Don't Miss!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- News
Namma Metro:ರೈಲ್ವೆ ಹಳಿಗೆ ಅಡ್ಡಲಾಗಿ ವೆಬ್ ಗರ್ಡರ್ ನಿರ್ಮಿಸಿ BMRCL, ಏನಿದು?
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಯಲಾಯ್ತಾ ಪ್ರಭಾಸ್ ವಿಗ್ ಸೀಕ್ರೆಟ್? ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಇತ್ತಿಚೆಗಷ್ಟೆ ಟಾಲಿವುಡ್ ನಟ ಮಹೇಶ್ ಬಾಬು ವಿಗ್ ಧರಿಸುತ್ತಾರೆ ಎನ್ನುವ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಮಹೇಶ್ ಅಭಿಮಾನಿಗಳು ಅದು ವಿಗ್ ಅಲ್ಲ ಎಂದು ಹೇಳಿದರೆ ಇತರೆ ನಟರ ಅಭಿಮಾನಿಗಳು ವಿಗ್ ಅಂತ್ಲೇ ವಾದಿಸಿದ್ದರು. ಮತ್ತೆ ಕೆಲವರು ಹೇರ್ ಟ್ರಾನ್ಸ್‌ಪ್ಲೆಂಟ್ ಮಾಡಿಸಿಕೊಂಡಿದ್ದಾರೆ ಎಂದಿದ್ದರು.
ಮಹೇಶ್ ಬಾಬು ರೀತಿಯಲ್ಲೇ ಪ್ರಭಾಸ್ ವಿಗ್ ಕೂಡ ವಿಗ್ ಧರಿಸುತ್ತಾರೆ ಎನ್ನುವ ಚರ್ಚೆ ಈಗ ಶುರುವಾಗಿದೆ. ಅದಕ್ಕೆ ಕಾರಣ ಅದೊಂದು ವಿಡಿಯೋ. ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ನೂರಾರು ಕೋಟಿ ಬಜೆಟ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಪ್ರಭಾಸ್‌ಗೆ ದೊಡ್ಡ ಅಭಿಮಾನಿ ಬಳಗ ಇದೆ. ಟಾಲಿವುಡ್‌ನ ಈ ಆರಡಿ ಕಟೌಟ್ ಲುಕ್, ಆಕ್ಟಿಂಗ್, ಖದರ್‌ಗೆ ಫಿದಾ ಆಗಿರುವ ಹುಡುಗಿಯರ ಸಂಖ್ಯೆ ದೊಡ್ಡದಿದೆ. ಇದೆಲ್ಲದರ ಮಧ್ಯೆ ಈ ವಿಗ್ ವಿಚಾರ ಭಾರೀ ಸದ್ದು ಮಾಡ್ತಿದೆ.
'ಅನ್‌ಸ್ಟಾಪಬಲ್'
ಬಾಲಕೃಷ್ಣ
ಮುಂದೆ
'ಸಲ್ಮಾನ್
ಖಾನ್
ಮದುವೆ
ಬಳಿಕ
ನನ್ನ
ಮದುವೆ'
ಎಂದು
ಪ್ರಭಾಸ್!
ನಟ ಪ್ರಭಾಸ್ ವಿಗ್ ಧರಿಸುತ್ತಾರೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ ಎಂದು ನೆಟ್ಟಿಗನೊಬ್ಬ ವಿಡಿಯೋ ಶೇರ್ ಮಾಡಿದ್ದಾನೆ. ಇದು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಸಹಜವಾಗಿಯೇ ಪ್ರಭಾಸ್ ಅಭಿಮಾನಿಗಳಿಗೆ ಇರಿಸು ಮುರಿಸು ತಂದಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಏನಿದೆ ಎನ್ನುವುದನ್ನು ನೋಡುವುದಾದರೆ.

ಪ್ರಭಾಸ್ ಹೇರ್ ಸ್ಟೈಲಿಶ್ಟ್‌ಗೆ ಏನಂದ್ರು?
ಪರ್ಸನಲ್ ಹೇರ್ ಸ್ಟೈಲಿಶ್ಟ್ ಬಂದು ಪ್ರಭಾಸ್ ಕೂದಲು ಸರಿಯಾಗಿ ಬಾಚಿ ಹೋಗುತ್ತಾನೆ. ಬಹಳ ಎಚ್ಚರಿಕೆಯಿಂದ ಪ್ರಭಾಸ್ ಹೇರ್‌ಸ್ಟೈಲ್‌ಗೆ ಫೈನಲ್ ಟಚ್ ಕೊಡುತ್ತಾನೆ. ಅದು ನೋಡಲು ವಿಗ್ ಸರಿಪಡಿಸುವಂತೆ ಇದೆ ಎನ್ನುವುದು ಕೆಲವರ ವಾದ. ಇನ್ನು ಇದಕ್ಕೆ ಪ್ರಭಾಸ್ "ನೆಕ್ಸ್ಟ್ ಟೈಮ್ ಇದನ್ನೆಲ್ಲಾ ಅಲ್ಲೇ ಮಾಡಿಬಿಡು. ಇಲ್ಲಿ ಬಂದಮೇಲೆ ಮಾಡಬೇಡ" ಎಂದಿದ್ದಾರೆ. ಇದನ್ನು ನೋಡಿದ ಕೆಲವರು, ಪ್ರಭಾಸ್ ವಿಗ್ ಧರಿಸುವುದು ನಿಜ ಎಂದು ಟ್ರೋಲ್ ಮಾಡುತ್ತಿದ್ದಾರೆ.

ಕೆಲವರಿಗೆ ಅನುಮಾನ ಶುರು
ಕೆಲ ದಿನಗಳಿಂದ ಪ್ರಭಾಸ್ ತಲೆ ಕೂದಲಿನ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸುತ್ತಿದ್ದರು. ವಿಗ್ ಧರಿಸುತ್ತಾರೆ ಎಂದು ಕೆಲವರು ಊಹಿಸಿದ್ದರು. 'ಸಾಹೋ' ಸಿನಿಮಾ ಸಮಯದಿಂದಲೂ ಪ್ರಭಾಸ್ ಹೇರ್‌ಸ್ಟೈಲ್ ಅಸಹಜವಾಗಿಯೇ ಕಾಣುತ್ತಿದೆ. ಒರಿಜಿನಲ್ ಅಲ್ಲ, ವಿಗ್ ರೀತಿ ಇದೆ ಅಲ್ವಾ ಎನ್ನುವ ಊಹಾಪೋಹ ಶುರುವಾಗಿತ್ತು. ನಿಜ ಏನೇ ಇದ್ದರೂ ಬೇರೆ ನಟರ ಅಭಿಮಾನಿಗಳು ಇದೇ ವಿಚಾರ ಇಟ್ಟುಕೊಂಡ ಪ್ರಭಾಸ್ ಅಭಿಮಾನಿಗಳನ್ನು ಗೇಲಿ ಮಾಡುತ್ತಿದ್ದರು.

ಪ್ರಭಾಸ್ ಕ್ಯಾಪ್ ಸೀಕ್ರೆಟ್ ಇದೇನಾ?
ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರಭಾಸ್ ತಲೆಗೆ ಕ್ಯಾಪ್ ತೊಟ್ಟು ಕಾಣಿಸಿಕೊಳ್ಳುತ್ತಿದ್ದರು. ಕೆಲವರು ಇದನ್ನು ಸ್ಟೈಲ್ ಎಂದುಕೊಂಡಿದ್ದರು. ಇದ್ದಕ್ಕಿದ್ದಂತೆ ಡಾರ್ಲಿಂಗ್ ಕ್ಯಾಪ್‌ಗೆ ಬೈ ಹೇಳಿ 'ಅನ್‌ಸ್ಟಾಪಬಲ್- 2' ಶೋಗೆ ಸ್ಟೈಲಿಶ್ ಲುಕ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ಪ್ರಭಾಸ್ ಹೇರ್ ಟ್ರಾನ್ಸ್‌ಪ್ಲೆಂಟ್ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದರು ಎಂದು ಕಾಣುತ್ತಿದೆ. ಅದಕ್ಕೆ ಕ್ಯಾಪ್ ತೊಟ್ಟು ಓಡಾಡುತ್ತಿದ್ದರು. ಈಗ ಟ್ರೀಟ್‌ಮೆಂಟ್ ಮುಗಿದಿರುವುದರಿಂದ ಕ್ಯಾಪ್‌ಗೆ ಗುಡ್‌ಬೈ ಹೇಳಿದ್ದಾರೆ ಎನ್ನುವುದು ಕೆಲವರ ವಾದ.

ಹೀರೊಗಳು ವಿಗ್ ಧರಿಸಿದರೆ ಏನು?
ನಾನಾ ಕಾರಣಗಳಿಂದ ಪುರುಷಕ ತಲೆ ಕೂದಲು ಉದುರುವುದು ಸರ್ವೇ ಸಾಮಾನ್ಯ. ಕೆಲವರು ಇದಕ್ಕಾಗಿ ಹೇರ್ ಟ್ರಾನ್ಸ್‌ಪ್ಲೆಂಟ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ವಿಗ್ ಧರಿಸುತ್ತಾರೆ. ಇದರಲ್ಲಿ ತಪ್ಪೇನಿದೆ. ಸಾಕಷ್ಟು ಜನ ಕಲಾವಿದರು ವಿಗ್ ಧರಿಸುವುದೇ ಗೊತ್ತೇಯಿದೆ. ಸಿನಿಮಾ ನಟರು ಕೂಡ ಮನುಷ್ಯರೇ ಅಲ್ಲವೇ. ಅವರಿಗೂ ಕೂದಲು ಉದುರಬಾರದು ಎನ್ನುವ ನಿಯಮ ಏನು ಇಲ್ಲ ಅಲ್ಲವೇ. ಪ್ರಭಾಸ್ ತಲೆ ಕೂದಲು ವಿಗ್ಗೋ, ಒರಿಜಿನಲ್ಲೋ ಅನ್ನುವುದನ್ನು ಪಕ್ಕಕ್ಕಿಟ್ಟರೂ, ಒಂದು ವೇಳೆ ಪ್ರಭಾಸ್ ವಿಗ್ ಧರಿಸಿದರೆ ನಷ್ಟ ಏನು ಅಲ್ಲವೇ.