ದರ್ಶನ್ ಸಂಸಾರ ಗಲಾಟೆ ; ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ಹೊರಡಿಸಿದ ಆದೇಶ ಏನು ..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುತ್ತಮುತ್ತ ಕಿರಿಕಿರಿಯಾಗುವಷ್ಟು ವಿವಾದದ ಸರಪಟಾಕಿ ಸಿಡಿಯುತ್ತಿದೆ. ದಿನಕ್ಕೊಂದು ದೂರು ದಾಖಲಾಗ್ತಿದೆ.ಮಾತು ಮನೆಯನ್ನಷ್ಟೇ ಅಲ್ಲ ಮನಸನ್ನೂ ಕೆಡಿಸಿತು ಅನ್ನುವುದಕ್ಕೆ ದರ್ಶನ್, ಅನೇಕರ ಕಣ್ಣಿಗೆ ಜ್ವಲಂತ ಉದಾಹರಣೆಯೆಂತೆ ಕಾಣ್ತಿದ್ದಾರೆ ಕೂಡ.
ಇದು ಸಾರ್ವಜನಿಕ ಕ್ಷೇತ್ರದ ಕಥೆಯಾದರೆ, ಚಾಲೆಂಜಿಂಗ್ ಸ್ಡಾರ್ ದರ್ಶನ್ ಅವರಿಗೆ ಸಾಂಸಾರಿಕ ಜೀವನದಲ್ಲಿಯೂ ಕೂಡ ನೆಮ್ಮದಿ ಇಲ್ಲದಂತಾಗಿದೆ ನಿಜಾ ದರ್ಶನ್ ಹಾಗೂ ವಿಜಯಲಕ್ಷ್ಮಿ ಆಗಾಗ ಜೊತೆಯಾಗಿ ಕಾಣಿಸಿಕೊಂಡು ನೆಮ್ಮದಿಯ ಸಂಕೇತ ನೀಡುವ ಪ್ರಯತ್ನ ಮಾಡ್ತಿದ್ದಾರಾದರೂ, ಆ ನೆಮ್ಮದಿಗೆ ಕೊಳ್ಳಿ ಇಡುವ ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾರಣ ನಿಮಗೆ ಗೊತ್ತು. ಮತ್ತೆ ಇಲ್ಲಿ ಅದನ್ನ ಪ್ರತೈಕವಾಗಿ ಹೇಳಬೇಕಿಲ್ಲ.

ಇದೆಲ್ಲದರಿಂದ ಖುದ್ದು ದರ್ಶನ್ ಈಗ ಬೇಸತ್ತು ಹೋದಂತೆ ಕಾಣ್ತಿದೆ. ಯಾರ ಸಹವಾಸವೂ ಬೇಡ ಎಂದು ದರ್ಶನ್ ತೀರ್ಮಾನಿಸಿದಂತೆ ಇದೆ. ಇದಕ್ಕೆ ಪೂರಕವಾಗಿ ರಾಜರಾಜೇಶ್ವರಿ ನಗರದ ಸುತ್ತಮುತ್ತ ದರ್ಶನ್ ಅವರ ದಾಂಪತ್ಯ ಗೀತೆಯ ಬಗ್ಗೆ ಸುದ್ದಿಯೊಂದು ಗಿರಕಿ ಹೊಡೆಯುತ್ತಿದೆ.
ಹೌದು. ದರ್ಶನ್ ಅವರ ನಿವಾಸದಿಂದ ಹಿಡಿದು, ಕನ್ನಡ ಚಿತ್ರರಂಗದ ಪಾಲಿಗೆ ಹೊಚ್ಚ ಹೊಸ ಗಾಂಧಿನಗರ ಎಂದೇ ಕರೆಸಿಕೊಳ್ಳುವ ನಾಗರಭಾವಿವರೆಗೆ ಕೇಳಿ ಬರ್ತಿರುವ ಸುದ್ದಿಯ ಪ್ರಕಾರ ದರ್ಶನ್ ತಮ್ಮ ಅಭಿಮಾನಿ ಬಣಕ್ಕೆ ಫತ್ವಾ ಹೊರಡಿಸಿದ್ದಾರೆ. ಇನ್ನೂ ಮುಂದೆ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಫೋಟೋ ಅಥವಾ ವಿಡಿಯೋ ಆಗಲಿ ಯಾವುದನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದೆಂದು ಆಜ್ಞೆಯನ್ನು ಮಾಡಿದ್ದಾರೆ.
ಈ ಸುದ್ದಿ ನಿಜಾನಾ ? ಗೊತ್ತಿಲ್ಲ. ಆದರೆ ಗಾಸಿಪ್ ಕಾಲನಿಯಲ್ಲಿ ಇಂಥದ್ದೊಂದು ಸುದ್ದಿ ಹರಿದಾಡ್ತಿದೆ. ಇನ್ನೂ ಇದೇ ಸಮಯದಲ್ಲಿ ಕೇಳಿ ಬರ್ತಿರುವ ಈ ಸುದ್ದಿ ಒಂದು ವೇಳೆ ನಿಜವೇ ಆದಲ್ಲಿ ಇದು ಉತ್ತಮ ವಾದ ಬೆಳವಣಿಗೆ ಎಂಬ ಮಾತು ಕೂಡ ಸಿನಿಮಾ ರಂಗದಲ್ಲಿ ಕೇಳಿ ಬರ್ತಿದೆ.
ಯಾಕೆಂದರೆ ನಿಮಗೆ ಗೊತ್ತು ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟ. ವರ್ಷಕ್ಕೆ ಎರಡು ಸಿನಿಮಾ ಎಂಬ ನಿಯಮವನ್ನು ಪ್ರಾಮಾಣಿಕ ವಾಗಿ ಪಾಲಿಸುತ್ತಿರುವ ಸೂಪರ್ ಸ್ಟಾರ್. ಇಂತಹ ದರ್ಶನ್ ಸಂಸಾರ ಹಾಗೂ ಬೇರೆ ವಿಚಾರಗಳಿಂದ ವಿಚಲಿತರಾದರೆ ನಷ್ಟವಾಗುವುದು ಕನ್ನಡ ಚಿತ್ರರಂಗಕ್ಕೆನೇ.
ಇನ್ನೂ ವ್ಯೆಯಕ್ತಿಕ ಬದುಕು ವ್ಯೆಯಕ್ತಿಕವಾಗಿಯೇ ಇರಬೇಕು. ಕಂಡವರ ಬಾಯಿಗೆ ಆಹಾರವಾಗಬಾರದು.ಈ ಕಾರಣಕ್ಕೆ ದರ್ಶನ್ ತೆಗೆದುಕೊಂಡ ನಿರ್ಧಾರ ಹಾಗೂ ಹೊರಡಿಸಿದ ಆದೇಶ ಎರಡೂ ಸರಿಯಾಗಿದೆ ಎಂಬ ಅಭಿಪ್ರಾಯ ಸದ್ಯಕ್ಕೆ ವ್ಯಕ್ತವಾಗ್ತಿದೆ.

ಇನ್ನೂ ಕಾಟೇರ ನಂತರ ದರ್ಶನ್ ಬದುಕು ಮತ್ತೊಂದು ಮಗ್ಗಲಿನತ್ತ ಹೊರಳಿದೆ. ಈ ಸಮಯದಲ್ಲಿ ದರ್ಶನ್ ತಮ್ಮ ಗಮನವನ್ನ ಸಿನಿಮಾದತ್ತ ಕೊಟ್ಟರೆ ಇನ್ನಷ್ಟು ಪವಾಡ ನಡೆಯುವ ಭರವಸೆ ಎಲ್ಲರಿಗೂ ಇದೆ. ಈ ನಿರೀಕ್ಷೆ ಹುಸಿಯಾಗದಿರಲಿ ಅನ್ನುವುದು ಎಲ್ಲರ ಆಶಯ. ನೀವೇನ್ ಅಂತೀರಾ..?


Click it and Unblock the Notifications











