ಮಹೇಶ್ ಬಾಬು, ಅಲ್ಲು ಅರ್ಜುನ್ ಗೆ 'ನೋ' ಎಂದುಬಿಟ್ಟ ಇಲಿಯಾನಾ.!

ಹತ್ತಿದ ಏಣಿಯನ್ನ ಒದೆಯುವುದು ಅಂತಾರಲ್ಲ ಅದು ಇದಕ್ಕೆ ಇರಬಹುದಾ.? ಗೊತ್ತಿಲ್ಲ. ಆದ್ರೆ, ಇಲಿಯಾನಾ ತೆಗೆದುಕೊಂಡಿರುವ ಹೊಸ ನಿರ್ಧಾರ ಮಾತ್ರ ತೆಲುಗು ಸಿನಿ ಅಂಗಳದ ಅಭಿಮಾನಿಗಳಿಗೆ ಕೋಪ ತರಿಸಿದೆ. ಇಲಿಯಾನಾಗೆ ಟಾಲಿವುಡ್ ಫ್ಯಾನ್ಸ್ ಛೀಮಾರಿ ಹಾಕುತ್ತಿದ್ದಾರೆ.

ಇದಕ್ಕೆ ಕಾರಣ ಏನು ಅಂದ್ರೆ.. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಅಭಿನಯದ ಚಿತ್ರಗಳಿಂದ ಇಲಿಯಾನಾಗೆ ಬುಲಾವ್ ಬಂದಿತ್ತು. ಅದಕ್ಕೆ ಏಕ್ದಂ 'ನೋ' ಎಂದುಬಿಟ್ಟಿದ್ದಾರಂತೆ ಇಲಿಯಾನಾ.

ಒಂದ್ಕಾಲದಲ್ಲಿ ಇಲಿಯಾನಾ ಗುರುತಿಸಿಕೊಂಡಿದ್ದೇ ತೆಲುಗು ಚಿತ್ರರಂಗದಲ್ಲಿ. ಆದ್ರೀಗ, ಬಾಲಿವುಡ್ ಗೆ ಹಾರಿದ್ಮೇಲೆ ದಕ್ಷಿಣ ಕಡೆ ಇಲಿಯಾನಾ ಇಳಿದು ಬಂದಿದ್ದು ಅಪರೂಪ. ಹೀಗಾಗಿ, ಇಲಿಯಾನಾ ಮೇಲೆ ಅಭಿಮಾನಿಗಳು ಮುನಿಸಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಮಹೇಶ್ ಬಾಬು ಚಿತ್ರಕ್ಕೆ ಆಫರ್

ಮಹೇಶ್ ಬಾಬು ಚಿತ್ರಕ್ಕೆ ಆಫರ್

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದ ಹಾಡೊಂದರಲ್ಲಿ ಸೊಂಟ ಬಳುಕಿಸಲು ನಟಿ ಇಲಿಯಾನಾಗೆ ಆಫರ್ ನೀಡಲಾಗಿತ್ತು. ಆ ಅವಕಾಶವನ್ನು ಇಲಿಯಾನಾ ತಿರಸ್ಕರಿಸಿದ್ದಾರೆ ಎಂದು ವರದಿ ಆಗಿದೆ. 'ಸರಿಲೇರು ನೀಕೆವ್ವರು' ಪಕ್ಕಾ ಆಕ್ಷನ್-ಕಾಮಿಡಿ ಚಿತ್ರವಾಗಿದ್ದು, ಇದರಲ್ಲಿ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ನಾಯಕಿ ಆಗಿದ್ದಾರೆ. ಪ್ರಮುಖ ಪಾತ್ರದಲ್ಲಿ ವಿಜಯಶಾಂತಿ ಕೂಡ ನಟಿಸುತ್ತಿದ್ದಾರೆ. ಇಲಿಯಾನಾ ಕೂಡ ಟೀಂಗೆ ಸೇರಿಕೊಂಡರೆ ಒಳ್ಳೆ ಮೈಲೇಜ್ ಸಿಗುತ್ತದೆ ಅಂತ ಚಿತ್ರತಂಡ ಭಾವಿಸಿತ್ತು. ಆದ್ರೆ, ಇದಕ್ಕೆ ಇಲಿಯಾನಾ ನಿರಾಕರಿಸಿದ್ದಾರಂತೆ.

ಅಲ್ಲು ಅರ್ಜುನ್ ಚಿತ್ರದಲ್ಲಿ ಅವಕಾಶ

ಅಲ್ಲು ಅರ್ಜುನ್ ಚಿತ್ರದಲ್ಲಿ ಅವಕಾಶ

ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಟಪುರಂಲೋ' ಚಿತ್ರದಲ್ಲೂ ಕಾಣಿಸಿಕೊಳ್ಳುವ ಅವಕಾಶವನ್ನು ಇಲಿಯಾನಾ ಕೈಬಿಟ್ಟಿದ್ದಾರಂತೆ ಎಂಬ ಅಂತೆ-ಕಂತೆ ಟಾಲಿವುಡ್ ನಲ್ಲಿ ಜೋರಾಗಿ ಕೇಳಿಬರುತ್ತಿದೆ. 'ಅಲಾ ವೈಕುಂಟಪುರಂಲೋ' ಅಪ್ಪಟ ಕೌಟುಂಬಿಕ ಚಿತ್ರವಾಗಿದ್ದು, ಇದರಲ್ಲಿ ಅಲ್ಲು ಅರ್ಜುನ್ ಜೊತೆಗೆ ಪೂಜಾ ಹೆಗ್ಡೆ, ಜಯರಾಮ್, ಟಬು ನಟಿಸಿದ್ದಾರೆ. ಇಲಿಯಾನಾ ಮನಸ್ಸು ಮಾಡಿದ್ದರೆ, ಈ ಚಿತ್ರತಂಡವನ್ನ ಸೇರಿಕೊಳ್ಳಬಹುದಿತ್ತು.

ಇಲಿಯಾನಾ ತಿರಸ್ಕರಿಸಿದ್ದು ಯಾಕೆ.?

ಇಲಿಯಾನಾ ತಿರಸ್ಕರಿಸಿದ್ದು ಯಾಕೆ.?

ಮೂಲಗಳ ಪ್ರಕಾರ, ನಟಿ ಇಲಿಯಾನಾಗೆ ಗ್ಲಾಮರಸ್ ರೋಲ್ಸ್ ನಲ್ಲಿ ಕಾಣಿಸಿಕೊಳ್ಳಲು ಇಷ್ಟವಿಲ್ಲ. ಪ್ರಯೋಗಾತ್ಮಕ ಮತ್ತು ಕೊಂಚ ಸೀರಿಯಸ್ ಪಾತ್ರಗಳಲ್ಲಿ ಮಿಂಚಲು ಇಲಿಯಾನಾ ಹಾತೊರೆಯುತ್ತಿದ್ದಾರೆ. ಹೀಗಾಗಿ, ಸಣ್ಣ-ಪುಟ್ಟ ಪಾತ್ರಗಳು ಮತ್ತು ಸ್ಪೆಷಲ್ ಸಾಂಗ್ ಗಳಿಗಾಗಿ ಬರುವ ಅವಕಾಶಗಳನ್ನು ಇಲಿಯಾನಾ ರಿಜೆಕ್ಟ್ ಮಾಡುತ್ತಿದ್ದಾರೆ.

ತೆಲುಗು ಸಿನಿ ಪ್ರಿಯರಿಗೆ ಬೇಸರ

ತೆಲುಗು ಸಿನಿ ಪ್ರಿಯರಿಗೆ ಬೇಸರ

ಬಣ್ಣದ ಲೋಕಕ್ಕೆ ಇಲಿಯಾನಾ ಪರಿಚಿತರಾಗಿದ್ದು ತೆಲುಗು ಸಿನಿ ಅಂಗಳದಿಂದ. ತೆಲುಗು ಮತ್ತು ತಮಿಳಿನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಇಲಿಯಾನಾ ದಿಢೀರ್ ಅಂತ ಬಾಲಿವುಡ್ ಕಡೆ ಮುಖ ಮಾಡಿದರು. ಆರು ವರ್ಷಗಳ ಕಾಲ ಹಿಂದಿ ಚಿತ್ರಗಳಲ್ಲೇ ಬಿಜಿಯಾಗಿದ್ದ ಇಲಿಯಾನಾ ಕಳೆದ ವರ್ಷ 'ಅಮರ್ ಅಕ್ಬರ್ ಆಂಥೋನಿ' ಮೂಲಕ ಟಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ದರು. ಆದ್ರೆ, ತೆಲುಗಿನಲ್ಲಿ ಮತ್ತೆ ಇಲಿಯಾನಾಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಸದ್ಯ 'ಪಾಗಲ್ಪಂತಿ' ಮತ್ತು 'ದಿ ಬಿಗ್ ಬುಲ್' ಎಂಬ ಹಿಂದಿ ಚಿತ್ರಗಳಲ್ಲಿ ಇಲಿಯಾನಾ ತೊಡಗಿದ್ದಾರೆ. ಇತ್ತ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್ ಚಿತ್ರಗಳಿಗೆ 'ನೋ' ಎಂದ ಇಲಿಯಾನಾ ವಿರುದ್ಧ ತೆಲುಗು ಸಿನಿ ಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ.

More from Filmibeat

English summary
Did Bollywood Actress Ileana say no to Mahesh Babu and Allu Arjun Films.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X