twitter
    For Quick Alerts
    ALLOW NOTIFICATIONS  
    For Daily Alerts

    'ಸಲಾರ್' ಚಿತ್ರಕ್ಕೆ ಪ್ರಭಾಸ್ ಸಂಭಾವನೆ ಎಷ್ಟಿರಬಹುದು? ಮೊತ್ತ ಕೇಳಿ ಗಾಂಧಿನಗರ ಅಚ್ಚರಿ!

    |

    ಕೆಜಿಎಫ್ ಚಾಪ್ಟರ್ 2 ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ ಕೈಗೆತ್ತಿಕೊಂಡಿರುವ ಚಿತ್ರ ಸಲಾರ್. ಬಾಹುಬಲಿ ಮೂಲಕ ನ್ಯಾಷನಲ್ ಸ್ಟಾರ್ ಎನಿಸಿಕೊಂಡ ಪ್ರಭಾಸ್ ಈ ಚಿತ್ರಕ್ಕೆ ನಾಯಕ. ಬಾಹುಬಲಿ ಮತ್ತು ಕೆಜಿಎಫ್ ಚಿತ್ರಗಳ ಸ್ಟಾರ್ ಕಾಂಬಿನೇಷನ್ ಸಲಾರ್ ಚಿತ್ರದಲ್ಲಿ ಒಂದಾಗಿದ್ದು, ಈ ಚಿತ್ರ ಪ್ರಾಜೆಕ್ಟ್ ಮೇಲೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ.

    'ರಾಧೇ ಶ್ಯಾಮ್' ಚಿತ್ರಕ್ಕೆ 80 ಕೋಟಿ, 'ಸಲಾರ್' ಚಿತ್ರಕ್ಕೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು?'ರಾಧೇ ಶ್ಯಾಮ್' ಚಿತ್ರಕ್ಕೆ 80 ಕೋಟಿ, 'ಸಲಾರ್' ಚಿತ್ರಕ್ಕೆ ಪ್ರಭಾಸ್ ಪಡೆದ ಸಂಭಾವನೆ ಎಷ್ಟು?

    ಹಿಂದಿ ಹಾಗೂ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರಕ್ಕೆ ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ಬಂಡವಾಳ ಹಾಕುತ್ತಿದ್ದಾರೆ. ಕನ್ನಡದ ಮಟ್ಟಿಗೆ ದೊಡ್ಡ ನಿರ್ಮಾಣ ಸಂಸ್ಥೆ ಎನಿಸಿಕೊಂಡಿರುವ ಹೊಂಬಾಳೆ, ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಬಿಗ್ಗೆಸ್ಟ್ ಪ್ರೊಡಕ್ಷನ್ ಹೌಸ್ ಎಂದು ಘೋಷಿಸಿಕೊಂಡಿದೆ.

    ಪ್ರಭಾಸ್ ಮುಂದಿನ ಮೂರು ಚಿತ್ರಗಳ ಬಜೆಟ್ 1000 ಕೋಟಿ!ಪ್ರಭಾಸ್ ಮುಂದಿನ ಮೂರು ಚಿತ್ರಗಳ ಬಜೆಟ್ 1000 ಕೋಟಿ!

    ಇದೀಗ, ಸಲಾರ್ ಚಿತ್ರದಲ್ಲಿ ಪ್ರಭಾಸ್ ಪಡೆದ ಸಂಭಾವನೆ ಎಷ್ಟು ಎಂಬ ಪ್ರಶ್ನೆ ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ. ಪ್ರಭಾಸ್ ಸಂಭಾವನೆ ಎಷ್ಟಿರಬಹುದು? ಮುಂದೆ ಓದಿ..

    100 ಕೋಟಿ ಅಂತೆ ಹೌದೇ?

    100 ಕೋಟಿ ಅಂತೆ ಹೌದೇ?

    ಸಲಾರ್ ಚಿತ್ರದಲ್ಲಿ ಪ್ರಭಾಸ್ ನಟಿಸಲು ಹೊಂಬಾಳೆ ಫಿಲಂಸ್ ಬರೋಬ್ಬರಿ 100 ಕೋಟಿ ಕೊಡುತ್ತಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಚರ್ಚೆಯಾಗ್ತಿದೆ. ತೆಲುಗು, ತಮಿಳು, ಹಿಂದಿ ಹಾಗೂ ಕನ್ನಡದಲ್ಲಿ ಈ ಸಿನಿಮಾ ತಯಾರಾಗಬೇಕಿದ್ದು ಪ್ರಭಾಸ್ ಪ್ಯಾನ್ ಇಂಡಿಯಾ ಸಂಭಾವನೆ 100 ಕೋಟಿ ಇದೆ ಎಂದು ಹೇಳಲಾಗಿದೆ. ಹಾಗಾಗಿ, ಸಲಾರ್ ಚಿತ್ರಕ್ಕೆ ಡಾರ್ಲಿಂಗ್ 100 ಕೋಟಿ ಚಾರ್ಜ್ ಮಾಡಿದ್ದಾರಂತೆ.

    ಚಿತ್ರದ ಬಜೆಟ್ ಎಷ್ಟಿರಬಹುದು?

    ಚಿತ್ರದ ಬಜೆಟ್ ಎಷ್ಟಿರಬಹುದು?

    ಪ್ರಭಾಸ್ ಇಬ್ಬರಿಗೆ ನೂರು ಕೋಟಿ ಸಂಭಾವನೆ ನೀಡಿದರುವುದೇ ನಿಜವಾದರೆ ಸಲಾರ್ ಚಿತ್ರಕ್ಕಾಗಿ ನಿರ್ಮಾಪಕರು ಹೂಡುತ್ತಿರುವ ಬಂಡವಾಳ ಎಷ್ಟಿರಬಹುದು ಎಂದು ಚರ್ಚೆಯಾಗ್ತಿದೆ. ಪ್ರಭಾಸ್ ಗೆ ತಕ್ಕ ನಾಯಕಿ, ಪ್ರಮುಖ ವಿಲನ್, ತಂತ್ರಜ್ಞರು, ಪೋಷಕ ಕಲಾವಿದರು, ಶೂಟಿಂಗ್ ಹೀಗೆ ಭಾರಿ ದೊಡ್ಡ ಬಜೆಟ್ ಸಿನಿಮಾ ಇದಾಗಬಹುದು ಎಂದು ಅಂದಾಜಿಸಲಾಗಿದೆ.

    ಮಹೇಶ್ ಬಾಬು ಟು ಶ್ರೀಮುರಳಿ: 2020ರಲ್ಲಿ ಘೋಷಣೆಯಾದ ಬಿಗ್ಗೆಸ್ಟ್ ಸಿನಿಮಾಗಳುಮಹೇಶ್ ಬಾಬು ಟು ಶ್ರೀಮುರಳಿ: 2020ರಲ್ಲಿ ಘೋಷಣೆಯಾದ ಬಿಗ್ಗೆಸ್ಟ್ ಸಿನಿಮಾಗಳು

    ಪ್ರಭಾಸ್ ಚಿತ್ರಗಳ ಬಜೆಟ್ ಎಷ್ಟಿದೆ?

    ಪ್ರಭಾಸ್ ಚಿತ್ರಗಳ ಬಜೆಟ್ ಎಷ್ಟಿದೆ?

    ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ನಟಿಸುತ್ತಿರುವ ಮೂರು ಚಿತ್ರಗಳ ಬಜೆಟ್ ಒಟ್ಟು ಮಾಡಿದರೆ 1000 ಕೋಟಿ ಎಂದು ಹೇಳಲಾಗಿದೆ. ರಾಧೇ ಶ್ಯಾಮ್ ಸಿನಿಮಾದ ಬಜೆಟ್ 250 ಕೋಟಿ, ಆದಿಪುರುಷ್ ಚಿತ್ರದ ಬಜೆಟ್ 450 ಕೋಟಿ, ನಾಗ್ ಅಶ್ವಿನ್ ಚಿತ್ರದ ಬಜೆಟ್ 300 ಕೋಟಿ. ಈ ಮೂರು ಚಿತ್ರಗಳ ಪಟ್ಟು ಬಜೆಟ್ 1000 ಸಾವಿರ ಕೋಟಿ ಎಂದು ವರದಿಯಾಗಿದೆ. ಈ ಲೆಕ್ಕ ನೋಡಿದ್ರೆ ಸಲಾರ್ ಒಟ್ಟು ಬಜೆಟ್ ಬಗ್ಗೆ ಕುತೂಹಲ ಹೆಚ್ಚಾಗಿದೆ.

    ಸಾಮಾನ್ಯವಾಗಿ ಪ್ರಭಾಸ್ ಸಂಭಾವನೆ ಎಷ್ಟು?

    ಸಾಮಾನ್ಯವಾಗಿ ಪ್ರಭಾಸ್ ಸಂಭಾವನೆ ಎಷ್ಟು?

    ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ಸಂಭಾವನೆ ಭಾರಿ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ. ಏಕಂದ್ರೆ, ಮೊದಲ ಪ್ರಭಾಸ್ ಸಿನಿಮಾ ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗುತ್ತಿತ್ತು. ಆದ್ರೀಗ, ಪ್ಯಾನ್ ಇಂಡಿಯಾ ತೆರೆಕಾಣುತ್ತಿದೆ. ಟಾಲಿವುಡ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಒಂದು ಸಿನಿಮಾಗೆ 75-80 ಕೋಟಿ ಚಾರ್ಜ್ ಮಾಡ್ತಾರೆ. ಇದರ ಜೊತೆಗೆ ಬಂದ ಲಾಭದಲ್ಲಿ ಶೇಕಡಾ 10 ರಷ್ಟು ಷೇರು ನೀಡಬೇಕು ಎಂಬ ಒಪ್ಪಂದವೂ ಇದೆಯಂತೆ.

    English summary
    Did Prabhas Get a Whopping Rs 100 Crore as Remuneration for Saalar?.
    Saturday, December 19, 2020, 10:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X