ್ ಪ್ರಾಮಿಸ್ ಮಾಡಿದ್ದಾರೆ. ಇನ್ಮುಂದೆ ಪವಿತ್ರಾ ಗೌಡ ತಂಟೆಗೂ ಹೋಗುವುದಿಲ್ಲ ಎಂದಿದ್ದಾರೆ ಅನ್ನೋದು ಹಾಟ್ ಟಾಪಿಕ್ ಆಗಿಬಿಟ್ಟಿದೆ. ಸಿನಿಮಾ ವಲಯದಲ್ಲಿ ಹರಿದಾಡುತ್ತಿರುವ ಈ ಸುದ್ದಿ ನಿಜನಾ? ಇನ್ಮುಂದೆ ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿನೇ ಮಾಡೋದಿಲ್ವಾ?

ಇಂತಹದ್ದೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರು ಮಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಹೆಸರು ಕೇಳಿ ಬಂದಾಗ ಪತ್ನಿ ವಿಜಯಲಕ್ಷ್ಮಿ ಮುಂದೆ ನಿಂತು ಎಲ್ಲವನ್ನೂ ನೋಡಿಕೊಂಡಿದ್ದಾರೆ. ಜೈಲ್‌ನಲ್ಲಿ ಇರುವ ದರ್ಶನ್ ಅವರನ್ನು ಹಲವು ಬಾರಿ ಭೇಟಿ ಮಾಡಿ ಸಮಾಧಾನ ಮಾಡಿ ಬಂದಿದ್ದರು. ಈ ಪ್ರಕರಣದಿಂದ ಹೊರತರುವ ಭರವಸೆ ನೀಡಿದ್ದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ಗೆ ಅಷ್ಟು ಸುಲಭಕ್ಕೆ ಜಾಮೀನು ಸಿಗುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಸಿ ವಿ ನಾಗೇಶ್ ಅಂತಹ ಹಿರಿಯ ವಕೀಲರನ್ನು ಹಿಡಿದು ಹಂತ ಹಂತವಾಗಿ ಜಾಮೀನು ಪ್ರಕ್ರಿಯೆ ಸುಗಮವಾಗಿ ನಡೆಯುವಂತೆ ನೋಡಿದ್ದರು. ಇಷ್ಟೆಲ್ಲವೂ ಒಂದೇ ಒಂದು ಸುಳಿವನ್ನು ನೀಡದೆ ತಾಳ್ಮೆಯಿಂದ ಮಾಡಿದ್ದು ದರ್ಶನ್ ಪತ್ನಿ ವಿಜಯಲಕ್ಷ್ಮಿ.
ಈ ಹಿಂದೆ ಕೌಟುಂಬಿಕ ಸಮಸ್ಯೆ ಆದಾಗಲೂ ಪತ್ನಿ ವಿಜಯಲಕ್ಷ್ಮಿ ದೊಡ್ಡ ಮನಸ್ಸು ಮಾಡಿ ಎಲ್ಲವನ್ನೂ ಸಹಿಸಿಕೊಂಡಿದ್ದರು. ದರ್ಶನ್ ಜನಪ್ರಿಯತೆ ಹಾಗೂ ಭವಿಷ್ಯವನ್ನು ಮನಗಂಡು ನೋವನ್ನು ನುಂಗಿಕೊಂಡಿದ್ದರು. ಮತ್ತೆ ದರ್ಶನ್ ಹೆಸರು ಪವಿತ್ರಾ ಗೌಡ ಜೊತೆ ತಳುಕು ಹಾಕಿಕೊಂಡಾಗಲೂ ಏನೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಮಗನೊಂದಿಗೆ ತಮ್ಮಷ್ಟಕ್ಕೆ ತಾವು ಇದ್ದರು.
ಆದರೆ, ಪವಿತ್ರಾ ಗೌಡ ತನ್ನ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಜೊತೆಗಿನ ಫೋಟೊಗಳನ್ನು ರಿವೀಲ್ ಮಾಡಿದಾಗ ವಿಜಯಲಕ್ಷ್ಮಿ ತಿರುಗಿಬಿದ್ದಿದ್ದರು. ಬಳಿಕ ಅದೂ ಕೂಡ ಹಾಗೇ ತಣ್ಣಗಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಎರಡನೇ ಆರೋಪಿಯಾಗಿ ಜೈಲು ಸೇರಿದ ಬಳಿಕ ಮತ್ತೆ ಹೋರಾಟ ಮುಂದುವರೆಸಿದ್ದರು. ಕಾನೂನು ಹೋರಾಟದ ನಡುವೆ ದೇವರ ಮೊರೆ ಹೋಗಿದ್ದರು. ಪತಿಗೆ ಜಾಮೀನು ಸಿಗುವಂತೆ ನೋಡಿಕೊಂಡಿದ್ದರು.
ಈಗ ದರ್ಶನ್ ರೆಗ್ಯೂಲರ್ ಜಾಮೀನು ಪಡೆದು ಪತ್ನಿ ವಿಜಯಲಕ್ಷ್ಮಿ ಅವರ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ. ಈ ವೇಳೆ ಪತ್ನಿ ವಿಜಯಲಕ್ಷ್ಮಿಗೆ ಇನ್ಮುಂದೆ ಪವಿತ್ರಾ ಗೌಡ ತಂಟೆಗೆ ಹೋಗುವುದಿಲ್ಲ ಎಂದು ಪ್ರಾಮಿಸ್ ಮಾಡಿದ್ದಾರಂತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆದ್ದಿದೆ. ಹಾಗಂತ ಈ ಸುದ್ದಿಯನ್ನು ನಿಜವೆಂದು ನಂಬಬೇಕಿಲ್ಲ. ಇಂತಹ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರೇ ಹೆಚ್ಚು.


Click it and Unblock the Notifications











