'ಕಿಸ್' ಕೊಟ್ಟ ಶ್ರೀಲೀಲಾ ಕೆನ್ನೆಗೆ ಬಾರಿಸಿದ ಬಾಲಯ್ಯ? ಸೆಟ್‌ನಲ್ಲಿ ಕಣ್ಣೀರು ಹಾಕಿದ್ಯಾಕೆ ಕನ್ನಡ ನಟಿ?

ತೆಲುಗು ನಟ ಬಾಲಕೃಷ್ಣ ತಮ್ಮ ಜಬರ್ದಸ್ತ್ ಪಾತ್ರಗಳು ಹಾಗೂ ಬಿಲ್ಡಪ್ ಸನ್ನಿವೇಶಗಳಿಂದ ಫೇಮಸ್. ನೇರ ನಡೆ ನುಡಿಯ ಬಾಲಯ್ಯ ಕೋಪ ಬಂದಾಗ ಅಭಿಮಾನಿಗಳ ಕೆನ್ನೆಗೆ ಬಾರಿಸಿದ ಘಟನೆಗಳು ಕೂಡ ನಡೆದಿದೆ. ಇದೀಗ ಕನ್ನಡ ನಟಿ ಶ್ರೀಲೀಲಾಗೂ ಬಾಲಯ್ಯ ಕಪಾಳಮೋಕ್ಷ ಮಾಡಿರುವ ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. NBK108 ಚಿತ್ರದಲ್ಲಿ ಬಾಲಕೃಷ್ಣ ಜೊತೆ ಶ್ರೀಲೀಲಾ ನಟಿಸ್ತಿದ್ದಾರೆ.

ಬಾಲಯ್ಯ ಆಪ್ತರ ಜೊತೆ ಸದಾ ಖುಷಿಖುಷಿಯಾಗಿ ಇರ್ತಾರೆ. ಆದರೆ ಕೆಲವೊಮ್ಮೆ ಇದ್ದಕ್ಕಿಂದಂತೆ ಗರಂ ಆಗಿಬಿಡ್ತಾರೆ. ಇದೀಗ ಬಾಲಕೃಷ್ಣ ಆಕ್ರೋಶಕ್ಕೆ ನಟಿ ಶ್ರೀಲೀಲಾ ಗುರಿಯಾಗಿದ್ದಾರೆ. ಇದೀಗ ಬಾಲಯ್ಯ ಶ್ರೀ ಲೀಲಾಗೆ ಕಪಾಳಮೋಕ್ಷ ಮಾಡಿದ್ದು ಆಕೆ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ 'ಕಿಸ್' ಬೆಡಗಿ ಬಾಲಯ್ಯನನ್ನು ಕಾತೆ ಕೆರಳಿಸಿದರು, ಆಕೆ ಮಾಡಿದ ತಪ್ಪಾದರೂ ಏನು? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಆದರೆ ಸಿನಿಮಾ ಸೆಟ್‌ನಲ್ಲಿ ನಡೆದ ಅಸಲಿ ಸಂಗತಿ ಬೇರೆನೆ ಇದೆ.

Did Nandamuri Balakrishna slap Sreeleela while Shooting For NBK108

ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ಬಾಲಕೃಷ್ಣ ನಟನೆಯ NBK108 ಸಿನಿಮಾ ಚಿತ್ರೀಕರಣ ಭರದಿಂದ ಸಾಗ್ತಿದೆ. ಚಿತ್ರದಲ್ಲಿ ಕಾಜಲ್ ಅಗರ್‌ವಾಲ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಶ್ರೀಲೀಲಾ ಚಿತ್ರದಲ್ಲಿ ಬಾಲಯ್ಯ ಸೋದರ ಸೊಸೆಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ ಎನ್ನಲಾಗ್ತಿದೆ. ಸನ್ನಿವೇಶವೊಂದರಲ್ಲಿ ಶ್ರೀಲೀಲಾ ಕೆನ್ನೆಗೆ ಬಾಲಕೃಷ್ಣ ಬಾರಿಸುವ ಸನ್ನಿವೇಶವನ್ನು ನಿರ್ದೇಶಕರು ಚಿತ್ರೀಕರಿಸಿದ್ದಾರೆ. ಈ ದೃಶ್ಯ ಬಹಳ ನೈಜವಾಗಿ ಮೂಡಿಬರಬೇಕು ಎಂದು ಬೆಂಗಳೂರಿ ಬೆಡಗಿ ಅಂದುಕೊಂಡಿದ್ದಾರೆ.

ಶ್ರೀಲೀಲಾಗೆ ಬಾಲಯ್ಯ ಕಪಾಳಮೋಕ್ಷ

ಚಿತ್ರೀಕರಣದ ವೇಳೆ ನಿಜವಾಗಿಯೇ ಕೆನ್ನೆಗೆ ಹೊಡೆಯುವಂತೆ ಶ್ರೀಲೀಲಾ ಬಾಲಕೃಷ್ಣ ಬಳಿ ಕೇಳಿಕೊಂಡರಂತೆ. ನಂತರ ಬಾಲಯ್ಯ ನಟಿಯ ಕೆನ್ನೆಗೆ ಜೋತಾಗಿಯೇ ಬಾರಿಸಿದ್ದರಂತೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿ ಒಂದು ಕ್ಷಣ ಸೈಲೆಂಟ್ ಆದರಂತೆ. ಸೀನ್ ಮುಗಿದ ನಂತರ ಕೂಡ ನಿರ್ದೇಶಕರು ಕಟ್ ಹೇಳಲಿಲ್ಲವಂತೆ. ಈ ಸನ್ನಿವೇಶ ಬಹಳ ನೈಜವಾಗಿ ಮೂಡಿ ಬಂದಿದೆ ಎನ್ನಲಾಗ್ತಿದೆ. ಚಿತ್ರೀಕರಣದ ಭಾಗವಾಗಿ ಶ್ರೀಲೀಲಾ ಅಳುತ್ತಾ ಹೊರಟ ಹೋದರಂತೆ. ಶ್ರೀಲೀಲಾ ಅವರ ಬದ್ಧತೆಯನ್ನು ಸೆಟ್‌ನಲ್ಲಿ ಎಲ್ಲರೂ ಕೊಂಡಾಡುತ್ತಿದ್ದಾರೆ.

Did Nandamuri Balakrishna slap Sreeleela while Shooting For NBK108

ಟಾಲಿವುಡ್‌ನಲ್ಲಿ ಶ್ರೀಲೀಲಾ ಹವಾ

ತೆಲುಗು ಚಿತ್ರರಂಗದಲ್ಲಿ ಸದ್ಯ ಶ್ರೀಲೀಲಾ ಕಾರುಬಾರು ಜೋರಾಗಿದೆ. ಏಳೆಂಟು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಬೆಂಗಳೂರು ಬೆಡಗಿ ಮಿಂಚುತ್ತಿದ್ದಾರೆ. ಬಾಲಕೃಷ್ಣ, ಪವನ್ ಕಲ್ಯಾಣ್‌ರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮಹೇಶ್ ಬಾಬು ಜೊತೆಗೂ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. 'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ಟಾಲಿವುಡ್ ಪ್ರವೇಶಿಸಿದ ಶ್ರೀಲೀಲಾ ಈಗ ಅಲ್ಲೇ ಸೆಟ್ಲ್ ಆಗಿಬಿಟ್ಟಿದ್ದಾರೆ. ರವಿತೇಜಾ ಜೊತೆ ನಟಿಸಿದ 'ಧಮಾಕ' ಸಿನಿಮಾ ಇತ್ತೀಚೆಗೆ ಹಿಟ್ ಆಗಿತ್ತು.

ತೆಲುಗಿನಲ್ಲಿ ಶ್ರೀಲೀಲಾ ಬ್ಯುಸಿ

ರಾಮ್, ನಿತಿನ್ ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿ ನಟಿಸ್ತಿದ್ದಾರೆ. 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಪವನ್ ಕಲ್ಯಾಣ್‌ಗೆ ಜೋಡಿಯಾಗಿದ್ದಾರೆ. ಮಹೇಶ್‌ಬಾಬು ಮುಂದಿನ ಚಿತ್ರದಲ್ಲೂ ನಟಿಸೋದು ಕನ್ಫರ್ಮ್ ಆಗಿದೆ. ಇನ್ನು ಇತ್ತೀಚೆಗೆ ವಿಜಯ್ ದೇವರಕೊಂಡ ನಟನೆಯ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದರು. ಜನಾರ್ಧನ ರೆಡ್ಡಿ ಮಗ ಕಿರೀಟಿ ನಟನೆಯ 'ಜ್ಯೂನಿಯರ್' ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಮಾತ್ರ ಕನ್ನಡದಲ್ಲೂ ಬರ್ತಿದೆ. ಉಳಿದಂತೆ ಬಹುತೇಕ ತೆಲುಗು ಸಿನಿಮಾಗಳಲ್ಲೇ 'ಕಿಸ್' ಮಿಂಚ್ತಿದ್ದಾರೆ.

ಕುತೂಹಲ ಕೆರಳಿಸಿದ NBK108

'ಸುಪ್ರೀಂ', 'ರಾಜಾ ದಿ ಗ್ರೇಟ್', 'ಎಫ್‌2', 'ಎಫ್‌3', 'ಸರಿಲೇರು ನೀಕೆವ್ವರು' ಸಿನಿಮಾಗಳನ್ನು ಕಟ್ಟಿಕೊಟ್ಟು ನಿರ್ದೇಶಕ ಅನಿಲ್ ರವಿಪುಡಿ ಗೆದ್ದಿದ್ದಾರೆ. ಮಾಸ್ ಜೊತೆಗೆ ಕಾಮಿಡಿ ಬ್ಲೆಂಡ್ ಮಾಡಿ ನಿರ್ದೇಶಕರು ಸಿನಿಮಾ ಮಾಡ್ತಾರೆ. ಈ ಬಾರಿ ಬಾಲಕೃಷ್ಣ ಜೊತೆ ಕೈ ಜೋಡಿಸಿದ್ದಾರೆ. 'ವೀರ ಸಿಂಹರೆಡ್ಡಿ' ನಂತರ ಬಾಲಯ್ಯ ಇನ್ನು ಹೆಸರಿಡದ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಾಜಲ್ ಅಗಲ್‌ವಾಲ್ ನಾಯಕಿಯಾಗಿ ನಟಿಸ್ತಿದ್ದು, ಶರತ್ ಕುಮಾರ್, ಅರ್ಜುನ್ ರಾಮ್‌ಪಾಲ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

More from Filmibeat

English summary
Did Nandamuri Balakrishna slap Sreeleela while Shooting For NBK108. Anil Ravipudi Directed NBK108 is bankrolled by Sahu Garapati and Harish Peddi. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X